ಆ್ಯಪ್ನಗರ

ವಿದುರನ ಪ್ರಕಾರ ಈ ಕರ್ಮಗಳಿಂದ ಸುಖ ಪ್ರಾಪ್ತಿ!

ಯಾವ ವ್ಯಕ್ತಿ ತನ್ನ ಆತ್ಮೀಯರ ಜತೆ ಕುಳಿತು ಭೋಜನ ಸವಿಯುತ್ತಾನೋ, ಆ ವ್ಯಕ್ತಿಯ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

Navbharat Times 30 Mar 2019, 1:31 pm
[This story originally published in Navbharat Times)
Vijaya Karnataka Web vidur neeti the person who follows these 3 rule will never face any problem
ವಿದುರನ ಪ್ರಕಾರ ಈ ಕರ್ಮಗಳಿಂದ ಸುಖ ಪ್ರಾಪ್ತಿ!


ವಿದುರ ನೀತಿಯ ಪ್ರಕಾರ ಮನುಷ್ಯ ಮಾಡುವ ಕೆಲ ಕರ್ಮ ಕಾರ್ಯಗಳಿಂದ ಆತ ಸುಖಿ ಜೀವನ ನಡೆಸಬಹುದು ಎಂದು ತಿಳಿಸಲಾಗಿದೆ. ಅದರನುಸಾರ ಈ ಕೆಳಗಿನ ಮೂರು ಕೆಲಸಗಳನ್ನು ಮಾಡುವವರು ಜೀವನದಲ್ಲಿ ಯಾವುದೇ ಸಂಕಷ್ಟಗಳಿರಲಾರವು ಎಂದು ನಂಬಲಾಗಿದೆ.

ಆತ್ಮೀಯರ ಜತೆ ಕುಳಿತು ಭೋಜನ ಸವಿಯುವವರು

ವಿದುರನ ಅನುಸಾರ, ಯಾವ ವ್ಯಕ್ತಿ ತನ್ನ ಆತ್ಮೀಯರ ಜತೆ ಕುಳಿತು ಭೋಜನ ಸವಿಯುತ್ತಾನೋ, ಆ ವ್ಯಕ್ತಿಯ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಒಟ್ಟಿಗೆ ಕುಳಿತು ಹಂಚಿ ತಿನ್ನುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಯುತ್ತದೆ. ಇದರಿಂದ ಸಂದಿಗ್ಧ ಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲುವ ಭಾವನೆ ವೃದ್ಧಿಯಾಗುತ್ತದೆ. ಪರಸ್ಪರ ಸಹಾಯ ಮಾಡುವ ಪ್ರವೃತ್ತಿಯಿಂದ ವ್ಯಕ್ತಿ ಯಾವುದೇ ಸಮಸ್ಯೆಗೆ ಸಿಲುಕಿದರೂ, ಸರಳವಾಗಿ ಪಾರಾಗುತ್ತಾನೆ.


ಯಾರೆಂದು ನೋಡದೆ ದಾನ ಧರ್ಮ ಮಾಡುವಾತ

ತನ್ನ ಸ್ನೇಹಿತನಲ್ಲದಿದ್ದರೂ ಕೈ ಮುಂದೆ ಚಾಚಿದವನಿಗೆ ಅಂದರೆ ಕೇಳಿದವನಿಗೆ ಹಣ ಕೊಡುವಂತಹ, ಸಹಾಯ ಮಾಡುವಂತಹ ಉದಾರ ಗುಣವುಳ್ಳವನು- ಇಂತಹ ದಯಾಳು, ಧರ್ಮಬೀರು ವ್ಯಕ್ತಿಯ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾಗುವುದಿಲ್ಲ ಎಂದು ವಿದುರ ನೀತಿ ತಿಳಿಸುತ್ತದೆ.


ಕಡಿಮೆ ನಿದ್ರಿಸುವ ವ್ಯಕ್ತಿ

ಹೆಚ್ಚೆಚ್ಚು ಕೆಲಸ ಮಾಡಿದರೂ, ಕಡಿಮೆ ಸಮಯ ನಿದ್ರಿಸುವ ವ್ಯಕ್ತಿಯ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ಅಧಿಕ ಕೆಲಸ ಮಾಡುವ ವ್ಯಕ್ತಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುತ್ತಾನೆ. ಆತ ಜೀವನದಲ್ಲಿ ಹಿಂದೆ ಬೀಳಲು ಸಾಧ್ಯವೇ ಇಲ್ಲ. ಎಂಥ ಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ