ಆ್ಯಪ್ನಗರ

ಶಕುನ ಶಾಸ್ತ್ರ: ಕನಸಿನಲ್ಲಿ ಮೃತ ಹಿರಿಯರನ್ನು ಕಂಡರೆ ಏನು ಅರ್ಥ ಗೊತ್ತಾ?

ನಮ್ಮ ಶಾಸ್ತ್ರಗಳ ಪೈಕಿ ಶಕುನ ಶಾಸ್ತ್ರವೂ ಒಂದು. ಇದು ಕೆಲವರಿಗೆ ನಂಬಿಕೆ ಎಂದೆನಿಸಿದರೆ ಇನ್ನು ಕೆಲವರಿಗೆ ಮೂಢ ನಂಬಿಕೆ ಎನಿಸಿಕೊಳ್ಳುತ್ತದೆ. ಇವುಗಳ ಮೇಲೆ ಒಂದು ಕ್ಷಕಿರಣ ಬೀರಿದರೆ ಏನಾಗುತ್ತದೆ ಬನ್ನಿ ನೋಡೋಣ.

Indiatimes 3 Jul 2019, 10:19 am
ಕನಸಿನ ಲೋಕವೇ ವಿಚಿತ್ರ. ದೈನಂದಿನ ಬದುಕಿನಲ್ಲಿ ನಾವೇನನ್ನು ಅನುಭವಿಸಿರುತ್ತೇವೋ,ಯಾವುದೋ ಕ್ಷಣದಲ್ಲಿ ಯಾವುದೊಂದಾದರೂ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿರುತ್ತೇವೋ ಅದೇ ಕನಸಿನಲ್ಲಿ ಕಾಣುತ್ತದೆ ಎಂಬುದಂತೂ ಸತ್ಯ.
Vijaya Karnataka Web dead person


ಕನಸು ಮನಸ್ಸಿನ ಕನ್ನಡಿ ಎನ್ನುತ್ತಾನೆ ಸಿಗ್ಮಂಡ್‌ ಫ್ರಾಯ್ಡ್‌. ಆದಾಗ್ಯೂ ಕನಸಿಗೂ, ಶಕುನಕ್ಕೂ ಸಂಬಂಧವಿದೆ. ಕನಸು ಭವಿಷ್ಯದ ಸೂಚಕ ಎನ್ನುತ್ತದೆ ಸ್ವಪ್ನ ಸಿದ್ಧಾಂತ.

ಯಾವ ಕಾರಣಕ್ಕೆ ಮೃತ ಜೀವಿಗಳು ನಮ್ಮನ್ನು ಕನಸಿನಲ್ಲಿ ಕಾಡುತ್ತವೆ. ಅವರೇಕೆ ನಮ್ಮನ್ನು ಎಚ್ಚರದ ಸ್ಥಿತಿಯಲ್ಲಿ ಭೇಟಿ ಮಾಡುವುದಿಲ್ಲ ಎಂದರೆ ಎಚ್ಚರದ ಸ್ಥಿತಿಯಲ್ಲಿರುವಾಗ ನಿಮ್ಮ ಪಂಚೇಂದ್ರಿಯಗಳು ಜಾಗೃತವಾಗಿರುತ್ತವೆ. ಆ ಕ್ಷಣದಲ್ಲಿ ಮನಸ್ಸಿನ ಆಗುಹೋಗುಗಳು ಲೌಕಿಕ ಬದುಕಿನೊಂದಿಗೆ ಮಿಳಿತವಾಗಿರುತ್ತವೆ. ಅದೇ ಮನಸ್ಸು ಪಂಚೇಂದ್ರಿಯಗಳು ಸ್ಥಿತವಾಗಿರುವಾಗ ಜಾಗೃತವಾಗುತ್ತದೆ. ತನ್ನೊಳಗಿನ ಸುಪ್ತ ಭಾವನೆಯನ್ನು ಕನಸಿನ ಮೂಲಕ ಹೊರಹಾಕುತ್ತದೆ.

ನೀವು ಯಾವುದೋ ಕ್ಷಣದಲ್ಲಿ ಮೃತ ವ್ಯಕ್ತಿಗಳ ಬಗ್ಗೆ ಅನುಕಂಪ ಹೊಂದಿರುತ್ತೀರಿ ಅಥವಾ ಅವರು ಮೃತರಾದ ರೀತಿಯ ಬಗ್ಗೆ ಚಿಂತಿತರಾಗಿರುತ್ತೀರಿ. ಅಂತಹದ್ದೊಂದು ಭಾವನೆ ಸುಪ್ತ ಮನಸ್ಸಿನಲ್ಲಿ ಅಡಗಿರುತ್ತದೆ.

ಇದೊಂದು ಬಗೆಯಾದರೆ ಶಾಸ್ತ್ರಗಳ ಪ್ರಕಾರ, ಮೃತ ಹಿರಿಯರು ಅಥವಾ ಆಪ್ತ ಬಂಧುಗಳು ತಮ್ಮ ಮುಂದಿನ ಪಯಣಕ್ಕೆ ನಿಮ್ಮಿಂದ ಏನೋ ಸಹಾಯ ಬಯಸಿರುತ್ತಾರೆ ಅಥವಾ ಅವರು ಮೃತ ಹೊಂದುವಾಗ ಕೆಲವೊಂದು ಅಪೇಕ್ಷೆಗಳು ಪೂರೈಸಿರುವುದಿಲ್ಲ. ಮನದ ಅಪೇಕ್ಷೆಗಳು ಪೂರ್ಣವಾಗದೇ ಹಾಗೇ ಉಳಿದರೆ ಅದು ಪ್ರೇತ ರೂಪದಲ್ಲಿ ಕಾಡುತ್ತದೆ ಎನ್ನುವ ಸಿದ್ಧಾಂತವಿದೆ.

ಇನ್ನು, ಮೃತರ ಮನೋಗತ ಈಡೇರಿಸುವ ಬಗೆ ಹೇಗೆ ಎಂಬುದಕ್ಕೆ ಕರ್ಮಸಿದ್ಧಾಂತ ಸ್ಪಷ್ಟ ಉತ್ತರ ನೀಡುತ್ತದೆ. ಮೃತರ ಪ್ರೀತ್ಯರ್ಥ ಕರ್ಮಾದಿಗಳನ್ನು ಮಾಡುವ ಮೂಲಕ, ಅವರಿಗೆ ಇಷ್ಟವಾದ ದಾನಗಳನ್ನು ಕೊಡುವ ಮೂಲಕ ಪೂರೈಸಬಹುದು ಎನ್ನುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ