ಆ್ಯಪ್ನಗರ

ಆಷಾಢ ಏಕಾದಶಿ ಎಂದರೇನು? ಈ ದಿನದ ಮಹತ್ವವೇನು ಗೊತ್ತಾ?

ಶಯನಿ ಏಕಾದಶಿಯು ಚಾತುರ್ಮಾಸದ ಆರಂಭವೆಂಬ ಪ್ರತೀತಿ ಇದೆ. ಭಕ್ತರು ವಿಷ್ಣುವಿನ ಪ್ರೀತ್ಯರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು ಈ ದಿನ ಆರಂಭಿಸುತ್ತಾರೆ. ಈ ದಿನ ಹಲವು ಭಕ್ತರು ಉಪವಾಸವನ್ನು ಆಚರಿಸಲಾಗುತ್ತದೆ. ಇದನ್ನು ಆಷಾಢ ಏಕಾಧಶಿ ಎಂದೂ ಹೇಳಲಾಗುತ್ತದೆ.

Vijaya Karnataka Web 12 Jul 2019, 10:16 am
ಇಂದು, ಶುಕ್ರವಾರ ( ಜುಲೈ 12, 2019) ಆಷಾಢ ಏಕಾದಶಿ. ಇದನ್ನು ಶಯನಿ ಏಕಾದಶಿ, ಮಹಾ ಏಕಾದಶಿ, ಪ್ರಥಮ ಏಕಾದಶಿ, ಪದ್ಮ ಏಕಾದಶಿ , ದೇವಶಯನಿ ಏಕಾದಶಿ , ದೇವಪೋಢಿ ಏಕಾದಶಿ - ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಹಿಂದೂ ಧಾರ್ಮಿಕ ಕ್ಯಾಲೆಂಡರ್‌ನಡಿ ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ ಏಕಾದಶಿ ಬರುತ್ತದೆ. ಹೀಗಾಗಿ ಇದನ್ನು ಆಷಾಢ ಏಕಾದಶಿ ಅಥವಾ ಆಷಾಢಿ ಎಂದೂ ಕರೆಯಲಾಗುತ್ತದೆ.
Vijaya Karnataka Web lord vishnu shesha


ಆಷಾಢ ಏಕಾದಶಿಯ ಮಹತ್ವ
ಈ ಪವಿತ್ರ ದಿನವು ಹಿಂದೂ ಸ್ಥಿತಿಕರ್ತ ದೇವರು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಹಲವು ಭಕ್ತರು ಇಡೀ ರಾತ್ರಿ ಪ್ರಾರ್ಥನೆ, ಭಜನೆ ಮಾಡುತ್ತಾರೆ. ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ. ಯಾವುದಾದರೂ ಆಹಾರ ಪದಾರ್ಥವನ್ನು ತ್ಯಜಿಸುವ ಬಗ್ಗೆ ಹಾಗೂ ಪ್ರತಿ ಏಕಾದಶಿ ದಿನ ಹಲವು ಭಕ್ತರು ಉಪವಾಸ ಆಚರಿಸುತ್ತಾರೆ.

ಇನ್ನು, ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಈ ದಿನ ಮಲಗಿ ನಿದ್ದೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ.

ನಂತರ, ವಿಷ್ಣುವು ನಾಲ್ಕು ತಿಂಗಳ ನಂತರ ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ. ಶಯನಿ ಏಕಾದಶಿಯು ಚಾತುರ್ಮಾಸದ ಆರಂಭವೆಂಬ ಪ್ರತೀತಿ ಇದೆ. ಭಕ್ತರು ವಿಷ್ಣುವಿನ ಪ್ರೀತ್ಯರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು ಈ ದಿನ ಆರಂಭಿಸುತ್ತಾರೆ. ಈ ದಿನ ಹಲವು ಭಕ್ತರು ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸದಲ್ಲಿ ಕೆಲವು ಅಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ.

ಮಹತ್ವ
ಪುರಾಣ ಗ್ರಂಥದಲ್ಲಿ ಸೃಷ್ಟಿಕರ್ತ-ದೇವರ ಬ್ರಹ್ಮನು ನಾರದನಿಗೆ ಹೇಳಿದಂತೆ ಕೃಷ್ಣನು ಈ ದಿನದ ಮಹತ್ವವನ್ನು ಯುಧಿಷ್ಠಿರನಿಗೆ ವಿವರಿಸಿದ್ದಾನೆ.

ಪಂಢರಪುರ ಯಾತ್ರೆ
ಈ ದಿನ ಭಕ್ತರ ಯಾತ್ರೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಪಂಢರಪುರದಲ್ಲಿ ಕೊನೆಗೊಳ್ಳುತ್ತದೆ. ಪಂಢರಪುರವು ವಿಷ್ಣುವಿನ ಸ್ಥಳೀಯ ರೂಪವಾದ ವಿಠ್ಠಲನ ಆರಾಧನೆಯ ಕೇಂದ್ರವಾಗಿದ್ದು ಚಂದ್ರಭಾಗಾ ನದಿಯ ದಂಡೆಯ ಮೇಲಿದೆ. ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ದಿನ ಇಲ್ಲಿಗೆ ಬರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ