ಆ್ಯಪ್ನಗರ

ಮಹಾಶಿವರಾತ್ರಿಯೆಂದು ಪರಶಿವನಿಗೆ ಏನನ್ನು ಅರ್ಪಿಸಬೇಕು?

ಮಹಾಶಿವರಾತ್ರಿಯ ದಿನದಂದು ಕೋಟ್ಯಂತರ ಭಕ್ತರು ಕೈಲಾಸವಾಸ ಪರಶಿವನನ್ನು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ.

Vijaya Karnataka Web 3 Mar 2019, 1:52 pm
ಮಹಾ ಶಿವರಾತ್ರಿ ಹಬ್ಬದಲ್ಲಿ ಪ್ರಳಯಕಾರಕನಾದ ಪರಶಿವನನ್ನು ಅನನ್ಯ ಶ್ರದ್ಧಾ ಮತ್ತು ಭಕ್ತಿಯಿಂದ ನಾಲ್ಕು ಯಾಮಗಳಲ್ಲಿ ಪೂಜಿಸಲಾಗುತ್ತದೆ. ಆ ದಿನದಂದು ಶಿವನಿಗೆ ಅತ್ಯಂತ ಇಷ್ಟವಾದ ಬಿಲ್ವಪತ್ರೆಯನ್ನು ಅರ್ಪಿಸಿ, ಉಪವಾಸವನ್ನೂ ಆಚರಿಸುತ್ತಾರೆ. ಆ ದಿನ, ಅಂದರೆ ನಾಳೆ ಜಾಗರಣೆಯನ್ನು ಮಾಡಿ ಶಿವಜಪ, ಭಜನೆಗಳನ್ನು ಮಾಡುತ್ತಾ ಆ ಪರಶಿವನ ಕೃಪೆಗೆ ಪಾತ್ರರಾಗುತ್ತಾರೆ.
Vijaya Karnataka Web shiva


ಮಹಾಶಿವರಾತ್ರಿಯ ದಿನದಂದು ಕೋಟ್ಯಂತರ ಭಕ್ತರು ಕೈಲಾಸವಾಸ ಪರಶಿವನನ್ನು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ.

ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ.

ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.

ಶಿವನಿಗೆ ಅತೀ ಇಷ್ಟವಾದ ಬಿಲ್ವ ಪತ್ರೆಯನ್ನು ಅರ್ಪಿಸಿ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಭಜಿಸಿದರೆ ಪಾಪಗಳು ಪರಿಹಾರವಾಗುತ್ತವೆ.

ಶಿವನಿಗೆ ಬಿಲ್ವ ಪತ್ರೆ ಅಚ್ಚುಮೆಚ್ಚು. ಭಕ್ತರು ಶಿವನಿಗೆ ಬಿಲ್ವ ಪತ್ರೆ ಇಡುವುದನ್ನು ಮರೆಯಬಾರದು.

ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ.

ಶಿವರಾತ್ರಿ ದಿನ ಉಪವಾಸ ಮಾಡಿ, ಜಾಗರಣೆ ಮಾಡುವ ಮೂಲಕ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ.

ಶಿವನಿಗೆ ಪ್ರಾರ್ಥನೆ ಸಲ್ಲಿಸುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು. ಕಾಲ ಎಂಬ ಹೆಸರನ್ನು ಪಡೆದುಕೊಂಡಿರುವ ಶಿವನು ಮುಗ್ಧ ಮತ್ತು ಸರಳ ಮತ್ತು ಭಕ್ತಿಯ ಪ್ರಾರ್ಥನೆಗೆ ಒಲಿಯುವವರು.

ಶಿವನಿಗೆ ಭಾಂಗ್ ಅಂದರೆ ಇಷ್ಟ. ಭಕ್ತರು ಇದನ್ನು ಅರ್ಪಿಸಲೇಬೇಕು.

ವಿವಾಹಿತರು ಮನಸ್ಸಿನಲ್ಲಿ ಯಾವುದೇ ಕೆಟ್ಟ ಚಿಂತೆಗಳು ಇಟ್ಟುಕೊಳ್ಳದೆ ಭಗವಂತನನ್ನು ಪ್ರಾರ್ಥಿಸಬೇಕು.

ಶಿವನಿಗೆ ಚಿನ್ನದಂತಹ ಬೆಲೆಬಾಳುವ ವಸ್ತುವನ್ನು ಅರ್ಪಿಸಬೇಕಾಗಿಲ್ಲ. ಅಂತೆಯೇ ಸರಳ ವಸ್ತುಗಳನ್ನು ದೇವರಿಗೆ ಅರ್ಪಸಿಕೊಂಡು ನೀವು ಭಗವಂತನ ಪೂಜೆಯನ್ನು ನಡೆಸಬಹುದಾಗಿದೆ.

ಶಿವನನ್ನು ಮೆಚ್ಚಿಸಲು ಹಾಲು, ಮೊಸರನ್ನು ಅರ್ಪಿಸಬಹುದಾಗಿದೆ. ಶಿವ ಲಿಂಗಕ್ಕೆ ಹಾಲನ್ನು ಅರ್ಪಿಸುವುದು ಹೆಚ್ಚು ಪವಿತ್ರವಾದುದು. ಹಾಲು ಸಿಗದೇ ಇದ್ದರೆ ನೀರು ಮಿಶ್ರಿತ ಹಾಲಿನ ಅಭಿಷೇಕವನ್ನು ನಡೆಸಬಹುದಾಗಿದೆ.

ಬಿಳಿ ಬಣ್ಣದ ಹೂವುಗಳೆಂದರೆ ಶಿವನಿಗೆ ಹೆಚ್ಚು ಪ್ರೀತಿ. ಭಗವಂತನನ್ನು ಮೆಚ್ಚಿಸಲು ಈ ಬಣ್ಣದ ಹೂವುಗಳನ್ನು ಕೂಡ ನೀವು ಅರ್ಪಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ