ಜೀವನೋತ್ಸಾಹ ಎಂಬುದು ಮನೆ ಮಂದಿಯಲ್ಲೆಲ್ಲ ಬತ್ತದ ಚಿಲುಮೆಯಾಗಿರಬೇಕು. ಫೆಂಗ್ ಶೂ ಈ ನಿಟ್ಟಿನಲ್ಲಿ ನೆರವು ನೀಡುತ್ತದೆ. ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸಿ ಜೀವನ ಉತ್ತಮ ಮಾಡಲು ಇದು ನೆರವಾಗುತ್ತದೆ.
- ಮನೆಯಲ್ಲಿ ನಿರುಪಯುಕ್ತವಾದ ವಸ್ತುಗಳನ್ನು ತುಂಬಬೇಡಿ. ಅವು ನೆಗೆಟಿವ್ ಎನರ್ಜಿ ಬೀರುತ್ತವೆ. ಹೀಗಾಗಿ ಅವುಗಳನ್ನು ಮೊದಲು ತೆರವುಗೊಳಿಸಬೇಕು.
- ಬೆಡ್ ಸೈಡ್ ಟೇಬಲ್ ಇದ್ದರೆ ಅದನ್ನು ಖಾಲಿ ಬಿಡಬೇಡಿ. ಅದರಲ್ಲಿ ಸುಂದರ ಲ್ಯಾಂಪ್ ಅಥವಾ ಸುವಾಸನೆ ಬೀರುವ ಕ್ಯಾಂಡಲ್ ಇಟ್ಟರೆ ಪಾಸಿಟಿವ್ ಎನರ್ಜಿ ತುಂಬುತ್ತದೆ.
- ಪಾಸಿಟಿವ್ ಎನರ್ಜಿ ಹೆಚ್ಚಿಸುವ ಫೆಂಗ್ಶೂ
- ಬೆಡ್ ರೂಂ ಕಿಟಕಿಗಳನ್ನು ದೀರ್ಘಕಾಲ ಮುಚ್ಚಿರಬಾರದು. ರಾತ್ರಿ ಮುಚ್ಚಿದ ಕಿಟಕಿಯನ್ನು ಬೆಳಗ್ಗೆ ಎದ್ದ ಕೂಡಲೇ ತೆರೆದರೆ ಹೊಸ ಗಾಳಿ ಒಳಗೆ ಬಂದು ಉಲ್ಲಾಸ ಮೂಡುತ್ತದೆ.
- ಕೊಠಡಿಯಲ್ಲಿನ ಎನರ್ಜಿಯನ್ನು ಶುಚಿಗೊಳಿಸಲು ಯಾವಾಗಲೂ ಹಿಮಾಲಯನ್ ಪಿಂಕ್ ಸಾಲ್ಟ್ ಲ್ಯಾಂಪ್ ಹಚ್ಚಿ. ಇದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.
- ಸಾಮಾನ್ಯವಾಗಿ ಬೆಡ್ ಕೆಳಗೆ ವಸ್ತುಗಳನ್ನು ಸಂಗ್ರಹಿಸಿಡುತ್ತೇವೆ. ಫೆಂಗ್ ಶೂ ಪ್ರಕಾರ ಬೆಡ್ ಕೆಳಗೆಯೂ ಗಾಳಿ ಚೆನ್ನಾಗಿ ಆಡಬೇಕು. ಹೀಗಾಗಿ ಬೆಡ್ ಕೆಳಗೆ ಕನಿಷ್ಠ ವಸ್ತುಗಳನ್ನು ಮಾತ್ರ ಇಡಿ.
- ಗಾಢ ವರ್ಣದ ಗೋಡೆ ಬಣ್ಣ ಅಥವಾ ಲೈಟ್ಗಳನ್ನು ತೀರಾ ಹೆಚ್ಚಾಗಿ ಬಳಸಬೇಡಿ. ಇವುಗಳು ಮಾನಸಿಕ ಉದ್ವೇಗವನ್ನು ಹೆಚ್ಚಿಸುತ್ತವೆ.
- ಹೀಗಾಗಿ ಸಾಧ್ಯವಾದಷ್ಟು ತೆಳು ಬಣ್ಣಗಳನ್ನು ಬಳಸಿ, ಆ ಮೂಲಕ ಪಾಸಿಟಿವ್ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಿಕೊಳ್ಳಿ.
- ನಿಮ್ಮ ದೇಹದಲ್ಲಿರುವ ಎನರ್ಜಿಯನ್ನು ಬೆಡ್ ರೂಂ ಹೀರಿಕೊಳ್ಳುತ್ತದೆ. ಆದ್ದರಿಂದ ಬೆಡ್ಗೆ ಕೋಪದಿಂದ ಒದೆಯುವುದು, ಹೊಡೆಯುವುದು ಮಾಡಬಾರದು.
- ದಿನ ನಿತ್ಯ ಸ್ನಾನ, ಸದಾ ಸೌಹಾರ್ದಯುತ ಮಾತುಕತೆ ನಡೆಸುತ್ತಿರುವುದು, ಇನ್ನೊಬ್ಬರಿಗೆ ಕೃತಜ್ಞರಾಗಿರುವುದನ್ನು ರೂಢಿಸಿಕೊಂಡರೆ ಮನಸ್ಸು ಶಾಂತವಾಗಿರುತ್ತದೆ.