ಆ್ಯಪ್ನಗರ

ನವಿಲುಗರಿಯಿಂದ ವಾಸ್ತು ದೋಷ ನಿವಾರಣೆ ಹೇಗೆ?

ನಮ್ಮ ಬಾಲ್ಯ, ಯೌವನದಲ್ಲಿ ಒಂದು ರೀತಿಯ ಪ್ರೇಮದ ಅನುಭೂತಿ ಉಂಟು ಮಾಡುವ ನವಿಲುಗರಿ ಮನೆ ಅಲಂಕಾರ ಮತ್ತು ಸೌಂದರ್ಯ ಸಾಧನದ ರೂಪದಲ್ಲಿಯೂ ಬಳಕೆಯಾಗುತ್ತದೆ. ಇದರಿಂದ ಮನೆಯ ಹಲವಾರು ದೋಷಗಳನ್ನೂ ನಿವಾರಿಸಬಹುದು.

Vijaya Karnataka 7 Sep 2019, 12:06 pm
- ಅರವಿಂತ್‌ ಕೆ.
Vijaya Karnataka Web peacock-feather


ಚಿಕ್ಕಂದಿನಲ್ಲಿ ನವಿಲುಗರಿಯನ್ನು ಪುಸ್ತಕ ಅಥವಾ ಜಿಯಾಮೆಟ್ರಿ ಬಾಕ್ಸ್‌ನೊಳಗಿಟ್ಟು ಅದರಿಂದ ಅದೃಷ್ಟ ಉಂಟಾಗುತ್ತದೆ ಎಂದು ಕಾದು ನೋಡುತ್ತಿದ್ದ ದಿನಗಳಿದ್ದವು. ನವಿಲುಗರಿ ಅದೃಷ್ಟದ ಸಂಕೇತ ಎಂದೇ ಹಲವರ ಭಾವನೆ.

ನವಿಲುಗರಿಯ ಚಾಮರವನ್ನು ಇಂದಿಗೂ ಕೆಲ ದರ್ಗಾಗಳಲ್ಲಿ ಹಕೀಂ ಸಾಹೇಬರು ತಲೆಯ ಮೇಲಿಟ್ಟು ಆಶೀರ್ವದಿಸುವ ಪದ್ಧತಿಯಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ನವಿಲುಗರಿಯಲ್ಲಿ ದೋಷ ನಿವಾರಣಾ ಅಂಶವಿದೆ ಎಂಬ ನಂಬಿಕೆಯಿದೆ. ಕೃಷ್ಣ ಮತ್ತು ಸುಬ್ರಹ್ಮಣ್ಯ ಸ್ವಾಮಿಗೆ ನವಿಲು ಗರಿಯೆಂದರೆ ಬಲು ಪ್ರೀತಿ.

ಅದೃಷ್ಟ ತರಲು ವಾಸ್ತು ನಿಯಮ

ಉತ್ತರ ಭಾರತದ ಕೆಲ ಮನೆಗಳಲ್ಲಿ ಇಂದಿಗೂ ವಾಸ್ತುದೋಷ ನಿವಾರಣೆಗಾಗಿ ಮನೆಯೊಳಗೆ ನವಿಲುಗರಿಯನ್ನು ಇಟ್ಟುಕೊಳ್ಳುವ ವಾಡಿಕೆಯಿದೆ. ನವಿಲು ಗರಿಯಿದ್ದಲ್ಲಿ ಹಾವಿನ ವಿಷ ಬಾಧೆ ಇರುವುದಿಲ್ಲ ಎನ್ನುವ ನಂಬಿಕೆಯೂ ಇದೆ.

ನವಿಲುಗರಿ ಹೇಗೆ ನಮ್ಮ ಪೂಜಾ ಪದ್ಧತಿಗೆ ಉಪಯೋಗವಾಗುತ್ತದೆ ಎಂದು ನೋಡೋಣ.

ಮೂರು ನವಿಲುಗರಿಗಳನ್ನು ತೆಗೆದುಕೊಳ್ಳಿ. ಅದನ್ನು ಕಪ್ಪನೆಯ ದಾರದಿಂದ ಕಟ್ಟಿಡಿ. ನಂತರ ತಾಮ್ರದ ಜಗ್‌ನಲ್ಲಿ ನೀರನ್ನು ತೆಗೆದುಕೊಳ್ಳಿ. ಓಂ ಶನೈಶ್ಚರಾಯ ನಮಃ ಮಂತ್ರವನ್ನು 21 ಬಾರಿ ಹೇಳಿಕೊಳ್ಳುತ್ತಾ ನೀರಿನೊಳಗೆ ನವಿಲುಗರಿಯನ್ನು ಅದ್ದಿ ತೆಗೆಯಿರಿ. ನಂತರ ಮಂತ್ರಿಸಿದ ನೀರನ್ನು ಮನೆಯೊಳಗೆ ನವಿಲು ಗರಿಯಿಂದ ಪ್ರೋಕ್ಷಣೆ ಮಾಡಿ. ಹೀಗೆ ಮಾಡುವುದರಿಂದ ಶನಿದೋಷ ಕಡಿಮೆಯಾಗುತ್ತದೆ.

ಎಂಟು ನವಿಲುಗರಿಯನ್ನು ತೆಗೆದುಕೊಳ್ಳಿ. ಅದನ್ನು ಬಿಳಿ ದಾರದಿಂದ ಕಟ್ಟಿ ದೇವರ ಕೋಣೆಯಲ್ಲಿಡಿ. ನಂತರ 108 ಬಾರಿ ಓಂ ಸೋಮಾಯ ನಮಃ ಮಂತ್ರವನ್ನು ಜಪಿಸಿ. ಹೀಗೆ ಮಾಡುವುದರಿಂದಲೂ ಮನೆಯೊಳಗಿನ ವಾಸ್ತುದೋಷ ನಿವಾರಣೆಯಾಗುತ್ತದೆ.

ಮನೆಯ ಪ್ರವೇಶದ್ವಾರದಲ್ಲಿ ನವಿಲುಗರಿಯನ್ನು ಬೀಸಣಿಕೆಯಂತೆ ಮಾಡಿ ಕಟ್ಟುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶವಾಗದಂತೆ ತಡೆಯಬಹುದು. ಅಷ್ಟೇ ಅಲ್ಲ ನವಿಲುಗರಿಯನ್ನು ಆಭರಣದ ಪೆಟ್ಟಿಗೆಯಲ್ಲಿ ಅಥವಾ ತಿಜೋರಿಯಲ್ಲಿ ಇಡುವುದರಿಂದ ಮನೆಗೆ ಶ್ರೇಯಸ್ಸು ಉಂಟಾಗುತ್ತದೆ. ಕುಬೇರನ ದೃಷ್ಟಿ ಬೀಳುವಂತಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ