ಆ್ಯಪ್ನಗರ

ನಿವೇಶನಕ್ಕೆ ವಾಸ್ತು ನಿಯಮ

ಮನೆ ಎಂಬುದು ಎಲ್ಲರ ಕನಸು. ಅದರಲ್ಲೂ ಸ್ವಂತದ್ದೊಂದು ನಿವೇಶನ ಖರೀದಿಸಿ ಅದರಲ್ಲಿ ತಾವಂದುಕೊಂಡತೆ ಮನೆ ಕಟ್ಟಿಸಿಕೊಳ್ಳಲು ಎಲ್ಲರೂ ಬಯಸುತ್ತಾರೆ.

Vijaya Karnataka Web 2 Apr 2016, 3:43 am
ಮನೆ ಎಂಬುದು ಎಲ್ಲರ ಕನಸು. ಅದರಲ್ಲೂ ಸ್ವಂತದ್ದೊಂದು ನಿವೇಶನ ಖರೀದಿಸಿ ಅದರಲ್ಲಿ ತಾವಂದುಕೊಂಡತೆ ಮನೆ ಕಟ್ಟಿಸಿಕೊಳ್ಳಲು ಎಲ್ಲರೂ ಬಯಸುತ್ತಾರೆ. ಆದರೆ ಇಂತಹ ನಿವೇಶನದಿಂದ ಬಯಸಿದ ಅಭಿವೃದ್ಧಿ ಕೆಲವರಿಗೆ ಆಗುವುದಿಲ್ಲ. ಇದಕ್ಕೆ ಕಾರಣ ನಿವೇಶನದ ವಾಸ್ತು. ಈ ಹಿನ್ನೆಲೆಯಲ್ಲಿ ನಿವೇಶನ ಕೊಳ್ಳುವಾಗ ಯಾವ ರೀತಿ ಎಚ್ಚರ ವಹಿಸಬೇಕು ಎಂಬ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.
Vijaya Karnataka Web vaastu for sites
ನಿವೇಶನಕ್ಕೆ ವಾಸ್ತು ನಿಯಮ


- ಮನೆ ಕಟ್ಟುವಾಗ ವಾಸ್ತುಶಿಲ್ಪ, ನಿರ್ಮಾಣ ಸಾಮಗ್ರಿಗಳ ಗುಣಮಟ್ಟದ ಜೊತೆಗೆ ನಿವೇಶನದಲ್ಲಿರುವ ಎನರ್ಜಿಯ ಬಗ್ಗೆಯೂ ಖಾತರಿ ಮಾಡಿಕೊಳ್ಳಬೇಕು.

- ನಿವೇಶನದ ಜಾಗ, ಅದರ ದಿಕ್ಕು, ಆಕಾರ, ಮಣ್ಣಿನ ಬಣ್ಣ ಮತ್ತು ಅಕ್ಕ ಪಕ್ಕದ ರಸ್ತೆಗಳು ಕೂಡ ಮುಖ್ಯ ಪಾತ್ರ ವಹಿಸುತ್ತವೆ.

- ಫಲವತ್ತಾದ ಮಣ್ಣು, ಹಣ್ಣಿನ ಗಿಡಿ, ಹೂ ಗಿಡ ಮತ್ತು ಹುಲ್ಲು ಇರುವ ನಿವೇಶನ ವಾಸಕ್ಕೆ ಅತ್ಯುತ್ತಮ.

- ಅಂತರ್ಜಲ ಸಂಪನ್ಮೂಲ ಇರುವುದು ಕಡ್ಡಾಯವಾಗಿದ್ದು, ಇಲ್ಲದಿದ್ದರೆ ಅಂತಹ ನಿವೇಶನ ಖರೀದಿ ಬೇಡ.

- ಶಾಲೆ, ದೇವಾಲಯ, ಆಶ್ರಮ, ಆಸ್ಪತ್ರೆ, ಸ್ಮಶಾನ, ತ್ಯಾಜ್ಯ ಸಂಗ್ರಹದ ಸಮೀಪದ ಜಾಗ ಬೇಡ.

- ನಿವೇಶನ ತೀರಾ ಚಿಕ್ಕದಾಗಿದ್ದರೆ ಸಮೀಪದಲ್ಲಿ ದೊಡ್ಡ ಗಾತ್ರದಲ್ಲಿ ಬೆಳೆಯುವ ಮರಗಳಾದ ಮಾವು, ಬಾಳೆ ಗಿಡ ಇರಬಾರದು.

- ನಿವೇಶನ ಸಾಕಷ್ಟು ದೊಡ್ಡದಾಗಿದ್ದರೆ ಇಂತಹ ದೊಡ್ಡ ಮರಗಳು ಮತ್ತು ಮನೆಯ ಅಂತರ ಹೆಚ್ಚಿರಬೇಕು.

- ವಾಸ್ತು ಪ್ರಕಾರ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿದ ನಿವೇಶನ ಮನೆಗೆ ಅತ್ಯುತ್ತಮ.

- ಪಶ್ಚಿಮ ಮತ್ತು ದಕ್ಷಿಣಕ್ಕೆ ಮುಖ ಮಾಡಿದ ನಿವೇಶನವಾದರೆ ಮನೆ ನಿರ್ಮಿಸುವಾಗ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು.

- ಈ ದಿಕ್ಕುಗಳಲ್ಲಿ ಮುಖ ಮಾಡಿದ ಸೈಟ್‌ನಲ್ಲಿ ಮನೆ ಕಟ್ಟುವಾಗ ಎನರ್ಜಿ ಯಾವ ಕಡೆಯಿಂದ ಬರುತ್ತದೆ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು.

- ವಾಸ್ತು ಶಾಸ್ತ್ರದ ಪ್ರಕಾರ ನಿವೇಶನ ಯಾವಾಗಲೂ ಚೌಕ ಅಥವಾ ಆಯತಾಕಾರದಲ್ಲಿಯೇ ಇರಬೇಕು.

- ನಿವೇಶನದ ಆಕಾರ ಆಯತವಾಗಿದ್ದರೆ ಅಗಲ-ಉದ್ದದ ಅನುಪಾತ 1 : 2ನ್ನು ಮೀರಬಾರದು.

- ವೃತ್ತಾಕಾರ, ಷಟ್ಕೋನ, ತ್ರಿಕೋಣ, ಅಷ್ಟಭುಜ ಆಕಾರದ ನಿವೇಶನಗಳನ್ನು ಖರೀದಿಸಬಾರದು.

- ಉತ್ತರ ದಿಕ್ಕಿನಲ್ಲಿ ಹೆಚ್ಚು ಉದ್ದ ಇರುವ ನಿವೇಶನ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

- ಮುಂಭಾಗದಲ್ಲಿ ಸ್ವಲ್ಪ ಅಗಲ ಕಡಿಮೆಯಾಗಿದ್ದು, ಹಿಂಭಾಗದಲ್ಲಿ ಅಗಲ ಹೆಚ್ಚಿರುವ ಗೋಮುಖಿ ನಿವೇಶನ ಮನೆಗೆ ಅತ್ಯುತ್ತಮ ಎಂದು ಹೇಳಲಾಗಿದೆ.

- ಆದರೂ ಇಂತಹ ಸೈಟ್‌ನಲ್ಲಿ ಮನೆ ನಿರ್ಮಿಸುವ ಮೊದಲು ವಾಸ್ತು ತಜ್ಞರ ಸಲಹೆಯನ್ನು ಪಡೆಯಬೇಕು.

- ಸಿಂಹಮುಖಿ ಅಂದರೆ ಎದುರು ಭಾಗದಲ್ಲಿ ಅಗಲ ಹೆಚ್ಚಿದ್ದು, ಹಿಂಭಾಗದಲ್ಲಿ ಅಗಲ ಕಡಿಮೆಯಿರುವ ನಿವೇಶನ ವಾಸಯೋಗ್ಯವಲ್ಲ.

- ನಿವೇಶನದ ಮಣ್ಣು ಕೆಂಪು, ಹಳದಿ, ಬಿಳಿ ಅಥವಾ ಕಪ್ಪು ಬಣ್ಣದ್ದಾಗಿರಬೇಕು.

- ಕೆಂಪು ಮಣ್ಣು ಆಡಳಿತಾತ್ಮಕ ಮತ್ತು ಕಾನೂನು ಸೇವೆ ಒದಗಿಸುವ ಉದ್ಯೋಗದಲ್ಲಿರುವವರಿಗೆ ಒಳಿತು.

- ಹಳದಿ ಮತ್ತು ಹಸಿರು ಮಣ್ಣು ಶೇರು ವ್ಯವಹಾರ, ಉದ್ಯಮ, ಲೇವಾದೇವಿ ಸೇರಿದಂತೆ ನೇರವಾಗಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದವರಿಗೆ ಅತ್ಯುತ್ತಮ.

- ಬಿಳಿ ಮಣ್ಣು ಬೌದ್ಧಿಕ ಕಸರತ್ತಿನ ಅಂದರೆ ವೈದ್ಯರು, ಎಂಜಿನಿಯರ್‌, ಟೀಚರ್‌, ಸಾಹಿತಿ, ಸಂಗೀತಗಾರರು, ಸಲಹೆಗಾರರಿಗೆ ಉತ್ತಮ.

- ಆದರೆ ಕಪ್ಪು ಬಣ್ಣದ ಹಾಗೂ ಆವೆ ಮಣ್ಣು ಮನೆ ನಿರ್ಮಾಣಕ್ಕೆ ಅಷ್ಟೇನೂ ಸೂಕ್ತವಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

- ನಿವೇಶನದ ಪೂರ್ವ ಭಾಗದಲ್ಲಿ ರಸ್ತೆಯಿದ್ದರೆ ಶ್ರೇಯಸ್ಸು ಮತ್ತು ಸಂಪತ್ತು ಕೈಗೂಡುತ್ತದೆ.

- ನಿವೇಶನದ ಪಶ್ಚಿಮ ಭಾಗದಲ್ಲಿದ್ದರೆ ಉದ್ಯಮಗಳಿಗೆ ಉತ್ತಮ ಭವಿಷ್ಯವನ್ನು ತಂದು ಕೊಡುತ್ತದೆ.

- ಉತ್ತರ ಭಾಗದಲ್ಲಿ ರಸ್ತೆಯಿರುವ ನಿವೇಶನನ ಮಹಿಳೆಯರಿಗೆ ಉತ್ತಮ ಶ್ರೇಯಸ್ಸು ತಂದು ಕೊಡುತ್ತದೆ.

- ದಕ್ಷಿಣ ಭಾಗದಲ್ಲಿ ರಸ್ತೆಯಿದ್ದರೆ ನಿವಾಸಿಗಳು ಉದ್ಯಮಿಗಳಾಗಿದ್ದರೆ ಉತ್ತಮ ಲಾಭ ತಂದು ಕೊಡುತ್ತದೆ.

-ಈಶಾನ್ಯ ಭಾಗದಲ್ಲಿ ರಸ್ತೆಯಿರುವ ನಿವೇಶನ ಅತ್ಯುತ್ತಮ ಎಂದು ಪರಿಗಣಿಸಲ್ಪಟ್ಟಿದೆ.

- ಆಗ್ನೇಯ ಭಾಗದಲ್ಲಿ ರಸ್ತೆಯಿರುವ ನಿವೇಶನ ಕೂಡ ಉತ್ತಮ ಫಲಿತಾಂಶ ನೀಡುತ್ತದೆ.

- ನಿವೇಶನದ ನೈರುತ್ಯ ದಿಕ್ಕಿನಲ್ಲಿ ರಸ್ತೆಯಿದ್ದರೆ ನಿವಾಸಿಗಳಿಗೆ ಅಷ್ಟೇನೂ ಉತ್ತಮ ಫಲಿತಾಂಶ ನೀಡುವುದಿಲ್ಲ.

- ವಾಯುವ್ಯ ಭಾಗದಲ್ಲಿ ರಸ್ತೆಯಿರುವ ನಿವೇಶನದಲ್ಲಿ ವಾಸ ಮಾಡುವ ನಿವಾಸಿಗಳಿಗೆ ಉತ್ತಮ ಫಲಿತಾಂಶ ಸಿಗುತ್ತದೆ.

- ಮೂರು ಕಡೆ ರಸ್ತೆ ಹೊಂದಿರುವ ಅಷ್ಟೇನೂ ಉತ್ತಮವಲ್ಲ. ಆದರೆ ಇನ್ನೊಂದು ದಿಕ್ಕಿನಲ್ಲಿ ಪ್ಯಾಸೇಜ್‌ ನಿರ್ಮಿಸುವ ಮೂಲಕ ಉತ್ತಮ ಫಲಿತಾಂಶ ಕಾಣಬಹುದು.

- ನಾಲ್ಕು ದಿಕ್ಕಿನಲ್ಲೂ ರಸ್ತೆಗಳಿರುವ ನಿವೇಶನ ಆತ್ಯುತ್ತಮ ಆಯ್ಕೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

- ಡೆಡ್‌ ಎಂಡ್‌ ರಸ್ತೆಯಲ್ಲಿರುವ ನಿವೇಶನ ಉತ್ತಮವಲ್ಲ. ಇದಕ್ಕಾಗಿ ನಿವೇಶನದ ಅಂತ್ಯದವರೆಗೆ ರಸ್ತೆಯನ್ನು ವಿಸ್ತರಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ