ಆ್ಯಪ್ನಗರ

Vara Bhavishya: ಕುಂಭ ರಾಶಿಯವರೇ ನೀವು ಹಮ್ಮಿಕೊಂಡ ಕೆಲಸಗಳಲ್ಲಿ ಯಶಸ್ಸು, ಕೀರ್ತಿ ಸಿಗುವವು; ನಿಮ್ಮ ಈ ವಾರದ ಭವಿಷ್ಯ ನೋಡಿ

ದ್ವಾದಶ ರಾಶಿಗಳಿಗೆ ಸಂಬಂಧಪಟ್ಟಂತೆ ಡಿಸೆಂಬರ್‌ 29ರಿಂದ ಜನವರಿ 4ರವರೆಗಿನ ರಾಶಿ ಭವಿಷ್ಯ

Vijaya Karnataka Web 29 Dec 2019, 5:53 am
ಹನ್ನೆರಡು ರಾಶಿಗಳಿಗೂ ಸಂಬಂಧಪಟ್ಟಂತೆ ಗ್ರಹಗತಿಗಳು ಬದಲಾದಾಗ ವ್ಯಕ್ತಿಯ ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನ, ಆರೋಗ್ಯದಲ್ಲಿ ಪ್ರತಿದಿನವೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಡಿಸೆಂಬರ್‌ 29ರಿಂದ ಜನವರಿ 4ರವರೆಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹನ್ನೆರಡು ರಾಶಿಗಳ ಈ ವಾರದ ರಾಶಿಭವಿಷ್ಯ ಇಲ್ಲಿದೆ ನೋಡಿ.
Vijaya Karnataka Web kannada weekly horoscope from 29 12 2019 to 4 1 2020
Vara Bhavishya: ಕುಂಭ ರಾಶಿಯವರೇ ನೀವು ಹಮ್ಮಿಕೊಂಡ ಕೆಲಸಗಳಲ್ಲಿ ಯಶಸ್ಸು, ಕೀರ್ತಿ ಸಿಗುವವು; ನಿಮ್ಮ ಈ ವಾರದ ಭವಿಷ್ಯ ನೋಡಿ


ಮೇಷ ರಾಶಿ

ನಿಮ್ಮನ್ನು ಸತ್ವಪರೀಕ್ಷೆಗೆ ಒಳಪಡಿಸಲು ಕೆಲವರು ಕಾದಿರುವರು. ರಾಜಕೀಯ ಬದಲಾವಣೆಯಿಂದ ನಿಮ್ಮ ಮನಸ್ಸಿಗೆ ಮಂಕು ಕವಿಯುವುದು. ನೀವು ನಿಮ್ಮ ಸಿದ್ಧಾಂತದ ಕುರಿತು ನಿಶ್ಚಿತ ನಿಲುವು ತಳೆಯುವುದು ಒಳ್ಳೆಯದು. ನಿಮ್ಮ ಧೋರಣೆಗೆ ಹೆಚ್ಚಿನ ಸ್ವಾಗತ ಸಿಗುವ ಸಾಧ್ಯತೆ ಇದೆ. ಮಹತ್ತರ ಯೋಜನೆಯೊಂದು ನಿಮ್ಮನ್ನು ಅರಸಿ ಬರಲಿದೆ. ಹಣಕಾಸು ಉತ್ತಮವಾಗಿರುವುದು.

ಮೇಷ ರಾಶಿಯವರು ಆರ್ಥಿಕವಾಗಿ ಪ್ರಗತಿ ಹೊಂದುವ ವರ್ಷ 2020: ನಿಮ್ಮ ವಾರ್ಷಿಕ ಭವಿಷ್ಯ ಇಲ್ಲಿದೆ ನೋಡಿ

ವೃಷಭ ರಾಶಿ

ನಿಮ್ಮ ಆದಾಯ ಹೆಚ್ಚಾಗಲಿದೆ. ಅಗತ್ಯವಿದ್ದಷ್ಟು ಖರ್ಚು ಮಾಡಿ ಹಣ ಉಳಿತಾಯದ ಕಡೆ ಗಮನ ಹರಿಸಿ. ಸರ್ಕಾರಿ ನೌಕರರು, ಸಹೋದ್ಯೋಗಿಗಳೊಂದಿಗೆ ವೃಥಾ ಮನಸ್ತಾಪದಿಂದ ಆರೋಪ ಎದುರಿಸಬೇಕಾಗುವುದು. ವ್ಯಾಪಾರದಲ್ಲಿ ಉತ್ತಮ ಪ್ರಗತಿಯಿದ್ದರೂ ಪಾಲುದಾರಿಕೆ ವ್ಯವಹಾರದಲ್ಲಿ ಹೊಂದಾಣಿಕೆ ಅತಿ ಮುಖ್ಯವಾಗಿರುತ್ತದೆ. ಬಂಧುಗಳೊಂದಿಗೆ ಮನಸ್ತಾಪ ಮಾಡಿಕೊಳ್ಳಬೇಡಿ.

ಪರಿಶ್ರಮ ಪಟ್ಟರೆ ವೃಷಭ ರಾಶಿಯವರಿಗೆ 2020 ಅತ್ಯುತ್ತಮ ವರ್ಷ; ನಿಮ್ಮ ವಾರ್ಷಿಕ ಭವಿಷ್ಯ ಇಲ್ಲಿದೆ ನೋಡಿ

ಮಿಥುನ ರಾಶಿ

ವಿನಾಕಾರಣ ಅಪವಾದ ನಿಮ್ಮ ಬೆನ್ನು ಹತ್ತುವುದು. ಮಾನಸಿಕ ಕಿರಿಕಿರಿ ಮತ್ತು ಒತ್ತಡ ಹೆಚ್ಚಾಗುವವು. ರುದ್ರದೇವರನ್ನು ಭಜಿಸಿ. ಬೇರೆಯವರಿಗೆ ಕೊಟ್ಟ ಹಣ ಭಾಗಶಃ ನಿಮ್ಮ ಕೈ ಸೇರಲಿದೆ. ಜೀವನದಲ್ಲಿ ದ್ವಂದ್ವ ನೀತಿಯಿಂದ ನಿಮ್ಮ ಸ್ಥಾನಮಾನಗಳಲ್ಲಿ ವ್ಯತ್ಯಾಸ ಕಂಡು ಬರುವುದು. ಸರ್ಕಾರದಿಂದ ಸಾಹಿತಿಗಳಿಗೆ ವಿಶೇಷ ಸನ್ಮಾನವಿದೆ. ದೇವಿ ಸ್ತೋತ್ರ ಪಾರಾಯಣ ಮಾಡಿ.

ಮಿಥುನ ರಾಶಿಯವರು ದೌರ್ಬಲ್ಯಗಳನ್ನು ಅರಿತು ಮುನ್ನಡೆದರೆ 2020ರಲ್ಲಿ ಯಶಸ್ಸು ಖಂಡಿತ: ನಿಮ್ಮ ವಾರ್ಷಿಕ ಭವಿಷ್ಯ ನೋಡಿ

ಕಟಕ ರಾಶಿ

ಮನೆ ಕಟ್ಟುವ ಅಥವಾ ಆಸ್ತಿ ಖರೀದಿ ವಿಚಾರದಲ್ಲಿ ಆರ್ಥಿಕ ಮೂಲ ಕಂಡುಕೊಂಡು ಮುಂದುವರೆಯಿರಿ. ಬಂಧುಮಿತ್ರರಿಗೆ ಶಕ್ತಿ ಮೀರಿ ಸಹಾಯ ಮಾಡಬೇಡಿ. ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ. ಆಸ್ತಿಗೆ ಸಂಬಂಧಿಸಿದ ಕೋರ್ಟ್‌ ವ್ಯವಹಾರದಲ್ಲಿ ಅನಿರೀಕ್ಷಿತ ತಿರುವಿನಿಂದ ನಿಮ್ಮ ಆತ್ಮಸ್ಥೈರ್ಯ ಕುಗ್ಗಲಿದೆ. ಆಪತ್ಕಾಲದಲ್ಲಿ ಮನೆಯ ಹಿರಿಯರಿಂದ ಅನುಕೂಲವಾಗುವುದು.

ಕಟಕ ರಾಶಿಯವರಿಗೆ 2020ರ ಆರಂಭವು ವೃತ್ತಿಜೀವನದಲ್ಲಿ ಶುಭಕಾಲ; ದ್ವಾದಶ ರಾಶಿಗಳ ವಾರ್ಷಿಕ ಭವಿಷ್ಯ ನೋಡಿ

ಸಿಂಹ ರಾಶಿ

ವೈಯಕ್ತಿಕ ಸಾಲಕ್ಕೆ ನೀವು ಬ್ಯಾಂಕ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆದು ನಿಮಗೆ ಆರ್ಥಿಕ ನೆರವು ಸಿಗುವುದು. ರಾಜಕಾರಣಿಗಳಿಗೆ ಪಕ್ಷದ ವರಿಷ್ಠರಿಂದ ಜವಾಬ್ದಾರಿ ವಹಿಸಲು ಆದೇಶ ಬರುವುದು. ಈ ಹಿಂದೆ ಹೂಡಿದ್ದ ಬಂಡವಾಳ ಮರಳಿ ಬರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಉದಾಸೀನ ಬೇಡ. ಉಷ್ಣ ಸಂಬಂಧಿ ಸಮಸ್ಯೆ ನಿಮಗೆ ಕಾಡುವುದು. ಹಣಕಾಸಿನ ವ್ಯವಹಾರದಲ್ಲಿ ಸ್ಥಿರತೆ ಕಂಡುಬರುವುದು.

ಕನ್ಯಾ ರಾಶಿ

ಸದ್ಯಕ್ಕೆ ಸಾಲ ಮಾಡಬೇಡಿ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಅನುಕೂಲವಾಗುವುದು. ಆಸ್ತಿ, ಮನೆ ವಿಚಾರದಲ್ಲಿ ನಿಮಗೆ ದೈವಬಲ ಇದೆ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಕೆಲವು ಖಾಸಗಿ ಕಂಪನಿಯಲ್ಲಿರುವವರು ಉತ್ತಮ ಪ್ರಗತಿ ಕಾಣುವರು. ಇದ್ದಕ್ಕಿದ್ದಂತೆ ಬೆಂಬಲಿಗರ ಗುಂಪು ನಿಮ್ಮ ಜೊತೆಯಲ್ಲಿ ನಾವಿದ್ದೇವೆ ಎಂದು ಧೈರ್ಯ ತುಂಬುವರು. ಇದರಿಂದ ನೀವು ಖುಷಿಗೊಳ್ಳುವಿರಿ

ತುಲಾ ರಾಶಿ

ನಿಮ್ಮ ಸ್ವಂತ ನಿರ್ಧಾರಗಳಿಂದ ಹೆಚ್ಚಿನ ಫಲವಿದೆ. ಸೋದರನ ಮಗನ ವಿದ್ಯಾಭ್ಯಾಸದಲ್ಲಿದ್ದ ಆತಂಕ ದೂರವಾಗುವುದು. ನವವಿವಾಹಿತರು ಪರಸ್ಪರ ಕ್ಷಮಾಗುಣ ಬೆಳೆಸಿಕೊಳ್ಳುವುದು ಒಳ್ಳೆಯದು. ಒಣ ಹಠಮಾರಿತನದಿಂದ ಪ್ರಯೋಜನವಿಲ್ಲ. ಸಂಗಾತಿಯು ನಿಮ್ಮ ಮಾತು ಕೇಳಬೇಕೆಂಬ ಧೋರಣೆ ಬಿಟ್ಟುಬಿಡಿ. ನಿಮ್ಮ ಸ್ವಭಾವವೇ ನಿಮಗೆ ಮುಳುವಾಗುವುದು.

ವೃಶ್ಚಿಕ ರಾಶಿ

ಸಹೋದ್ಯೋಗಿಗಳ ತಪ್ಪಿನಿಂದ ನೀವು ನಿಂದನೆಗೆ ಒಳಗಾಗುವಿರಿ. ಖಾಸಗಿ ಕಂಪನಿಯಿಂದ ನಿಮಗೆ ಬರಬೇಕಾದ ಹಣಕ್ಕೆ ತೊಂದರೆ ಎದುರಾಗುವುದು. ಕಾರ್ಮಿಕರಿಗೆ ಕೆಲಸದಿಂದ ಲಾಭವಿದೆ. ತೆರಿಗೆ ಸಲಹೆಗಾರರ ಸಾಂತ್ವನದಿಂದ ನಿಮ್ಮ ಬಾಳಿನಲ್ಲಿ ಹೊಸ ಚಿಗುರು ಮೂಡುವುದು. ಮಿತಿ ಮೀರುತ್ತಿರುವ ಗೃಹ ನಿರ್ವಹಣೆಯಿಂದ ಮನಸ್ಸಿಗೆ ಕಿರಿಕಿರಿ ಆಗುವುದು.

ಧನುಸ್ಸು ರಾಶಿ

ನೀವು ಬೇರೆಯವರ ಮಾತು ನಂಬಿ ಕುಟುಂಬ ಸದಸ್ಯರ ಮೇಲೆ ಅಪನಂಬಿಕೆ ಉಂಟಾಗುವ ಸಾಧ್ಯತೆ ಇದೆ. ಸತ್ಯ ತಿಳಿಯುವ ಮುಂಚೆಯೇ ಅಪನಂಬಿಕೆ ತಾಳುವುದು ಉತ್ತಮವಲ್ಲ. ಅನಗತ್ಯ ಚಿಂತೆಗಳಿಂದ ಅನಾರೋಗ್ಯ ಕಾಡುವುದು. ಅಲಂಕಾರಿಕ ವಸ್ತುಗಳ ಮಾರಾಟದಿಂದ ಅನುಕೂಲವಿದೆ. ಪಾರಂಪರಿಕ ಔಷಧ ವ್ಯಾಪಾರಿಗಳಿಗೆ ಅಧಿಕ ಲಾಭ ಸಿಗುವುದು.

ಮಕರ ರಾಶಿ

ವಿದೇಶದಲ್ಲಿರುವ ಮಗನ ನೌಕರಿ ಬದಲಾವಣೆಯಿಂದ ಸಂಬಳ ಜಾಸ್ತಿ ಸಿಗುವುದು. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಪ್ರೇಮಿಗಳು ವಿಷಯ ಮುಚ್ಚಿಡದೆ ಹಿರಿಯರ ಗಮನಕ್ಕೆ ತಂದು ದಾಂಪತ್ಯ ಜೀವನಕ್ಕೆ ಕಾಲಿಡುವುದು ಒಳ್ಳೆಯದು. ಸರ್ಕಾರಿ ಗುತ್ತಿಗೆದಾರರಿಗೆ ಬಾಕಿ ಹಣ ಸಂಪೂರ್ಣ ಸಂದಾಯವಾಗುತ್ತದೆ. ಆಫೀಸ್‌ ವಾತಾವರಣ ನಿಮಗೆ ಕಿರಿಕಿರಿಯುಂಟು ಮಾಡುವುದು.

ಕುಂಭ ರಾಶಿ

ನೀವು ಹಮ್ಮಿಕೊಂಡ ಕೆಲಸಗಳಲ್ಲಿ ಯಶಸ್ಸು, ಕೀರ್ತಿ ಸಿಗುವವು. ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ಸಮಾಧಾನ ಸಿಗುವುದು. ಸಮಾಜ ಬಾಂಧವರಿಂದ ಗೌರವ ಮತ್ತು ಸನ್ಮಾನ ಸಿಗುವವು. ನಿಮ್ಮ ಸಂಶೋಧನಾ ಪ್ರಬಂಧಕ್ಕೆ ಸರ್ಕಾರದಿಂದ ಆರ್ಥಿಕ ನೆರವು ದೊರೆಯುವುದು. ಅದಕ್ಕೆ ಸಂಬಂಧಪಟ್ಟ ಸಂಶೋಧನಾ ಪತ್ರ, ದಾಖಲೆ ಕಾಪಾಡಿಕೊಳ್ಳಿ. ಕೌಟುಂಬಿಕ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಿ.

ಮೀನ ರಾಶಿ

ನಿಮ್ಮ ಸಹಾಯ ಕೋರಿ ಬರಲಿರುವ ನಯವಂಚಕರ ಮಾತಿಗೆ ಮರುಳಾಗಬೇಡಿ. ಪಾಲುದಾರರೊಂದಿಗೆ ಆರಂಭಿಸಿದ ವ್ಯವಹಾರದಿಂದ ಲಾಭವಿದೆ. ಚಾಡಿ ಮಾತಿನಿಂದ ಕೌಟುಂಬಿಕ ನೆಮ್ಮದಿ ಹಾಳಾಗುವುದು. ಮಡದಿ ಮಕ್ಕಳಿಗೆ ಹೆಚ್ಚಿನ ಖರ್ಚಾಗುವುದು. ಹಿರಿಯರು ನಿಮಗೆ ಆಶೀರ್ವದಿಸಿ ಕೊಟ್ಟ ಹಣ ಪಡೆಯಲು ಕೆಲವರು ಹೊಂಚು ಹಾಕುತ್ತಿರುವರು. ಈ ಬಗ್ಗೆ ಜಾಗ್ರತೆ ಅಗತ್ಯ.

ಮುಂದಿನ ಲೇಖನ