ಆ್ಯಪ್ನಗರ

Vara Bhavishya: ಮಿಥುನ ರಾಶಿಯವರು ಈ ವಾರ ಅನಗತ್ಯ ವೆಚ್ಚಗಳ ಬಗ್ಗೆ ಜಾಗರೂಕರಾಗಿರಿ..!

ಗ್ರಹಗತಿಗಳು ಬದಲಾದಾಗ ವ್ಯಕ್ತಿಯ ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನ, ಆರೋಗ್ಯದಲ್ಲಿ ಪ್ರತಿದಿನವೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಏಪ್ರಿಲ್‌ 6ರಿಂದ ಏಪ್ರಿಲ್‌ 12ರವರೆಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹನ್ನೆರಡು ರಾಶಿಗಳ ಈ ವಾರದ ಸಾಪ್ತಾಹಿಕ ರಾಶಿಭವಿಷ್ಯ ಇಲ್ಲಿದೆ ನೋಡಿ.

Vijaya Karnataka Web 6 Apr 2020, 1:38 pm
ಗ್ರಹಗಳ ಹಾಗೂ ನಕ್ಷತ್ರಗಳ ಸ್ಥಾನವು ಜನಜೀವನದ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದಾಗಿ ವಿಶ್ಲೇಷಣೆಯನ್ನು ಮಾಡಲಾಗುತ್ತದೆ ಗ್ರಹಗಳ ಸ್ಥಾನಗಳು ಆಯಾಯ ರಾಶಿಗಳಲ್ಲಿ ಬದಲಾದಾಗ ಗ್ರಹಪ್ರಭಾವವು ವ್ಯಕ್ತಿಯ ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನದಲ್ಲಿ ಪರಿಣಾಮ ಬೀರುತ್ತದೆ. ವ್ಯಕ್ತಿಯ ಜೀವನದದಲ್ಲಿ ದಿನನಿತ್ಯ ಹಲವು ಬದಲಾವಣೆಗಳು ಉಂಟಾಗುತ್ತದೆ.ಹನ್ನೆರಡು ರಾಶಿಗಳಿಗೂ ಸಂಬಂಧಪಟ್ಟಂತೆ ಗ್ರಹಗತಿಗಳು ಬದಲಾದಾಗ ವ್ಯಕ್ತಿಯ ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನ, ಆರೋಗ್ಯದಲ್ಲಿ ಪ್ರತಿದಿನವೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಏಪ್ರಿಲ್‌ 6ರಿಂದ ಏಪ್ರಿಲ್‌ 12ರವರೆಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹನ್ನೆರಡು ರಾಶಿಗಳ ಈ ವಾರದ ಸಾಪ್ತಾಹಿಕ ರಾಶಿಭವಿಷ್ಯ ಇಲ್ಲಿದೆ ನೋಡಿ.
Vijaya Karnataka Web kannada weekly horoscope from 6 4 2020 to 12 4 2020 this week is good for these rashi people
Vara Bhavishya: ಮಿಥುನ ರಾಶಿಯವರು ಈ ವಾರ ಅನಗತ್ಯ ವೆಚ್ಚಗಳ ಬಗ್ಗೆ ಜಾಗರೂಕರಾಗಿರಿ..!


​ಮೇಷ ರಾಶಿ: ವೃತ್ತಿ ಜೀವನದಲ್ಲಿ ಅನುಕೂಲಕರ ಅವಕಾಶಗಳು ಕಂಡುಬರುವವು

ವಾರದ ಆರಂಭವು ಮೇಷರಾಶಿಯವರಿಗೆ ಉತ್ತಮವಾಗಿರುತ್ತದೆ. ವೃತ್ತಿ ಜೀವನದಲ್ಲಿ ಅನುಕೂಲಕರ ಅವಕಾಶಗಳು ಕಂಡುಬರುವವು. ನಿಮ್ಮ ಆಲೋಚನೆಗಳಿಗೆ ಉತ್ತಮ ಬೆಂಬಲ ಸಿಗುತ್ತದೆ.ನಿಮ್ಮ ಪ್ರೀತಿ ಸಂಬಂಧದಲ್ಲಿ ಅಡತಡೆ ಉಂಟಾಗಬಹುದು. ಈ ಸಮಯದಲ್ಲಿ ಮಕ್ಕಳ ಅನಾರೋಗ್ಯದ ಕಾರಣದಿಂದಾಗಿ ಮನೆಯ ವಾತಾವರಣವು ಹದಗೆಡಬಹುದು.

ನಿಮ್ಮ ತಾಯಿಯ ಆರೋಗ್ಯವು ದುರ್ಬಲಗೊಳ್ಳಬಹುದು,ಅವರ ಬಗ್ಗೆ ಕಾಳಜಿ ವಹಿಸಿ.ನೀವು ನಿಮ್ಮ ಕುಟುಂಬ ಮತ್ತು ಜೀವನ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೀರಿ. ಇದರಿಂದ ಈ ಸಂಬಂಧಕ್ಕೆ ಇನ್ನಷ್ಟು ಬಲ ಬರುವುದು. ನೀವು ಹೊಸ ವ್ಯಾಪಾರ ಅಥವಾ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶಗಳನ್ನು ಪಡೆಯುತ್ತೀರಿ.ಇದು ನಿಮ್ಮ ವೃತ್ತಿ ಜೀವನದಲ್ಲಿ ಅಗತ್ಯ ಬೆಳವಣಿಗೆಯನ್ನು ಒದಗಿಸಬಹುದು.ವಾರದ ಅಂತ್ಯದಲ್ಲಿ ಅನಗತ್ಯ ಒತ್ತಡ ಮತ್ತು ಆಂತಕದ ಪರಿಸ್ಥಿತಿ ಉಂಟಾಗಬಹುದು. ಈ ಸಮಯದಲ್ಲಿ ನಿಮ್ಮ ಮನೋಬಲವು ಸಹ ದುರ್ಬಲವಾಗುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳು ಸಹ ಹಠಾತ್ ಒತ್ತಡವನ್ನು ಹೆಚ್ಚಿಸುತ್ತವೆ. ಈ ಪರಿಸ್ಥಿತಿ ನಿಮ್ಮ ಆರೋಗ್ಯ ಮತ್ತು ಏಕಾಗ್ರತೆಯನ್ನು ಹದಗೆಡಿಸಬಹುದು.

ಏಪ್ರಿಲ್‌ನಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ..

ವೃಷಭ ರಾಶಿ: ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ ಉತ್ತಮ

ವೃಷಭ ರಾಶಿಯವರು ವಾರದ ಆರಂಭದಲ್ಲಿ ತನ್ನ ಸಂಪೂರ್ಣ ಗಮನವನ್ನು ಜೀವನದ ಸಂತೋಷವನ್ನು, ಸಂಪನ್ಮೂಲಗಳನ್ನು ಆನಂದಿಸುವಲ್ಲಿ ಕಳೆಯುತ್ತಾರೆ. ಚಂದ್ರನು ಐದನೇ ಮನೆಯಲ್ಲಿ ಸಂಚರಿಸುವುದರಿಂದ ಸೃಜನಾತ್ಮಕ ಚಿಂತನೆಗಳಿಂದ ತುಂಬಿದ್ದರೂ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಹೆಚ್ಚು ಸಮಯ ಯೋಚಿಸುವುದರಲ್ಲೇ ಕಳೆಯುವುದಕ್ಕಿಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ ಉತ್ತಮ. ಹೊಸ ಉದ್ಯೋಗ ಅಥವಾ ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುತ್ತಿರುವವರು ಖಂಡಿತವಾಗಿಯೂ ಈ ಸಮಯದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಹದಗೆಡಬಹುದು ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಾರಾಂತ್ಯದಲ್ಲಿ ಒಂಟಿತನವು ನಿಮ್ಮನ್ನು ಕಾಡಬಹುದು ಮತ್ತು ನೀವು ಅಸಮಾಧಾನವನ್ನು ಅನುಭವಿಸಬಹುದು. ಇದರಿಂದ ನಿಮ್ಮ ಮನೋಬಲವು ದುರ್ಬಲಗೊಳ್ಳುತ್ತದೆ. ಇದರಿಂದಾಗಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡರ ಮೇಲೆಯೂ ಪರಿಣಾಮ ಬೀರಬಹುದು.

​ಮಿಥುನ ರಾಶಿ: ಸ್ವ ನಿರ್ಧಾರದೊಂದಿಗೆ ನಿಮ್ಮ ಗುರಿಯ ಕಡೆಗೆ ಮುನ್ನುಗ್ಗುವಿರಿ

ವಾರದ ಆರಂಭದಿಂದಲೇ ಸ್ವ ನಿರ್ಧಾರದೊಂದಿಗೆ ನಿಮ್ಮ ಗುರಿಯ ಕಡೆಗೆ ಮುನ್ನುಗ್ಗುವಿರಿ. ನಿಮ್ಮ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮ ಪಡಲು ಹಿಂದೆ ಸರಿಯುವುದಿಲ್ಲ. ಕೆಲವೊಮ್ಮೆ ನಿಮ್ಮ ಅಹಂನಿಂದಾಗಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ವಿವಾದಗಳೂ ಉದ್ಭವಿಸಬಹುದು. ವಾರದ ಮಧ್ಯದಲ್ಲಿ ತಾಯಿಯಿಂದ ಸಹಕಾರ ಪಡೆಯುವಿರಿ. ನಿಮ್ಮ ದೂರದೃಷ್ಟಿಯಿಂದಾಗಿ ಲಾಭ ಮತ್ತು ನಷ್ಟವನ್ನು ಸರಿಯಾಗಿ ಲೆಕ್ಕ ಹಾಕುವಿರಿ. ಈ ಸಮಯದಲ್ಲಿ ನಿಮ್ಮ ಶತ್ರುಗಳ ಮೇಲೂ ಪ್ರಾಬಲ್ಯವನ್ನು ಸಾಧಿಸುವಿರಿ. ನಿಮ್ಮ ಪ್ರೀತಿ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದು. ಇದರಿಂದ ಸಂಬಂಧದಲ್ಲಿ ತಾಜಾತನ ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ವೃತ್ತಿ ಕ್ಷೇತ್ರದಲ್ಲಿರುವವರು ನಿಮ್ಮ ಆದಾಯವನ್ನು ಹೆಚ್ಚಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಆದರೆ ಈ ಸಮಯದಲ್ಲಿ ನೀವು ನಿಮ್ಮ ವೆಚ್ಚಗಳ ಬಗ್ಗೆ ಜಾಗರೂಕರಾಗಿರುವುದು ಅಗತ್ಯ. ಈ ಸಮಯದಲ್ಲಿ ನೀವು ಪ್ರತಿಯೊಂದು ವಿಷಯ ಅಥವಾ ಪರಿಸ್ಥಿತಿಯ ಬಗ್ಗೆ ಬಹಳ ಬೇಗನೇ ಉದ್ವಿಗ್ನರಾಗುವಿರಿ.ಇದರಿಂದ ಮನೆಯ ವಾತಾವರಣವು ಹದಗೆಡಬಹುದು.

​ಕಟಕ ರಾಶಿ: ನಿಮ್ಮ ಆಸೆ, ಮಹತ್ವಾಕಾಂಕ್ಷೆಗಳನ್ನು ಪೂರ್ಣಗೊಳಿಸಲು ಇದು ಉತ್ತಮ ಸಮಯ

ಕುಟುಂಬದ ಸುರಕ್ಷತೆಗಾಗಿ ಹೆಚ್ಚಿನ ಕಾಳಜಿ ವಹಿಸುವಿರಿ ಜೊತೆಗೆ ಭವಿಷ್ಯಕ್ಕಾಗಿ ಹೂಡಿಕೆಯನ್ನೂ ಮಾಡಬಹುದು. ಬುಧನು ದುರ್ಬಲ ಸ್ಥಾನದಲ್ಲಿರುವುದರಿಂದ ಈ ಸಮಯದಲ್ಲಿ ನೀವು ನಿಮ್ಮ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಪೂರ್ಣಗೊಳಿಸಲು ನಿರಂತರವಾಗಿ ಮತ್ತು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕು. ವೈಯಕ್ತಿಕ ಜೀವನದಲ್ಲಿ, ಸಹೋದರ ಸಹೋದರಿಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ. ನಿಮ್ಮ ಮಧ್ಯೆ ಯಾವುದೇ ತಪ್ಪು ಗ್ರಹಿಕೆಗಳಿದ್ದರೆ ಅವುಗಳನ್ನು ನಿವಾರಿಸಲು ಸಾಧ್ಯವಾದಷ್ಟು ಪ್ರಯತ್ನಿಸಿ. ನಿಮ್ಮ ಆಸೆ, ಮಹತ್ವಾಕಾಂಕ್ಷೆಗಳನ್ನು ಪೂರ್ಣಗೊಳಿಸಲು ಇದು ಉತ್ತಮ ಸಮಯ. ಶುಕ್ರನು ಆದಾಯ ಮತ್ತು ಲಾಭದ ಮನೆಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಚಂದ್ರನು ನಾಲ್ಕನೇಯ ಸ್ಥಾನದಲ್ಲಿರುವುದರಿಂದ ಸಮಾಜದಲ್ಲಿ ಪ್ರತಿಷ್ಠೆ, ಗೌರವವನ್ನು ಪಡೆಯುವಿರಿ.

​​ಸಿಂಹ ರಾಶಿ: ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ

ಗ್ರಹಗಳ ಸ್ಥಾನ ಬದಲಾವಣೆಯಿಂದ ವಾರದ ಆರಂಭದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಆತ್ಮವಿಶ್ವಾಸ ಕಡಿಮೆಯಾಗಿ ನಿಮ್ಮ ಮನೋಬಲ ಕುಸಿಯಬಹುದು. ಆದ್ದರಿಂದ ಈ ಸಮಯದಲ್ಲಿ ಸಕಾರಾತ್ಮಕವಾಗಿ ಚಿಂತಿಸಿ ಹಾಗೂ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ನಿಮ್ಮ ತಂದೆಯೊಂದಿಗೆ ವಿರೋಧಗಳು ಉಂಟಾಗಬಹುದು. ಬುಧ ಗ್ರಹವು ದುರ್ಬಲ ಸ್ಥಾನದಲ್ಲಿರುವುದರಿಂದ ನಿಮ್ಮ ಆದಾಯದಲ್ಲಿ ಇಳಿಕೆ ಕಂಡುಬರಬಹುದು. ಆದ್ದರಿಂದ ಹಣಕಾಸಿನ ಸೂಕ್ತ ನಿರ್ವಹಣೆ ಅಗತ್ಯ. ನಿಮ್ಮ ನಡವಳಿಕೆಯ ಮೇಲೆ ನಿಯಂತ್ರಣವಿರಲಿ. ಇಲ್ಲವಾದರೆ ಅನಗತ್ಯ ಸಮಸ್ಯೆಯನ್ನು ಎದುರಿಸಬೇಕಾದೀತು. ಸಹೋದರ ಸಹೋದರಿಯರಿಂದ ಲಾಭ ಅಥವಾ ಸಂತೋಷದ ಸುದ್ಧಿಯನ್ನು ಪಡೆಯಬಹುದು, ಇದರಿಂದ ನಿಮ್ಮ ಸಂತೋಷವು ಹೆಚಾಗುತ್ತದೆ. ವಾರಾಂತ್ಯದಲ್ಲಿ ಚಂದ್ರನು ದುರ್ಬಲ ಸ್ಥಾನದಲ್ಲಿರುವುದರಿಂದ ಕೆಲವೊಂದು ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು. ಈ ಸಂದರ್ಭದಲ್ಲಿ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಮುಂದೆ ಪಶ್ಚಾತಾಪ ಪಡಬೇಕಾದೀತು. ಆದಷ್ಟು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ.

ನಿಮ್ಮ ಕೈ ಬೆರಳುಗಳಿಂದ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ತಿಳಿದುಕೊಳ್ಳಬಹುದು..!

​ಕನ್ಯಾ ರಾಶಿ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ

ವಾರದ ಆರಂಭದಲ್ಲಿ ನಿಮ್ಮ ಸ್ವಭಾವದಲ್ಲಿ ಅಹಂ ಹಾಗೂ ಅತ್ಯುತ್ಸಾಹದಿಂದ ಕೌಟುಂಬಿಕ ವಾತಾವರಣದಲ್ಲಿ ಒಡಕು ಮೂಡಬಹುದು. ಆದ್ದರಿಂದ ಇತರರೊಂದಿಗೆ ಹೊಂದಿಕೊಳ್ಳುವ ಅಗತ್ಯವಿದೆ. ಈ ವಿಷಯದಲ್ಲಿ ತಂದೆ ತಾಯಿಯ ಸಲಹೆಯನ್ನು ಪಡೆಯಿರಿ. ಚಂದ್ರನ ಸ್ಥಾನ ಬದಲಾವಣೆಯು, ಕೆಲವು ಹೊಸ ಅವಕಾಶಗಳು, ಜವಾಬ್ದಾರಿಗಳನ್ನು ನಿಮಗೆ ಒದಗಿಸುತ್ತದೆ. ನಿಮ್ಮ ಕೆಲಸಕ್ಕೆ ನೀವು ಸಂಪೂರ್ಣವಾಗಿ ಬದ್ಧರಾಗಿರುತ್ತೀರಿ. ಇದರಿಂದ ನಿಮ್ಮ ಸಹೋದ್ಯೋಗಿಗಳಿಂದ ಹಾಗೂ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುವಿರಿ. ಆರೋಗ್ಯದಲ್ಲಿ ನೋಡುವುದಾದರೆ ಚರ್ಮದ ಸಮಸ್ಯೆ, ಹಾರ್ಮೋನ್‌ ಅಸಮತೋಲನಗಳಂತಹ ಸಮಸ್ಯೆ ಕಾಡಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶಗಳು ಒದಗಿ ಬರುವವು. ಪ್ರೀತಿಯ ಜೀವನದಲ್ಲಿ ನಿಮ್ಮ ಹೃದಯದ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವಿರಿ. ವಾರಾಂತ್ಯದಲ್ಲಿ ಚಂದ್ರನು ಮೂರನೇ ಮನೆ ಪ್ರವೇಶಿಸುವುದರಿಂದ ವೃತ್ತಿಜೀವನದಲ್ಲಿ ಉತ್ತಮ ಅವಕಾಶ ಹಾಗೂ ಲಾಭವನ್ನು ಪಡೆಯುವಿರಿ.

​ತುಲಾ ರಾಶಿ: ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಸುಖ ಹೆಚ್ಚಾಗುವುದು

ವಾರದ ಆರಂಭದಲ್ಲಿ ಚಂದ್ರನು ಹನ್ನೊಂದನೇ ಮನೆಯಲ್ಲಿರುವುದರಿಂದ ಲಾಭ ಹಾಗೂ ಸಾಮಾಜಿಕ ಯಶಸ್ಸನ್ನು ಪಡೆಯುವಿರಿ. ಹಳೆಯ ಸ್ನೇಹಿತನೊಬ್ಬನ ಭೇಟಿಯಿಂದ ಸಂತೋಷ ಪಡುವಿರಿ. ಬುಧನು ದುರ್ಬಲ ಸ್ಥಾನದಲ್ಲಿರುವುದರಿಂದ ಈ ಸಮಯದಲ್ಲಿ ನೀವು ಯಾವುದೇ ರೀತಿಯ ಸಾಲ ತೆಗೆದುಕೊಳ್ಳುವುದನ್ನು ನೀವು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಕಣ್ಣು ಮತ್ತು ಚರ್ಮದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ದಿನಚರಿಯು ವ್ಯವಸ್ಥಿತವಾಗಿರಲಿ. ಇದರಿಂದಾಗಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರೈಸುವಿರಿ. ಜೊತೆಗೆ ಯಶಸ್ಸನ್ನೂ ಪಡೆಯುವಿರಿ. ನಿಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಸುಖ ಹೆಚ್ಚಾಗುವುದು. ವಾರಾಂತ್ಯದಲ್ಲಿ ಪೂರ್ವಜರ ಆಸ್ತಿ ಹಾಗೂ ಹಣಕಾಸಿನ ಲಾಭ ಉಂಟಾಗಬಹುದು.

​ವೃಶ್ಚಿಕ ರಾಶಿ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುವಿರಿ

ವಾರದ ಆರಂಭದಲ್ಲಿ ನಿಮ್ಮ ಹತ್ತನೇ ಮನೆಯಲ್ಲಿ ಚಂದ್ರನ ಸಂಚಾರವು, ಪ್ರಯತ್ನ ಮತ್ತು ಆಲೋಚನೆಗಳಿಗೆ ಸರಿಯಾದ ದಿಕ್ಕು ನೀಡುವುದು. ಇದರಿಂದ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ಹಿರಿಯ ಅಧಿಕಾರಿಗಳಿಂದಲೂ ಪ್ರಶಂಸೆಯನ್ನು ಪಡೆಯುವಿರಿ. ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು, ಆದಾಯದಲ್ಲಿ ಹೆಚ್ಚಳ ಮತ್ತು ಲಾಭವನ್ನು ಪಡೆಯುತ್ತೀರಿ. ವಾರದ ಮಧ್ಯದಲ್ಲಿ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ವೆಚ್ಚಗಳನ್ನು ನಿಯಂತ್ರಿಸಿ. ನಿಮ್ಮ ಪ್ರಯತ್ನಗಳಲ್ಲಿ ಹಾಗೂ ಎಲ್ಲಾ ಕಾರ್ಯಗಳಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುವಿರಿ. ಕೆಲವೊಮ್ಮೆ ಆಯಾಸ ಉದಾಸೀನತೆಯಿಂದ ಕೆಲಸವನ್ನು ಮುಂದೂಡಬಹುದು. ಇದರಿಂದ ಲಾಭ ಪಡೆಯುವುದು ಸ್ವಲ್ಪ ಕಷ್ಟವಾಗಬಹುದು. ಆದ್ದರಿಂದ ಈ ಬಗ್ಗೆ ಸ್ವಲ್ಪ ಗಮನ ಹರಿಸಿ.

​ಧನುಸ್ಸು ರಾಶಿ: ವಾರದ ಆರಂಭವು ಧನುಸ್ಸು ರಾಶಿಯವರಿಗೆ ಅದೃಷ್ಟದಾಯಕ

ವಾರದ ಆರಂಭವು ಧನುಸ್ಸು ರಾಶಿಯವರಿಗೆ ಅದೃಷ್ಟದಾಯಕವಾಗಿದೆ. ಚಂದ್ರ ನಿಮ್ಮ ಹತ್ತನೇ ಮನೆಯಲ್ಲಿರುವುದರಿಂದ ಇದು ವೃತ್ತಿ ಜೀವನಕ್ಕೆ ಸಂಬಂಧಿಸಿದ ಮತ್ತು ಶುಭ ಫಲಿತಾಂಶಗಳನ್ನು ಸೂಚಿಸುತ್ತಿದೆ. ನೀವು ಸಾಕಷ್ಟು ಸಮಯದಿಂದ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ ಪ್ರಸ್ತುತ ಕಂಪನಿಯಲ್ಲಿ ನೀವು ಉತ್ತಮ ಸ್ಥಾನವನ್ನು ಪಡೆಯಬಹುದು ಅಥವಾ ನಿಮ್ಮ ಕಾರ್ಯಕುಶಲತೆ ಇನ್ನಷ್ಟು ಹೆಚ್ಚಾಗುವಂತಹ ಯಾವುದೇ ಯೋಜನೆಯನ್ನು ನೀವು ಪಡೆಯಬಹುದು. ಆದರೆ ಬುಧನು ದುರ್ಬಲ ಸ್ಥಾನದಲ್ಲಿರುವುದರಿಂದ ಅನಿರೀಕ್ಷಿತ ಬಿಕ್ಕಟ್ಟುಗಳು ತಲೆದೋರಬಹುದು. ವಾರದ ಮಧ್ಯದಲ್ಲಿ ಚಂದ್ರನು ಹನ್ನೊಂದನೇ ಮನೆ ಪ್ರವೇಶಿಸುವುದರಿಂದ ನಿಮ್ಮ ಆದಾಯವು ಹೆಚ್ಚಾಗುವುದು. ವಾರಾಂತ್ಯದಲ್ಲಿ ವೆಚ್ಚಗಳು ಹೆಚ್ಚಾಗಬಹುದು. ಈ ಬಗ್ಗೆ ಜಾಗರೂಕತೆ ವಹಿಸಿ.

ಏಪ್ರಿಲ್‌ನಲ್ಲಿ ಜನಿಸಿದವರ ಅದೃಷ್ಟದ ಹರಳು ಯಾವುದು ಗೊತ್ತಾ?

ಮಕರ ರಾಶಿ: ಪಾಲುದಾರಿಕೆಯ ವ್ಯವಹಾರದಲ್ಲಿ ಬಿಕ್ಕಟ್ಟುಗಳು ಎದುರಾಗಬಹುದು

ಮಕರ ರಾಶಿ: ಚಂದ್ರನ ಸ್ಥಾನವು ವೈವಾಹಿಕ ಜೀವನದಲ್ಲಿ ಕಹಿಯನ್ನು ತರಬಹುದು. ವ್ಯವಹಾರಿಕ ಜೀವನದಲ್ಲಿ, ವಿಶೇಷವಾಗಿ ಪಾಲುದಾರಿಕೆಯ ವ್ಯವಹಾರದಲ್ಲಿ ಬಿಕ್ಕಟ್ಟುಗಳು ಎದುರಾಗಬಹುದು. ನೀವು ಕೆಲಸ ಮಾಡುವ ಕಚೇರಿಯಲ್ಲಿ ಬೇರೆಯವರ ಪಿತೂರಿಯಿಂದಾಗಿ ನೀವು ಮಾನಸಿಕ ಒತ್ತಡಕ್ಕೆ ಸಿಲುಕಬಹುದು. ಬುಧನ ಸ್ಥಾನವೂ ದುರ್ಬಲವಾಗಿರುವುದರಿಂದ ಅನಗತ್ಯ ಭಯ ಹಾಗೂ ಬಿಕ್ಕಟ್ಟುಗಳು ಎದುರಾಗಬಹುದು. ಕಾರಣವಿಲ್ಲದೇ ಆತಂಕ ಹಾಗೂ ಅಭದ್ರತೆಯ ಭಾವನೆ ಹೆಚ್ಚಾಗುವುದು. ಆರೋಗ್ಯ ಬಗ್ಗೆ ವಿಶೇಷವಾಗಿ ಹೊಟ್ಟೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗಬಹುದು. ತಂದೆಯೊಂದಿಗಿನ ಸಂಬಂಧವು ಈ ಸಮಯದಲ್ಲಿ ಹದಗೆಡಬಹುದು. ಈ ಸಮಯದಲ್ಲಿ ನ್ಯಾಯಕ್ಕೆ ವಿರುದ್ಧವಾದ ಯಾವುದೇ ಕೆಲಸವನ್ನು ಮಾಡಬಾರದು. ವಾರದ ಮಧ್ಯದಲ್ಲಿ ಚಂದ್ರನು ಹತ್ತನೇ ಮನೆ ಪ್ರವೇಶಿಸುವುದರಿಂದ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುವಿರಿ. ಜೊತೆಗೆ ಜವಾಬ್ದಾರಿಗಳೂ ಹೆಚ್ಚಾಗುವುದು. ವಾರಾಂತ್ಯದಲ್ಲೂ ಚಂದ್ರನ ಸ್ಥಾನವು ನಿಮಗೆ ಯಶಸ್ಸು ಹಾಗೂ ಪ್ರಶಂಸೆಯನ್ನು ನೀಡುವುದು.

​ಕುಂಭ ರಾಶಿ: ಉದ್ಯೋಗ ಮತ್ತು ವ್ಯಾಪಾರ ಪಾಲುದಾರಿಕೆಯಿಂದ ಉತ್ತಮ ಲಾಭ

ಉದ್ಯೋಗ ಮತ್ತು ವ್ಯಾಪಾರ ಪಾಲುದಾರಿಕೆಯಿಂದ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ ಸಂಬಂಧದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು ವಿಶೇಷವಾಗಿ ನಿಮ್ಮ ಆಹಾರದ ಮೇಲೆ ದೃಷ್ಟಿ ಇಡುವುದು ಉತ್ತಮ. ವಾರದ ಮಧ್ಯದದಲ್ಲಿ ನೀವು ಆರಾಮ ವಲಯದಿಂದ ಹೊರಬಂದು, ಶ್ರಮಪಡುವುದು ಅಗತ್ಯ. ಇದರಿಂದಾಗಿ ಯಶಸ್ಸಿಗೆ ಅವಕಾಶಗಳನ್ನು ಪಡೆಯುವಿರಿ. ವಾರಾಂತ್ಯದಲ್ಲಿ ಕುಂಭ ರಾಶಿಯವರಿಗೆ ಉತ್ತಮ ಫಲವಿದೆ. ಈ ಸಮಯದಲ್ಲಿ ನೀವು ನಿಮ್ಮ ಗುರಿಯನ್ನು ಸಾಧಿಸಲು ಪ್ರಬಲವಾಗಿರುವಿರಿ ಹಾಗೂ ನಿಮ್ಮ ಗುರಿಯ ಕಡೆ ಬದ್ಧರಾಗಿರುತ್ತೀರಿ.

​ಮೀನ ರಾಶಿ: ವಾರದ ಆರಂಭವು ಭರವಸೆ ಮತ್ತು ಸಕಾರಾತ್ಮಕವಾಗಿರುವುದು

ವಾರದ ಆರಂಭವು ಭರವಸೆ ಮತ್ತು ಸಕಾರಾತ್ಮಕವಾಗಿರುತ್ತದೆ. ನಿಮ್ಮ ಆರನೇ ಮನೆಯಲ್ಲಿ ಚಂದ್ರನ ಸಂಚಾರವು ನಿಮ್ಮ ಉದ್ಯೋಗ ಮತ್ತು ವ್ಯಾಪಾರಕ್ಕೆ ಪ್ರಯೋಜನಕಾರಿಯಾಗಿರುವುದು. ಹೊಸ ಉದ್ಯೋಗ ಹುಡುಕುತ್ತಿದ್ದರೆ, ಈ ಸಮಯದಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯಬಹುದು. ಮತ್ತೊಂದೆಡೆ ಪ್ರಸ್ತುತ ಸಂಸ್ಥೆಯಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆಯೂ ಇದೆ. ವೃತ್ತಿ ಸಂದರ್ಭದಲ್ಲಿಯೂ ನಿಮಗೆ ಬಯಸಿದ ಫಲಿತಾಂಶಗಳನ್ನು ನೀಡುತ್ತದೆ. ವೈಯಕ್ತಿಕ ಜೀವನದಲ್ಲಿ ಪ್ರಸ್ತುತ ಸಂಬಂಧದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದಾಗಿ ಹೆಚ್ಚಿನ ಸಮಯವನ್ನು ವ್ಯಯಿಸಬೇಕಾಗಬಹುದು. ನಿಮ್ಮ ನಡವಳಿಕೆಯಿಂದಾಗಿ ಕೆಲವೊಂದು ಅವಕಾಶಗಳನ್ನು ಕಳೆದುಕೊಳ್ಳಬೇಕಾಗಬಹುದು. ಈ ಸಮಯದಲ್ಲಿ ವಿಶೇಷವಾಗಿ ನಿಮ್ಮ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ