ಆ್ಯಪ್ನಗರ

Vara Bhavishya:ಮೀನ ರಾಶಿಯವರೇ ಪರಿಸ್ಥಿತಿ ನಿಮ್ಮ ವಿರುದ್ಧವಾಗಿದ್ದು ಆಡುವ ಬಾಯಿಗೆ ವಸ್ತುವಾಗದಿರಿ; ವಾರ ಭವಿಷ್ಯ ನೋಡಿ

ಫೆಬ್ರವರಿ 9 ರಿಂದ ಫೆಬ್ರವರಿ 15 ರವರೆಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹನ್ನೆರಡು ರಾಶಿಗಳ ಈ ವಾರದ ರಾಶಿಭವಿಷ್ಯ ಇಲ್ಲಿದೆ ನೋಡಿ.

Vijaya Karnataka Web 9 Feb 2020, 6:22 am
ಹನ್ನೆರಡು ರಾಶಿಗಳಿಗೂ ಸಂಬಂಧಪಟ್ಟಂತೆ ಗ್ರಹಗತಿಗಳು ಬದಲಾದಾಗ ವ್ಯಕ್ತಿಯ ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನ, ಆರೋಗ್ಯದಲ್ಲಿ ಪ್ರತಿದಿನವೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಫೆಬ್ರವರಿ 9 ರಿಂದ ಫೆಬ್ರವರಿ 15 ರವರೆಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹನ್ನೆರಡು ರಾಶಿಗಳ ಈ ವಾರದ ರಾಶಿಭವಿಷ್ಯ ಇಲ್ಲಿದೆ ನೋಡಿ.
Vijaya Karnataka Web kannada weekly horoscope from 9 2 2020 to 15 2 2020
Vara Bhavishya:ಮೀನ ರಾಶಿಯವರೇ ಪರಿಸ್ಥಿತಿ ನಿಮ್ಮ ವಿರುದ್ಧವಾಗಿದ್ದು ಆಡುವ ಬಾಯಿಗೆ ವಸ್ತುವಾಗದಿರಿ; ವಾರ ಭವಿಷ್ಯ ನೋಡಿ



ಮೇಷ ರಾಶಿ

ನೀವು ಕೆಲವು ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಿದೆ. ಯಾವುದೇ ಯೋಜನೆಗಳನ್ನು ಮತ್ತೊಬ್ಬರ ಭರವಸೆಯೊಂದಿಗೆ ಆರಂಭಿಸಬೇಡಿ. ನೀವು ನಂಬಿದ ಗೆಳೆಯರೇ ತುರ್ತು ಸಂದರ್ಭದಲ್ಲಿ ಸಹಾಯ ಮಾಡಲು ಹಿಂದೇಟು ಹಾಕುವರು. ಅವರಿವರು ತೋರುವ ಆಸೆ ಆಮಿಷಗಳಿಗೆ ಬಲಿಯಾಗದೆ ಮಹತ್ತರ ಗುರಿಯತ್ತ ಸಾಗುವ ಕಡೆ ಗಮನ ನೀಡಿ.

ವೃಷಭ ರಾಶಿ

ನಿಮ್ಮ ಮಗನ ಉದ್ಯೋಗದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದವರು ಮಹತ್ತರ ತೀರ್ಪು ನೀಡಿ ಆತನ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುವರು. ಸಂಬಂಧಿಗಳ ಮನೆಯಲ್ಲಿ ನಿಮಗೆ ಹೊಸಬರ ಪರಿಚಯವಾಗಲಿದ್ದು ಅವರ ಅನುಭವದ ಮಾತು ಮತ್ತು ಸಲಹೆಗಳು ಮುಂದೆ ನಿಮಗೆ ಪ್ರಯೋಜನಕ್ಕೆ ಬರಲಿವೆ.

ಮಿಥುನ ರಾಶಿ

ಕಚೇರಿಯಲ್ಲಿ ಮೇಲಧಿಕಾರಿಗಳ ಜೊತೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ತಪ್ಪಿದಲ್ಲಿ ಮುಂದೆ ಅದರ ಘೋರ ಪರಿಣಾಮ ಎದುರಿಸಬೇಕಾಗುವುದು. ವ್ಯಾಪಾರಿಗಳು ಗ್ರಾಹಕರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ. ಸನ್ನಿವೇಶವೊಂದು ನಿಮ್ಮ ತಾಳ್ಮೆ ಪರೀಕ್ಷೆ ಮಾಡಲಿದ್ದು ಅಲ್ಲಿ ನೀವು ಮಾತನಾಡುವಾಗ ಉದ್ವೇಗಕ್ಕೆ ಒಳಗಾಗಬೇಡಿ.


ಮಿಥುನ ರಾಶಿಯವರಿಗೆ ಈ ತಿಂಗಳು ಆರ್ಥಿಕವಾಗಿ ಮಿಶ್ರ ಫಲಿತಾಂಶ ನೀಡಲಿದೆ: ನಿಮ್ಮ ಫೆಬ್ರವರಿ ತಿಂಗಳ ಭವಿಷ್ಯ ನೋಡಿ

ಕಟಕ ರಾಶಿ

ನಿಮ್ಮ ಲೆಕ್ಕಾಚಾರವೆಲ್ಲ ಬುಡಮೇಲಾಗುವ ಸಂದರ್ಭ ಬರಲಿದೆ. ಕೆಲವೊಮ್ಮೆ ಪ್ರಸಂಗಗಳು ನಿಮ್ಮ ವಿರುದ್ಧವಾಗಿ ನಿಮಗಾಗುವ ಸೋಲು ಕಂಡು ಸಂತೋಷ ಪಡುವವರು ನಿಮ್ಮ ಸುತ್ತಮುತ್ತ ಇದ್ದಾರೆ ಎಂಬುದು ನೆನಪಿರಲಿ. ಸಂಗಾತಿಯ ಮುಂಗೋಪಕ್ಕೆ ಕಾರಣ ತಿಳಿದು ಅದನ್ನು ಉಪಶಮನಗೊಳಿಸಲು ಪ್ರಯತ್ನಿಸಿ. ಹಿರಿಯರ ವ್ಯವಹಾರವನ್ನು ಮುಂದುವರೆಸಿಕೊಂಡು ಹೋಗಿ.

ಸಿಂಹ ರಾಶಿ

ಅತಿ ಕಾರ್ಯದೊತ್ತಡದಿಂದ ಹೊರಬರುವಿರಿ. ನಿಮ್ಮ ಪತ್ರ ವ್ಯವಹಾರಗಳಿಗೆ ಸೂಕ್ತ ಸ್ಪಂದನೆ ಸಿಗುವುದರಿಂದ ಮನಸ್ಸಿಗೆ ಮುದವೆನಿಸುವುದು. ಜನರು ನಿಮ್ಮ ಉತ್ತಮ ಕೆಲಸಗಳಿಗೆ ಪ್ರೋತ್ಸಾಹ ನೀಡುವರು ಮತ್ತು ನಿಮ್ಮ ಒಳ್ಳೆಯತನಕ್ಕೆ ಗೌರವವೂ ದೊರೆಯುವುದು. ಹಲವು ಸಂದರ್ಭಗಳಲ್ಲಿ ಆದ ಹಿನ್ನಡೆ ನಿಮ್ಮ ಮುಂದಿನ ಪ್ರಗತಿಗೆ ಮೆಟ್ಟಿಲುಗಳಾಗುವುದು.

ಕನ್ಯಾ ರಾಶಿ

ಕಚೇರಿಯಲ್ಲಿ ಎಂತಹದೇ ಪ್ರಸಂಗ ಬಂದರೂ ಅದನ್ನು ನಿಭಾಯಿಸುವ ಛಾತಿ ನಿಮಗಿದೆ ಮತ್ತು ಮೇಲಿನ ಅಧಿಕಾರಿಗಳೊಂದಿಗೆ ಸಂವಹನ ನಡೆಸುವ ನಿಮ್ಮ ಜಾಣತನ ಎಲ್ಲರ ಮೆಚ್ಚುಗೆ ಪಡೆಯಲಿದೆ. ಹೊಸ ಆಲೋಚನೆಗಳಿಂದಾಗಿ ಬರುವ ತೊಂದರೆಗಳೂ ತಪ್ಪಲಿವೆ. ಪರಸ್ತ್ರೀಯರಲ್ಲಿ ಆಸಕ್ತಿ ತೋರಿದಲ್ಲಿ ನಿಮ್ಮ ಘನತೆಗೆ ಕುಂದು ಬರುವುದು.

ಎಲ್ಲರಿಗೂ ಸಹಾಯ ಮಾಡುವ ಹೃದಯವಂತ ರಾಶಿಯವರು ಇವರು..!

ತುಲಾ ರಾಶಿ

ಯಾರನ್ನೇ ಆಗಲಿ ಉಪೇಕ್ಷೆ ಮಾಡದೆ ಗೌರವದಿಂದ ನೋಡುವುದನ್ನು ಕಲಿಯಿರಿ. ಅವರಿಂದಲೇ ಅನೇಕ ಕೆಲಸಗಳಾಗುವ ಪ್ರಸಂಗ ಬರುವುದು. ವಿದ್ಯಾವಂತರ ಪ್ರತಿಭೆಗೆ ತಕ್ಕ ಅವಕಾಶ ಖಂಡಿತಾ ದೊರೆಯಲಿದೆ. ಹಿರಿಯರ ಸಲಹೆ ಸಹಕಾರಗಳನ್ನು ಸ್ವೀಕರಿಸಿದರೆ ಆದಾಯ ಹೆಚ್ಚಾಗುವುದು. ಉಳಿದ ಹಣವನ್ನು ಒಳ್ಳೆಯ ಕಡೆ ಹೂಡಿಕೆ ಮಾಡಿದರೆ ಒಳ್ಳೆಯದು.

ವೃಶ್ಚಿಕ ರಾಶಿ

ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿಕೊಂಡು ನೀವು ಕಷ್ಟಪಡುವುದಲ್ಲದೆ ನಿಮ್ಮ ಮನೆ ಮಂದಿಯೂ ಕಷ್ಟಪಡಬೇಕಾಗುವುದು. ಬಿಡುವಿಲ್ಲದ ಕೆಲಸದೊಂದಿಗೆ ಆದಾಯವೂ ಹೆಚ್ಚಾಗುವುದು. ಕೆಲವು ಸಾಮಾಜಿಕ ಸಮಸ್ಯೆಗಳು ನಿಮ್ಮ ಮುಖಂಡತ್ವದಲ್ಲಿ ಬಗೆಹರಿಯುವವು. ರಾಜಕಾರಣಿಗಳಿಗೆ ಶುಭವಿದೆ. ನಿಮ್ಮ ಸಂಸ್ಥೆಯಲ್ಲಿ ನೀವು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು.

ಧನುಸ್ಸು ರಾಶಿ

ಈ ಹಿಂದೆ ಯಾರು ಅವಕಾಶವಾದಿಗಳಾಗಿ ನಿಮ್ಮ ಯಶಸ್ಸಿಗೆ ಅಡ್ಡಿಯಾಗಿದ್ದರೊ ಅವರೇ ಈಗ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪಪಟ್ಟು ಕ್ಷಮೆ ಕೇಳುವರು ಮತ್ತು ಹೊಸ ಅವಕಾಶಗಳನ್ನು ನಿಮಗೇ ಬಿಟ್ಟುಕೊಡುವರು. ನಿಶ್ಚಯವಾಗಿ ನಿಂತೇ ಹೋಗಿದ್ದ ಸೋದರನ ಮದುವೆ ಮತ್ತೆ ಅದೇ ಕನ್ಯೆಯೊಂದಿಗೆ ನೆರವೇರಲಿದೆ. ನೀವು ಯಶಸ್ಸಿನ ಹಾದಿಯಲ್ಲಿ ಸಾಗುವಿರಿ.

ಮಕರ ರಾಶಿ

ವ್ಯಾಪಾರ, ವ್ಯವಹಾರದಲ್ಲಿ ನೀವು ಎಷ್ಟೇ ಜಾಣತನ ತೋರಿದರೂ ವಿಫಲರಾಗುವ ಸಾಧ್ಯತೆ ಇದೆ. ಇದು ನಿಮ್ಮಲ್ಲಿ ಕೋಪ, ಹತಾಶೆ ಉಂಟು ಮಾಡುವುದು. ಆದರೆ ಇದರಿಂದ ಆಗುವ ಪ್ರಯೋಜನ ಶೂನ್ಯ. ಬಂಧುಗಳೊಂದಿಗೆ ಪ್ರೀತಿ, ವಿಶ್ವಾಸ ತೋರಿ. ಅನವಶ್ಯಕವಾಗಿ ನಿಮ್ಮನ್ನು ಟೀಕಿಸುವವರಿಗೆ ಸರಿಯಾದ ಉತ್ತರ ನೀಡಿ. ಅತಿ ತಿರುಗಾಟ ಹಾಗೂ ಮೋಜು ಒಳ್ಳೆಯದಲ್ಲ.

ಕುಂಭ ರಾಶಿ

ಸರ್ಕಾರಿ ಸಂಬಂಧಿತ ಕಾಗದ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಅತಿ ಮುಖ್ಯ ಕಡತಗಳು ಕಳೆದುಹೋಗದಂತೆ ನೋಡಿಕೊಳ್ಳಿ. ಹಿರಿಯರ ಆಸ್ತಿಗೆ ಉತ್ತಮ ಬೆಲೆ ದೊರೆಯಲಿದೆ. ಶ್ರಮಪಟ್ಟು ದುಡಿಯುವ ನಿಮಗೆ ಆತ್ಮವಿಶ್ವಾಸ ಹೆಚ್ಚು. ನಿಮ್ಮ ಆದಾಯದಲ್ಲಿ ಕ್ರಮೇಣ ಹೆಚ್ಚಳ ಕಂಡು ಬರುವುದು. ದಣಿವರಿಯದ ವಿಪರೀತ ದುಡಿಮೆ ಒಳ್ಳೆಯದಲ್ಲ. ಆಗಾಗ ವಿಶ್ರಾಂತಿ ತೆಗೆದುಕೊಳ್ಳಿ


ಈ ವರ್ಷ ಪ್ರೀತಿಯಲ್ಲಿ ಉತ್ತಮ ಹೊಂದಾಣಿಕೆ ಕಂಡುಕೊಳ್ಳುವ ರಾಶಿಗಳು ಇವು..!

ಮೀನ ರಾಶಿ

ಸದ್ಯದ ಪರಿಸ್ಥಿತಿ ನಿಮ್ಮ ವಿರುದ್ಧವಾಗಿದ್ದು ಆಡುವ ಬಾಯಿಗೆ ವಸ್ತುವಾಗದಿರಿ. ಪದೇ ಪದೆ ಕುಹಕದ ಮಾತುಗಳನ್ನು ಕೇಳುವುದರಿಂದ ಮನಸ್ಸಿಗೆ ನೋವಾಗುವುದು. ನಿಮ್ಮ ಬಂಧುಗಳು ತಮ್ಮ ಮಗಳ ಮದುವೆಗೆ ಆರ್ಥಿಕ ನೆರವು ಕೋರಿ ನಿಮ್ಮಲ್ಲಿಗೆ ಬರುವರು. ಹಣದ ಹರಿವು ಸಾಮಾನ್ಯವಾಗಿರುವ ಕಾರಣ ನೀವು ಅವರಿಗೆ ಸಹಾಯ ಮಾಡಲು ಆಗುವುದಿಲ್ಲ.

ಮುಂದಿನ ಲೇಖನ