ಆ್ಯಪ್ನಗರ

ವೃಷಭ ಮತ್ತು ವೃಶ್ಚಿಕ ರಾಶಿಯವರ ಮಧ್ಯೆ ಹೊಂದಾಣಿಕೆ ಹೇಗಿರುತ್ತೆ ಗೊತ್ತಾ?

ವೃಷಭ ಮತ್ತು ವೃಶ್ಚಿಕ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತದೆ? ಪ್ರೀತಿಯ ಜೀವನ ಯಶಸ್ವಿಯಾಗಿ ಮುಂದುವರಿಯುವುದೇ? ಅಥವಾ ಕಾಲ ಚಕ್ರದೊಂದಿಗೆ ಕಹಿಯಾದ ಸಂಗತಿಯೊಂದಿಗೆ ಹೊರ ಹೊಮ್ಮುವುದೇ? ಎನ್ನುವುದನ್ನು ತಿಳಿಯೋಣ.

Vijaya Karnataka Web 18 Apr 2020, 8:18 pm
ವೈವಾಹಿಕ ಜೀವನ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ವಿಶೇಷ ಬದಲಾವಣೆಯನ್ನು ತರುವುದು. ಪರಸ್ಪರ ಪ್ರೀತಿ, ಗೌರವ ಹಾಗೂ ಹೊಂದಾಣಿಕೆಯೊಂದಿಗೆ ಜೀವನ ನಿರ್ವಹಿಸಬೇಕಾಗುವುದು. ಹಾಗಾಗಿ ಹಿಂದೂ ಧರ್ಮದಲ್ಲಿ ವಿವಾಹದ ಹೊಂದಾಣಿಕೆಯನ್ನು ಕುಂಡಲಿಯ ಸಂಯೋಜನೆಯನ್ನು ನೋಡಿ ನಿರ್ಧರಿಸಲಾಗುತ್ತದೆ. ಹಾಗಾದರೆ ವೃಷಭ ಮತ್ತು ವೃಶ್ಚಿಕ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತದೆ? ಪ್ರೀತಿಯ ಜೀವನ ಯಶಸ್ವಿಯಾಗಿ ಮುಂದುವರಿಯುವುದೇ? ಅಥವಾ ಕಾಲ ಚಕ್ರದೊಂದಿಗೆ ಕಹಿಯಾದ ಸಂಗತಿಯೊಂದಿಗೆ ಹೊರ ಹೊಮ್ಮುವುದೇ? ಎನ್ನುವುದನ್ನು ತಿಳಿಯೋಣ.
Vijaya Karnataka Web compatibility of love marriage and life between taurus and scorpio
ವೃಷಭ ಮತ್ತು ವೃಶ್ಚಿಕ ರಾಶಿಯವರ ಮಧ್ಯೆ ಹೊಂದಾಣಿಕೆ ಹೇಗಿರುತ್ತೆ ಗೊತ್ತಾ?


​ವೃಷಭ ರಾಶಿ ಮತ್ತು ವೃಶ್ಚಿಕರಾಶಿ

ವ್ಯಕ್ತಿ ತನ್ನ ಸ್ವಭಾವಕ್ಕಿಂತ ವಿರೋಧ ಸ್ವಭಾವದವರನ್ನು ಹೆಚ್ಚು ಆಕರ್ಷಿಸುತ್ತಾನೆ ಎಂದು ಹೇಳಲಾಗುವುದು. ಅಂತೆಯೇ ವೃಷಭ ಮತ್ತು ವೃಶ್ಚಿಕ ರಾಶಿಯವರು ಪರಸ್ಪರ ವಿರೋಧ ಗುಣಗಳನ್ನು ಹೊಂದಿರುತ್ತವೆ. ಆದರೆ ಪರಸ್ಪರ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ ಎಂದು ಹೇಳಲಾಗುವುದು. ವೃಶ್ಚಿಕ ರಾಶಿಯವರು ಪ್ರಾಯೋಗಿಕವಾಗಿ ಜೀವನವನ್ನು ಕಾಣುತ್ತಾರೆ. ವೃಷಭ ರಾಶಿಯವರು ಆದರ್ಶ ಪ್ರೇಮಿತಯಂತೆ ಸದಾ ಸಂಗಾತಿಯನ್ನು ಪ್ರೀತಿಸುತ್ತಾರೆ. ಎರಡು ರಾಶಿಯವರು ಸಾಕಷ್ಟು ಕೋಪ ಮತ್ತು ನಾಟಕಗಳನ್ನು ಮಾಡುತ್ತವೆಯಾದರೂ ನಿತ್ಯದ ಸಮಸ್ಯೆಗಳನ್ನು ಹಾಗೂ ಜೀವನವನ್ನು ಹೊಂದಾಣಿಕೆಯ ಮೂಲಕ ನಿರ್ವಹಿಸುತ್ತಾರೆ ಎಂದು ಹೇಳಲಾಗುವುದು.

​ವೃಷಭ ಮತ್ತು ವೃಶ್ಚಿಕ ರಾಶಿಯವರ ಪ್ರಾಮಾಣಿಕತೆ

ವೃಷಭ ರಾಶಿಯವರು ಭೂಮಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಸೂಕ್ಷ್ಮ ಹಾಗೂ ಪ್ರಾಮಾಣಿಕ ವ್ಯಕ್ತಿಗಳಾದ ಇವರ ಭಾವನೆಗಳು ಹಾಗೂ ಪ್ರೀತಿಯು ಪರಿಶುದ್ಧವಾಗಿ ಇರುತ್ತವೆ. ಇವರು ತಮ್ಮ ಸಂಗಾತಿಗೆ ಪರಿಶುದ್ಧವಾದ ಪ್ರೀತಿಯನ್ನು ತೋರುವುದರ ಜೊತೆಗೆ ಅವರನ್ನು ಹೆಚ್ಚು ಉತ್ಸಾಹದಲ್ಲಿ ಇರಿಸುತ್ತದೆ. ಇವರು ತೋರಿಸುವ ಪ್ರತಿಯೊಂದು ಪ್ರೀತಿಯಲ್ಲೂ ಪಾರದರ್ಶಕತೆಯನ್ನು ಕಾಣಬಹುದು. ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳನ್ನು ಅಷ್ಟು ಸುಲಭವಾಗಿ ವ್ಯಕ್ತ ಪಡಿಸುವುದಿಲ್ಲ. ಪ್ರೀತಿಯನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವರು. ಪ್ರೀತಿಯನ್ನು ಮುಚ್ಚಿಡುವ ಇವರ ಸ್ವಭಾವದಿಂದ ಬಹುತೇಕ ಸಂದರ್ಭದಲ್ಲಿ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯವರು ಪ್ರೀತಿ ಹಾಗೂ ಸಂಬಂಧದಲ್ಲಿ ಬದ್ಧರಾಗಿರುತ್ತಾರೆ..!

​ಇಬ್ಬರ ನಡುವಿನ ಪ್ರೀತಿ

ವೃಷಭ ಹಾಗೂ ವೃಶ್ಚಿಕ ರಾಶಿಯವರ ನಡುವೆ ಇರುವ ಪ್ರೀತಿಯ ಸಂಗತಿಯಲ್ಲಿ ಸಾಕಷ್ಟು ಸಂಗತಿಗಳು ಹೊಂದಾಣಿಕೆ ಕಾಣುತ್ತವೆ. ಇವರಲ್ಲಿ ಇರುವ ಕೆಲವು ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳು ಸಂಬಂಧಗಳ ಮೇಲೆ ಮತ್ತು ಪ್ರೀತಿಯ ಮೇಲೆ ಆಳವಾದ ಪ್ರಭಾವ ಬೀರುವುದು. ಇವರ ಭೌತಿಕ ಗುಣಗಳಲ್ಲಿ ಹೊಂದಾಣಿಕೆ ಕಷ್ಟವಾಗುವುದು. ಇಬ್ಬರ ನಡುವೆಯೂ ಕೆಲವು ವಿಷಯದಲ್ಲಿ ಸ್ವಾಮ್ಯ ಸೂಚಕ ಗುಣಗಳಿರುತ್ತವೆ. ಅಂತೆಯೇ ಕೆಲವು ವಿಷಯದಲ್ಲಿ ಅಸೂಯೆಯನ್ನು ಹೊಂದುವರು. ಅದು ಕೆಲವೊಮ್ಮೆ ಪ್ರೀತಿಯ ಮೇಲೆ ತಪ್ಪು ಕಲ್ಪನೆಯನ್ನು ಮೂಡಿಸಬಹುದು.

​ಇಬ್ಬರ ನಡುವಿನ ಘರ್ಷಣೆ

ಈ ಎರಡು ರಾಶಿಯವರು ಸ್ಥಿರ ಚಿಹ್ನೆಯನ್ನು ಹೊಂದಿರುವವರಾಗಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ಇಬ್ಬರೂ ಮೊಂಡು ತನದ ಸ್ವಭಾವವನ್ನು ತೋರುವರು. ಇದರಿಂದ ಪರಸ್ಪರ ಘರ್ಷಣೆ ಉಂಟಾಗುವುದು. ಆದರೆ ಇಬ್ಬರು ಸಹ ಬಹುಬೇಗ ವಿಷಯವನ್ನು ಮರೆತು ಅಪ್ಪಿಕೊಳ್ಳುವರು. ಇಬ್ಬರೂ ಒಬ್ಬರನ್ನೊಬ್ಬರು ಕ್ಷಮಿಸಿ, ಸಮಸ್ಯೆಯನ್ನು ಬಗೆಹರಿಸಿಕೊಳ್ಳುವರು. ಆದರೆ ವಿಷಯಗಳನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ವಿಷಯವನ್ನು ನಿರಂತರವಾಗಿ ದ್ವೇಷಿಸುವರು. ಆದರೆ ವಿಷಯದಿಂದ ಸಂಬಂಧವನ್ನು ಹಾಳಾಗಲು ಇಬ್ಬರೂ ಬಿಡುವುದಿಲ್ಲ. ಸಂಬಂಧ ಮತ್ತು ಪ್ರೀತಿಯು ಉತ್ತಮವಾಗಿ ಇರುವಂತೆ ನಿಭಾಯಿಸುವರು.

ಕನ್ಯಾ ರಾಶಿ - ಧನುಸ್ಸು ರಾಶಿ ನಡುವೆ ಹೊಂದಾಣಿಕೆ ಹೇಗಿರುತ್ತದೆ ಗೊತ್ತಾ?

​ಹೊಂದಾಣಿಕೆಯಲ್ಲಿ ಉತ್ತಮ ಅಂಕ

ವೃಷಭ ಹಾಗೂ ವೃಶ್ಚಿಕ ರಾಶಿಯವರ ನಡುವೆ ಸೂಕ್ತ ತಿಳುವಳಿಕೆಯಿಂದಾಗಿ ಪ್ರೀತಿಯು ಉತ್ತಮವಾಗಿರುತ್ತದೆ. ಇಬ್ಬರ ನಡುವೆ ಇರುವ ಬಯಕೆಯಂತೆಯೇ ಜೀವನ ನಡೆಯುವುದು. ಸಂಬಂಧವು ಕ್ರಿಯಾತ್ಮಕ ಮತ್ತು ಸಂಕೀರ್ಣವಾಗಿರುತ್ತದೆ. ಇಬ್ಬರೂ ಸಹ ತಮ್ಮ ವರ್ತನೆ ಹಾಗೂ ಅಭಿಲಾಷೆಯ ನಡುವೆಯೂ ಜವಾಬ್ದಾರಿ ಮತ್ತು ಪ್ರೀತಿಯನ್ನು ಮರೆಯುವುದಿಲ್ಲ. ಇಬ್ಬರೂ ಸಹ ಪರಸ್ಪರ ಕಾಳಜಿ ಮತ್ತು ಪ್ರೀತಿಯ ಭಾವನೆಯನ್ನು ತೋರುವರು. ಹಾಗೂ ಪರಸ್ಪರ ಹೆಚ್ಚಿನ ಸಂತೋಷವನ್ನು ಅನುಭವಿಸುವರು. ಹಾಗಾಗಿ ವೃಷಭ ಮತ್ತು ವೃಶ್ಚಿಕ ರಾಶಿಯವರ ಪ್ರೀತಿಯ ಸಂಬಂಧ ಉತ್ತಮವಾಗಿ ಇರುತ್ತದೆ ಎಂದು ಹೇಳಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ