ಆ್ಯಪ್ನಗರ

ಪರಶಿವನ ನೆಚ್ಚಿನ ರಾಶಿಗಳಿವು..! ನಿಮ್ಮ ರಾಶಿಯೂ ಇದೆಯಾ ನೋಡಿ..

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಮೇಲೆ ಶಿವನ ವಿಶೇಷ ಕೃಪೆ ಇರುತ್ತದೆ. ಕೆಲ ರಾಶಿಯವರು ದಿನವೂ ಶಿವನ ಧ್ಯಾನ, ಜಪ ಮಾಡಿದರೆ ಸಕಲ ಸಂಕಷ್ಟಗಳು ದೂರವಾಗಿ, ಬದುಕಲ್ಲಿ ಸುಖ, ಸಂತೋಷ ನೆಲೆಯಾಗುತ್ತದೆ. ಈ ರಾಶಿಯವರ ಮೇಲೆ ಶಿವನ ಪ್ರೀತಿ, ಕರುಣೆ, ಕೃಪೆ ಸದಾ ಇರುತ್ತದೆ. ಆ ರಾಶಿಗಳ ಯಾವುವು ಎಂದು ತಿಳಿಯೋಣ.

Vijaya Karnataka Web 18 Aug 2022, 10:55 am
ಸೋಮವಾರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಶಿವನು ಭಕ್ತಿ ಪ್ರಿಯ. ಅವನಿಗೆ ಹಿಡಿಸುವಂತೆ ಶ್ರದ್ಧೆ, ಭಕ್ತಿಯಿಂದ ಪೂಜಿಸಿದರೆ ಎಲ್ಲವನ್ನೂ ದಾಯಪಾಲಿಸುತ್ತಾನೆ. ಸೋಮವಾರದ ದಿನ ಶಿವನನ್ನು ಪೂಜಿಸಿ, ಉಪವಾಸ ಆಚರಿಸಿದರೆ ಶಂಕರನ ಆಶೀರ್ವಾದವು ಭಕ್ತರ ಹಾಗೂ ಅವರ ಕುಟುಂಬದ ಮೇಲಿರುತ್ತದೆ. ಜೀವನದಲ್ಲಿ ಕಷ್ಟಗಳು ದೂರವಾಗುತ್ತವೆ. ಸಂತೋಷ ನೆಲೆಸುತ್ತದೆ. ಇದರೊಂದಿಗೆ ಈ ದಿನದಂದು ಭಗವಾನ್ ಶಿವನಿಗೆ ಅಭಿಷೇಕ (ರುದ್ರಾಭಿಷೇಕ) ಮಾಡುವುದರಿಂದ ಭಕ್ತರ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಶಿವನ ಕೃಪೆಯಿಂದ ಜೀವನದ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಮಹಾಶಂಕರನು ತನ್ನ ಪ್ರತಿಯೊಬ್ಬ ಭಕ್ತರ ತೊಂದರೆಗಳನ್ನು ತೆಗೆದುಹಾಕುತ್ತಾನೆ, ಆದರೆ ಜ್ಯೋತಿಷ್ಯದಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳು ಶಿವನ ನೆಚ್ಚಿನ ರಾಶಿಯವರಾಗಿರುತ್ತಾರೆ. ಈ ರಾಶಿಗಳಿಗೆ ಶಿವನ ವಿಶೇಷ ಕೃಪೆ ಪ್ರಾಪ್ತವಾಗಿರುತ್ತದೆ. ಈ ರಾಶಿಯವರು ಶಿವನ ಆರಾಧನೆ ಮಾಡಿದರೆ ಸಕಲ ಸುಖ ಪ್ರಾಪ್ತವಾಗುತ್ತದೆ. ಆ ರಾಶಿಗಳ ಯಾವುವು ಎಂದು ತಿಳಿಯೋಣ.
Vijaya Karnataka Web these 4 zodiac signs are the most favourite sign of lord shiva
ಪರಶಿವನ ನೆಚ್ಚಿನ ರಾಶಿಗಳಿವು..! ನಿಮ್ಮ ರಾಶಿಯೂ ಇದೆಯಾ ನೋಡಿ..



​ಮೇಷ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಅಧಿಪತಿ ಮಂಗಳ. ಮಂಗಳವನ್ನು ಶಿವನ ಭಾಗವೆಂದು ಪರಿಗಣಿಸಲಾಗಿದೆ. ಅವರ ಕೃಪೆಯಿಂದ ಈ ರಾಶಿಯವರು ಜೀವನದಲ್ಲಿ ಶಿವನ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ. ಮೇಷ ರಾಶಿಯವರು ಸೋಮವಾರದಂದು ವಿಧಿವತ್ತಾಗಿ ಶಿವನನ್ನು ಪೂಜಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ಅವರ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ.

ಸಿಂಹ ರಾಶಿಗೆ ಸೂರ್ಯ: ಈ ರಾಶಿಯವರು ಎಚ್ಚರಿಕೆ ವಹಿಸುವುದು ಅತ್ಯಗತ್ಯ..!

​ವೃಶ್ಚಿಕ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಇದೇ ಕಾರಣಕ್ಕಾಗಿ ಈ ರಾಶಿಯವರ ಮೇಲೆ ಶಿವನ ವಿಶೇಷ ಕೃಪೆ ಪ್ರಾಪ್ತಿಯಾಗಿದೆ. ಈ ರಾಶಿಯ ವ್ಯಕ್ತಿಗಳು ಪ್ರತಿ ಸೋಮವಾರದಂದು ಶಿವಲಿಂಗಕ್ಕೆ ಜಲವನ್ನು ಅರ್ಪಿಸಬೇಕು.ಅಷ್ಟೆ ಅಲ್ಲದೆ ಯಾವುದೇ ಭಯವಿದ್ದರೂ ಅದರಿಂದ ಮುಕ್ತಿಯನ್ನು ಪಡೆಯ ಬಹುದಾಗಿದೆ. ಈ ರೀತಿ ಮಾಡುವುದರಿಂದ ಅವರ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.

​ಮಕರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ಸಂಕ್ರಾಂತಿಯು ಶಿವನ ನೆಚ್ಚಿನ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾಗಿದೆ. ಈ ರಾಶಿಚಕ್ರದ ಅಧಿಪತಿ ಶನಿ ದೇವನು ಶಿವನ ಪ್ರಿಯ ಭಕ್ತ. ಆದ್ದರಿಂದ ಮಕರ ರಾಶಿಯವರಿಗೆ ಶಿವನ ವಿಶೇಷ ಕೃಪೆ ಇರುತ್ತದೆ. ಈ ರಾಶಿಯ ಜನರು ಸೋಮವಾರದಂದು ಶಿವಲಿಂಗಕ್ಕೆ ಬಿಲ್ಪಪತ್ರೆ, ಗಂಗಾಜಲ, ಹಸುವಿನ ಹಾಲನ್ನು ಅರ್ಪಿಸಿದರೆ ಅವರ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ ಎಲ್ಲ ಕೆಲಸಗಳಲ್ಲೂ ಯಶಸ್ಸನ್ನು ಕಾಣಬಹುದು.

​ಕುಂಭ

ಕುಂಭ ರಾಶಿಯ ಅಧಿಪತಿ ದೇವರು ಸಹ ಶನಿ ಗ್ರಹವಾಗಿದೆ. ಹಾಗಾಗಿ ಶಿವನ ಕೃಪೆ ಈ ರಾಶಿಯವರ ಮೇಲೆ ಹೆಚ್ಚಾಗಿ ಇರುತ್ತದೆ. ಶನಿದೇವನ ವಿಶೇಷ ಕೃಪೆಯೊಂದಿಗೆ ಈ ರಾಶಿಯವರಿಗೆ ಶಿವನ ಆಶೀರ್ವಾದವೂ ಹೆಚ್ಚು ಇರುತ್ತದೆ. ಕುಂಭ ರಾಶಿಯವರು ಶಿವನನ್ನು ಪೂಜಿಸಿದರೆ ಸುಲಭವಾಗಿ ಶಿವನನ್ನು ಮೆಚ್ಚಿಸಬಹುದು. ಹಾಗಾಗಿ ಈ ರಾಶಿಯ ವ್ಯಕ್ತಿಗಳಿಗೆ ಶಿವನ ಆಶೀರ್ವಾದವಿರುತ್ತದೆ. ಈ ರಾಶಿಯ ವ್ಯಕ್ತಿಗಳು ಶಿವಲಿಂಗಕ್ಕೆ ಜಲವನ್ನು ಅರ್ಪಿಸುವುದರಿಂದ ಇವರ ಮನೋಕಾಮನೆಗಳು ಈಡೇರುತ್ತವೆ.

ವೃಷಭ ರಾಶಿಗೆ ಕುಜ ಸಂಚಾರ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ