ಮಿಥುನ ರಾಶಿ
ಮಿಥುನ ರಾಶಿಯವರು ಸುಲಭವಾಗಿ ಹೊಂದಿಕೊಂಡು ಹೋಗುವಂತಹ ವ್ಯಕ್ತಿ. ಇವರು ಉತ್ತಮ ಸ್ನೇಹಿತರಾಗಬಹುದು ಹೊರತು ಉತ್ತಮ ಸಂಗಾತಿಯಾಗಲಾರರು. ಸ್ನೇಹಿತರಾದರೂ ಸಾಲವನ್ನು ಮರುಪಾವತಿಸುವಂತಹ ಸಂದರ್ಭದಲ್ಲಿ ಇವರ ಕೈ ಬಿಗಿಯಾಗಬಹುದು. ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುವ ಅಭ್ಯಾಸದಿಂದಾಗಿ ಅವರಿಗೆ ಆಗಾಗ್ಗೆ ಹಣದ ಕೊರತೆ ಇರುತ್ತದೆ. ಈ ಕಾರಣದಿಂದಾಗಿ ಇವರು ಇತರರ ಹಣವನ್ನು ಹಿಂದಿರುಗಿಸುವಲ್ಲಿ ಯಾವಾಗಲೂ ಹಿಂದೆ ಇರುತ್ತಾರೆ.
ಪ್ರೀತಿ- ಪ್ರೇಮದಲ್ಲಿ ಈ ರಾಶಿಯವರನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಂತೆ..!
ಮಕರ ರಾಶಿ
ಮಕರ ರಾಶಿಯವರು ತುಂಬಾ ಶ್ರಮ ವಹಿಸುವವರು ಮತ್ತು ಅವರು ಸಾಕಷ್ಟು ಹಣವನ್ನು ಹೊಂದಿರುತ್ತಾರೆ. ಶನಿಯ ಒಡೆತನದ ಈ ರಾಶಿಯವರು ಸಾಕಷ್ಟು ಹಣವನ್ನು ಸಂಪಾದಿಸುತ್ತಾರೆ. ಆದರೆ ಹಣವು ಅವರ ಜೇಬಿನಿಂದ ಹೊರಬರುವುದಿಲ್ಲ. ಅವರೊಂದಿಗೆ ಹೊರಗೆ ಹೋಗುವಾಗ ಅಥವಾ ಡಿನ್ನರ್ಗೆ ಹೋಗುವಾಗ ಅವರ ಬಗ್ಗೆ ತಿಳಿದುಕೊಳ್ಳಿ ಹಾಗೂ ನಿಮ್ಮ ಪರ್ಸ್ ನೋಡಿಕೊಳ್ಳಿ, ಇಲ್ಲವಾದರೆ ನೀವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚು, ಹಣ ಕೊಡುವುದೇ ಜಾಸ್ತಿಯಾಗಿರುತ್ತದೆ.
ಧನುಸ್ಸು ರಾಶಿ
ಈ ರಾಶಿಯವರು ದುಬಾರಿ ಸ್ವಭಾವವನ್ನು ಹೊಂದಿದವರಾಗಿದ್ದು, ಇವರೊಂದಿಗೆ ಹೋದರೆ ಯಾವುದೇ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಇವರು ಪ್ರಯಾಣ ಹಾಗೂ ದುಬಾರಿ ವಸ್ತುಗಳನ್ನು ಖರೀದಿಸಲು ತುಂಬಾ ಇಷ್ಟಪಡುತ್ತಾರೆ. ಇವರು ಇತರರಿಂದ ಸಾಲ ಪಡೆಯುವ ಮೂಲಕವಾದರೂ ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಆ ಹಣವನ್ನು ಮತ್ತೆ ಹಿಂದಿರುಗಿಸುವುದಿಲ್ಲ. ಆದ್ದರಿಂದ ಧನು ರಾಶಿಯವರಿಗೆ ಕೆಲವೊಂದು ಸಂದರ್ಭಗಳಲ್ಲಿ ಸಾಲ ನೀಡದಿರುವುದು ಉತ್ತಮ.
ಈ ಆರು ರಾಶಿಯವರು ತಮ್ಮ ಶ್ರಮ ಮತ್ತು ಅದೃಷ್ಟದಿಂದ ಬೇಗನೆ ಶ್ರೀಮಂತರಾಗುತ್ತಾರಂತೆ..!
ಸಿಂಹ ರಾಶಿ
ಈ ರಾಶಿಯವರು ಸಿಂಹ ನೋಟವನ್ನು ಹೊಂದಿರುವವರು. ಅವರಿಗೆ ಸಾಲ ನೀಡುವಂತಹ ಕೆಲಸ ಮಾಡಬಾರದು. ಒಮ್ಮೆ ಅವರು ಯಾರಿಂದಲಾದರೂ ಸಾಲವನ್ನು ತೆಗೆದುಕೊಂಡರೆ, ಅದನ್ನು ಸಾಲವೆಂದು ಅಂದುಕೊಳ್ಳದೇ ಅದು ತಮ್ಮದೇ ಎನ್ನುವ ಮನೋಸ್ಥಿತಿ ಬೆಳೆಸಿಕೊಳ್ಳುತ್ತಾರೆ ಹಾಗೂ ಸಾಲವನ್ನು ಹಿಂದಿರುಗಿಸಲು ಕೂಡಾ ಯೋಚನೆ ಮಾಡುವುದಿಲ್ಲ. ಆದ್ದರಿಂದ ಸಾಲ ಕೊಡುವ ಸಂದರ್ಭ ಬಂದಾಗ ಇಂತವರಿಂದ ದೂರವಿರುವುದು ಉತ್ತಮ.
ವೃಶ್ಚಿಕ ರಾಶಿ
ಈ ರಾಶಿಯವರನ್ನು ಬಹಳ ಬುದ್ಧಿವಂತರೆಂದು ಕರೆಯಲಾಗುತ್ತದೆ.ಇವರು ಇತರರಿಂದ ಹಣವನ್ನು ಸಾಲ ಪಡೆಯುವ ಮೂಲಕ ತಮ್ಮ ಕೆಲಸವನ್ನು ಮಾಡುತ್ತಾರೆ ಮತ್ತು ಹಣವನ್ನು ಹೇಗೆ ಖರ್ಚು ಮಾಡಬೇಕೆನ್ನುವುದು ಕೂಡಾ ಇವರಿಗೆ ತಿಳಿದಿದೆ. ಆದರೆ ಇವರ ಸ್ವಾರ್ಥ ಬುದ್ಧಿಯಿಂದಾಗಿ ಹಣವನ್ನು ಸಾಲವಾಗಿ ಪಡೆದಿದ್ದನ್ನು ಮರೆಯುತ್ತಾರೆ ಹಾಗೂ ಮರೆಯುವಂತೆ ಮಾಡುತ್ತಾರೆ.
ಜ್ಯೋತಿಷ್ಯದ ಪ್ರಕಾರ ಹನ್ನೆರಡು ರಾಶಿಗಳ ಈ ಗುಣಗಳೇ ಅವರ ದೌರ್ಬಲ್ಯಗಳಂತೆ..!