ಆ್ಯಪ್ನಗರ

ಈ 5 ರಾಶಿಯ ಹುಡುಗಿಯರು ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಜಾಣರು..!

ಪ್ರೀತಿ - ಪ್ರೇಮದ ವಿಷಯದಲ್ಲಿ ಯಾರ ಮನಸ್ಸು ಹೇಗೆ ಇರುತ್ತದೆ ಎನ್ನುವುದನ್ನು ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯ ಹುಡುಗಿಯರು ತಮ್ಮ ಪ್ರೀತಿಯನ್ನು ಬಹುಬೇಗ ವ್ಯಕ್ತಪಡಿಸುತ್ತಾರೆ. ಆ ರಾಶಿಗಳಾವುವು..? ಯಾವ ರಾಶಿಯ ಹುಡುಗಿಯರು ಪ್ರೀತಿಯನ್ನು ಬೇಗ ಹೇಳುತ್ತಾರೆ..?

Vijaya Karnataka Web 3 Feb 2021, 5:36 pm
ಪ್ರಾಯಕ್ಕೆ ಬಂದ ಪ್ರತಿಯೊಬ್ಬ ವ್ಯಕ್ತಿಯೂ ವಿರುದ್ಧ ಲಿಂಗದವರನ್ನು ಪ್ರೀತಿಸಲು ಬಯಸುತ್ತಾರೆ. ಪ್ರೀತಿಯೇ ಜೀವನಕ್ಕೆ ಆಧಾರ. ಹಾಗಾಗಿ ಪ್ರತಿಯೊಬ್ಬರು ತಮ್ಮ ಮನಸ್ಸಿಗೆ ಇಷ್ಟವಾಗುವ ಸಂಗಾತಿಯನ್ನು ಹೊಂದಲು ಬಯಸುತ್ತಾರೆ. ಆದರೆ ಪ್ರೀತಿಯ ವಿಷಯದಲ್ಲಿ ಯಾರ ಮನಸ್ಸು ಹೇಗೆ ಇರುತ್ತದೆ ಎನ್ನುವುದನ್ನು ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿ ಚಕ್ರದ ಮಹಿಳೆಯರು ಬಹುಬೇಗ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಎಂದು ಹೇಳಲಾಗುವುದು.
Vijaya Karnataka Web these zodiac sign girls express their love feelings at first sight
ಈ 5 ರಾಶಿಯ ಹುಡುಗಿಯರು ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಜಾಣರು..!


​* ಕರ್ಕ ರಾಶಿಯ ಹುಡುಗಿಯರು:

ಈ ರಾಶಿಯ ಹುಡುಗಿಯರು ಭಾವನಾತ್ಮಕವಾಗಿ ಹೆಚ್ಚು ಪ್ರಭಲರಾಗಿರುತ್ತಾರೆ. ಪ್ರೀತಿಯ ವಿಷಯದಲ್ಲಿ ಅವರು ಸಂವೇದನಾ ಶೀಲರು. ಇವರು ತಮ್ಮ ಪ್ರೀತಿಯನ್ನು ಬಹಳ ನಾಜೂಕಿನಿಂದ ಪೋಷಿಸುವರು. ತಮ್ಮ ಜೀವನದಲ್ಲಿ ಪ್ರೀತಿಯನ್ನು ಸಕಾರಾತ್ಮಕವಾಗಿ ಕಾಪಾಡಿಕೊಳ್ಳಲು ಪ್ರಯತ್ನಿಸುವರು. ಇವರು ತಮ್ಮ ಸಂಗಾತಿಯೊಂದಿಗೆ ಸಣ್ಣ ಪುಟ್ಟ ಸಂಗತಿಗಳಿಗಾಗಿ ಕಿತ್ತಾಡಲು ಬಯಸುವುದಿಲ್ಲ. ತನ್ನ ಸಂಗಾತಿ ಅಥವಾ ಪತಿ ತನ್ನನ್ನು ಹೆಚ್ಚು ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದು ಬಯಸುತ್ತಾರೆ.

ಫೆಬ್ರವರಿಯಲ್ಲಿ ರಾಶಿಗನುಗುಣವಾಗಿ ಬಣ್ಣದ ಬಟ್ಟೆ ಧರಿಸಿದರೆ ಅದೃಷ್ಟ..!

​* ಮಿಥುನ ರಾಶಿಯ ಹುಡುಗಿಯರು:

ಈ ರಾಶಿಯ ಹುಡುಗ ಮತ್ತು ಹುಡುಗಿಯರು ಹೆಚ್ಚು ಸಂತೋಷದಿಂದ ಇರುತ್ತಾರೆ. ಇವರು ತಮ್ಮೊಂದಿಗೆ ಇರುವವರೊಂದಿಗೆ ಇರುವವರನ್ನು ಹೆಚ್ಚು ಖುಷಿಯಲ್ಲಿ ಇಡುತ್ತಾರೆ. ಇತರರನ್ನು ಸಹ ನಗಿಸಲು ಪ್ರಯತ್ನಿಸುತ್ತಾರೆ. ಪ್ರೀತಿಯ ವಿಷಯದಲ್ಲಿ ಈ ರಾಶಿಯ ಹುಡುಗಿಯರು ಅತ್ಯಂತ ಮುಗ್ಧರಾಗಿರುತ್ತಾರೆ. ಜೊತೆಗೆ ಮುಕ್ತವಾದ ಮಾನಸಿಕ ಸ್ಥಿತಿಯನ್ನು ಹೊಂದಿರುತ್ತಾರೆ. ಇವರು ತಮ್ಮ ಪ್ರೀತಿ ಮತ್ತು ಸಂಗಾತಿಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಇವರು ಸದಾ ಕಾಲ ಸಂಗಾತಿಯೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಅದು ಸಂತೋಷದ ಕ್ಷಣವಾಗಿರಲಿ ಅಥವಾ ದುಃಖದ ಸಂಗತಿಯೇ ಆಗಿರಲಿ. ತಮ್ಮ ಕೈಲಾದ ಸಹಾಯ ಹಾಗೂ ಸಾಂತ್ವನವನ್ನು ಮಾಡುತ್ತಾರೆ.

ಶ್ರೀಯಂತ್ರದಿಂದ ಉದ್ಯೋಗದ ಸಮಸ್ಯೆಯೇ ಬಾರದು..! ಇಲ್ಲಿದೆ ಜ್ಯೋತಿಷ್ಯ ಪರಿಹಾರ

​* ಸಿಂಹ ರಾಶಿಯ ಹುಡುಗಿಯರು:

ಪ್ರೀತಿಯ ವಿಷಯದಲ್ಲಿ ಸಿಂಹ ರಾಶಿಯ ಹುಡುಗಿಯರು ಸಹ ಬದ್ಧರು ಮತ್ತು ಪ್ರಾಮಾಣಿಕರಾಗಿರುತ್ತಾರೆ. ಇವರು ಸದಾ ಕಾಲ ತಮ್ಮ ಪಾಲುದಾರರೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತಾರೆ. ಪ್ರೀತಿಯ ವಿಷಯದಲ್ಲಿ ಸದಾ ಕಾಲ ಉತ್ಸಾಹದಲ್ಲಿ ಇರುತ್ತಾರೆ. ಸಂಗಾತಿಯನ್ನು ನೋಡಿಕೊಳ್ಳುವುದು ಅಥವಾ ಅವರನ್ನು ಮುದ್ದಿಸುವ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಇವರು ಮೊದಲ ನೋಟದಲ್ಲಿಯೇ ಒಪ್ಪಿಕೊಂಡಿದ್ದರೂ ಸಹ ಅವರ ಜೀವನದ ಉದ್ದಕ್ಕೂ ಪ್ರೀತಿಗೆ ಬದ್ಧರಾಗಿ ಇರುತ್ತಾರೆ.

ಈ 4 ರಾಶಿಯ ಹುಡುಗರಿಗೆ ಬೀಳದ ಹುಡುಗಿಯರೇ ಇಲ್ಲ..! ನಿಮ್ಮ ರಾಶಿಯೂ ಇದೆಯೇ..?

​* ಮೇಷ ರಾಶಿಯ ಹುಡುಗಿಯರು:

ಈ ರಾಶಿಯ ಹುಡುಗಿಯರು ಮೊದಲ ನೋಟದಲ್ಲಿಯೇ ಪ್ರೀತಿಗೆ ಬೀಳುತ್ತಾರೆ. ಅದನ್ನು ಉಳಿಸಿಕೊಳ್ಳಲು ಸದಾ ಕಾಲ ಸಿದ್ಧರಾಗಿ ಇರುತ್ತಾರೆ. ತಮ್ಮ ಪ್ರೀತಿಯ ಜೀವನದಲ್ಲಿ ಸದಾ ಕಾಲ ಹೊಸತನವನ್ನು ತರಲು ಪ್ರಯತ್ನಿಸುತ್ತಾರೆ. ಇವರು ಸಹ ತಮ್ಮ ಪ್ರೀತಿ ಅಥವಾ ಸಂಗಾತಿಯೊಂದಿಗೆ ಸದಾ ಕಾಲ ಇರಲು ಬಯಸುವರು. ಮಂಗಳನ ಪ್ರಭಾವ ಇರುವುದರಿಂದ ಕೆಲವೊಮ್ಮೆ ಇವರು ಶೀಘ್ರವಾಗಿ ಕೋಪಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಆದರೆ ಅಷ್ಟೇ ಶೀಘ್ರದಲ್ಲಿ ಅವರ ಕೋಪವು ಸಹ ತಣಿಯುವುದು. ತಮ್ಮ ಪ್ರೀತಿಗಾಗಿ ನಿಲ್ಲುವರು.

ತಲೆ ಕೂದಲು ಉದುರಿದರೆ ಶನಿ ಕಾಟ..! ಶನಿ ಕಾಟದ ಸೂಚನೆಗಳಿವು

​* ತುಲಾ ರಾಶಿಯ ಹುಡುಗಿಯರು:

ತುಲಾ ರಾಶಿಯನ್ನು ಶುಕ್ರನು ಆಳುವನು. ಶುಕ್ರನ ಪ್ರಭಾವದಿಂದ ಈ ರಾಶಿಯ ಹುಡುಗಿಯರು ತಮ್ಮ ಪ್ರೀತಿ ಪಾತ್ರರ ಬಗ್ಗೆ ಹೆಚ್ಚು ಪ್ರೀತಿ ಹಾಗೂ ಕಾಳಜಿಯಿಂದ ನೋಡುವರು. ಈ ರಾಶಿಯವರು ಸ್ವಲ್ಪ ಸ್ವಾಭಿಮಾನದ ಹುಡುಗಿಯರಾಗಿರುತ್ತಾರೆ. ತಮ್ಮ ಪಾಲುದಾರರನ್ನು ಹಾಗೂ ಪ್ರೀತಿ ಪಾತ್ರರನ್ನು ಹೆಚ್ಚು ಪ್ರೀತಿಸುತ್ತಾರೆ. ತಮ್ಮ ಪ್ರೀತಿಯ ನಡುವೆ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಲು ಬಯಸುವುದಿಲ್ಲ. ಯಾರೊಂದಿಗೆ ಸಂಬಂಧದಲ್ಲಿ ಇರುತ್ತಾರೋ ಅವರೊಂದಿಗೆ ಪೂರ್ಣ ಹೃದಯದಿಂದ ಇರುತ್ತಾರೆ. ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ.

ಅಂಗೈಯಲ್ಲಿ ಈ ರೇಖೆಗಳಿದ್ದರೆ ದಾಂಪತ್ಯ ಜೀವನವೇ ಸರ್ವನಾಶ..! ನಿಮ್ಮಲ್ಲಿದ್ದರೆ ಎಚ್ಚರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ