ಆ್ಯಪ್ನಗರ

ಈ 4 ರಾಶಿಯ ಹುಡುಗರಿಗೆ ಬೀಳದ ಹುಡುಗಿಯರೇ ಇಲ್ಲ..! ನಿಮ್ಮ ರಾಶಿಯೂ ಇದೆಯೇ..?

ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಈ 4 ರಾಶಿಯ ಹುಡುಗರು ಬಹುಬೇಗ ಹುಡುಗಿಯರನ್ನು ಆಕರ್ಷಿಸುತ್ತಾರೆ ಎನ್ನಲಾಗಿದೆ. ಆ 4 ರಾಶಿಗಳು ಯಾವುವು..? ಸಂಗಾತಿಯ ವಿಚಾರದಲ್ಲಿ ಈ 4 ರಾಶಿಯವರ ವರ್ತನೆ ಹೇಗಿರುತ್ತದೆ..? ನಿಮ್ಮ ಸಂಗಾತಿಯ ರಾಶಿಯೂ ಇದೇ ಆಗಿರಬಹುದು..

Vijaya Karnataka Web 28 Jan 2021, 1:59 pm
ಸಾಮಾನ್ಯವಾಗಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸಂಗಾತಿ ಹಾಗೂ ಪ್ರೀತಿಗಾಗಿ ವಿಶೇಷ ಸ್ಥಾನ ನೀಡುತ್ತಾರೆ. ಸಂಬಂಧ, ಪ್ರೀತಿ ಹಾಗೂ ಸಂಗಾತಿಯ ವಿಷಯದಲ್ಲಿ ಅಹಿತಕರ ಸಂಗತಿ ನಡೆದರೆ ಅದು ಮನಸ್ಸಿಗೆ ಹೆಚ್ಚು ಪರಿಣಾಮ ಬೀರುವುದು. ಹಾಗಾಗಿ ವಿವಾಹ ಮತ್ತು ಜೀವನದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿ ಇರಲು ಬಯಸುವರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರು ತಮ್ಮ ಕುಂಡಲಿಗೆ ಅನುಗುಣವಾಗಿ ಸಂಗಾತಿಯನ್ನು ಪಡೆದುಕೊಳ್ಳುವರು. ಜೊತೆಗೆ ಅವರ ಪ್ರೀತಿಗೆ ಪಾತ್ರರಾಗುವರು. ಜ್ಯೋತಿಷ್ಯದ ತುಲನೆಯ ಪ್ರಕಾರ ಕೆಲವು ರಾಶಿ ಚಕ್ರದ ಹುಡುಗರು ತಮ್ಮ ಸಂಗಾತಿಗಳನ್ನು ಹೆಚ್ಚು ಪ್ರೀತಿಯಿಂದ ನೋಡುವರು. ಜೊತೆಗೆ ಅವರು ಬಹಳ ಸುಲಭವಾಗಿ ವಿರುದ್ಧ ಲಿಂಗದವರನ್ನು ಆಕರ್ಷಿಸುವರು.
Vijaya Karnataka Web ಈ 4 ರಾಶಿಯ ಹುಡುಗರಿಗೆ ಬೀಳದ ಹುಡುಗಿಯರೇ ಇಲ್ಲ..! ನಿಮ್ಮ ರಾಶಿಯೂ ಇದೆಯೇ..?


* ಮಿಥುನ ರಾಶಿಯ ಹುಡುಗರು:
ಹುಡುಗಿಯರ ಮನವೊಲಿಸುವ ವಿಷಯದಲ್ಲಿ ಮಿಥುನ ರಾಶಿಯವರು ಮೇಲುಗೈ ಸಾಧಿಸುತ್ತಾರೆ. ಇವರಿಗೆ ಹುಡುಗಿಯರ ಮನ ಗೆಲ್ಲುವುದು ಹೇಗೆ? ಎನ್ನುವುದು ಸುಲಭವಾಗಿ ತಿಳಿದಿರುತ್ತಾರೆ. ಅವರ ಮಧುರ ಮಾತುಗಳು ಮಹಿಳೆಯರನ್ನು ಹೆಚ್ಚು ಆಕರ್ಷಿಸುವುದು. ಹುಡುಗಿಯರ ಮನ ಗೆಲ್ಲಲು ಅಧಿಕ ಶ್ರಮ ವಹಿಸುವ ಅಗತ್ಯವಿರುವುದಿಲ್ಲ. ಸುಲಭವಾಗಿ ಅವರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಳ್ಳುವರು.

ನಾಳೆ ಗುರು ಪುಷ್ಯ ಯೋಗ..! ಏನಿದರ ಪ್ರಯೋಜನ? ಇಲ್ಲಿದೆ ಮಹತ್ವ

* ಸಿಂಹ ರಾಶಿಯ ಹುಡುಗರು:

ಸಿಂಹ ರಾಶಿಯ ಹುಡುಗರು ಹುಡುಗಿಯರ ವಿಷಯದಲ್ಲಿ ಅತ್ಯಂತ ಅದೃಷ್ಟ ಶಾಲಿಗಳು ಎಂದು ಪರಿಗಣಿಸಲಾಗುವುದು. ಈ ರಾಶಿಯ ಹುಡುಗರು ಶುದ್ಧ ಮನಸ್ಸನ್ನು ಹೊಂದಿರುತ್ತಾರೆ. ಇವರ ನಿಸ್ವಾರ್ಥದ ಸ್ವಭಾವದಿಂದಲೇ ಹುಡುಗಿಯರು ಆಕರ್ಷಿತರಾಗುತ್ತಾರೆ. ಇವರ ಸಂಬಂಧ ಹಾಗೂ ಪ್ರೀತಿಯಲ್ಲಿ ಸದಾ ಮಾಧುರ್ಯ ಇರುತ್ತದೆ. ಇವರ ಪ್ರಣಯ ಪೂರಕವಾದ ಸ್ವಭಾವದೊಂದಿಗೆ ಹುಡುಗಿಯರು ಒಂದಿಷ್ಟು ಸಮಯವನ್ನು ಕಳೆಯಲು ಬಯಸುವರು. ಈ ರಾಶಿಯ ಹುಡುಗರಲ್ಲಿ ಸ್ನೇಹಪರ ಹಾಗೂ ಕಾಳಜಿಯುಳ್ಳ ಸ್ವಭಾವ ಇರುತ್ತದೆಗಿವರನ್ನು ಹುಡುಗಿಯರು ಸುಲಭವಾಗಿ ಸ್ನೇಹಿತರನ್ನಾಗಿ ಸ್ವೀಕರಿಸುತ್ತಾರೆ.

ನಾಳೆ ಮಕರ ರಾಶಿಗೆ ಶುಕ್ರನ ಆಗಮನ: ಈ 6 ರಾಶಿಯವರಿಗೆ ಶುಕ್ರದೆಸೆ ಆರಂಭ..!

* ತುಲಾ ರಾಶಿಯ ಹುಡುಗರು:

ಈ ರಾಶಿಯವರನ್ನು ಶುಕ್ರನು ಆಳುವನು. ಹುಡುಗಿಯರು ಈ ರಾಶಿಯವರನ್ನು ಪ್ರೀತಿಸಲು ಇದೂ ಒಂದು ಕಾರಣವಾಗಿರುತ್ತದೆ. ಈ ರಾಶಿಯ ಹುಡುಗರ ಪ್ರೀತಿ ಹಾಗೂ ಪ್ರೀತಿಯಿಂದ ತುಂಬಿರುವ ಅವರ ಮಾತುಗಳು ಹುಡುಗಿಯರನ್ನು ಆಕರ್ಷಿಸುವುದು. ಇವರು ಹುಡುಗಿಯರೊಂದಿಗೆ ಮಾತನಾಡುವ ಶೈಲಿಯು ಇತರರಿಗಿಂತ ಭಿನ್ನವಾಗಿರುತ್ತದೆ. ಪ್ರೀತಿಯ ವಿಷಯದಲ್ಲಿ ಈ ರಾಶಿಯ ಹುಡುಗರು ಬಹಳ ನಿಷ್ಠಾವಂತರು ಎಂದು ಪರಿಗಣಿಸಲಾಗುವುದು. ಇವರು ಸ್ವಭಾವದಲ್ಲಿ ಸ್ವಲ್ಪ ನಾಚಿಕೆಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಹಾಗಾಗಿ ಹುಡುಗಿಯರು ಸಹ ಇವರನ್ನು ಇಷ್ಟಪಡುವರು.

Vara Bhavishya: ಜನವರಿ ಕೊನೆಯ ವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ..? ತಿಳಿದುಕೊಳ್ಳಿ

* ಮಕರ ರಾಶಿಯ ಹುಡುಗರು:

ಈ ರಾಶಿಯನ್ನು ಶನಿಯು ಆಳುವನು. ಹಾಗಾಗಿ ಈ ರಾಶಿಯ ಹುಡುಗರು ಸ್ವಭಾವತಃ ಅತ್ಯಂತ ಶಾಂತ ಮತ್ತು ಸರಳವಾದ ಗುಣವನ್ನು ಹೊಂದಿರುತ್ತಾರೆ. ಇವರ ಈ ಗುಣವನ್ನು ಹುಡುಗಿಯರು ಬಹಳ ಇಷ್ಟಪಡುತ್ತಾರೆ. ಇವರು ವ್ಯಕ್ತಿತ್ವದಲ್ಲಿ ಅತ್ಯಂತ ಆಕರ್ಷಿತರಾಗಿರುತ್ತಾರೆ. ಇತರರಿಗೆ ಹೋಲಿಸಿದರೆ ಇವರ ಮಾತಿನ ಶೈಲಿ ಹಾಗೂ ವರ್ತನೆಗಳು ಅತ್ಯಂತ ಆಕರ್ಷಕ ಹಾಗೂ ವಿಭಿತೆಯಿಂದ ಕೂಡಿರುತ್ತದೆ. ಇವರು ಅತ್ಯಂತ ಚಾಣಾಕ್ಷರು ಹಾಗೂ ಬುದ್ಧಿವಂತರೂ ಆಗಿರುತ್ತಾರೆ. ಹಾಗಾಗಿ ಹುಡುಗಿಯರು ಬಹುಬೇಗ ಆಕರ್ಷಿತರಾಗುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತ..! ಯಾವ ನಕ್ಷತ್ರವಿದು..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ