ಆ್ಯಪ್ನಗರ

2020 Hero: ಹೀರೋ ದಿಂದ ಇನ್ನೊಂದು ಬಿಎಸ್‌6 ಸ್ಕೂಟರ್‌ ಯಾವುದು ಗೊತ್ತಾ..?

ಬಿಎಸ್‌6 ಹೀರೋ ಡೆಸ್ಟಿನಿ 125 ಸ್ಕೂಟರ್‌ನ್ನು ಭಾರತೀಯ ವಾಹನ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು, ಈ ಬಿಎಸ್‌6 ಡೆಸ್ಟಿನಿಯು ಬಿಎಸ್‌4 ಡೆಸ್ಟಿನಿಗಿಂತಲೂ ಹೆಚ್ಚಿನ ಮೈಲೇಜ್‌ನ್ನು ನೀಡುತ್ತದೆ.

Agencies 20 Feb 2020, 5:05 pm
ಹೀರೋ ಮೋಟೋಕಾರ್ಪ್‌ ಈಗಷ್ಟೇ ಬಿಎಸ್‌6 ಡೆಸ್ಟಿನಿ 125 ಸ್ಕೂಟರ್‌ನ್ನು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಬಿಎಸ್‌6 ಡೆಸ್ಟಿನಿಯನ್ನು ಭಾರತದಲ್ಲಿ ಗ್ರಾಹಕರು 64,310 ರೂಪಾಯಿಗಳ ಎಕ್ಸ್‌ ಶೋರೂಂ ಬೆಲೆಯಿಂದ ಖರೀದಿಸಬಹುದಾಗಿದೆ.
Vijaya Karnataka Web BS6 Hero Destini 125
ಬಿಎಸ್‌6 ಹೀರೋ ಡೆಸ್ಟಿನಿ 125


2020 Hyundai: ಬಿಎಸ್‌6 ಹ್ಯುಂಡೈ ವೆನ್ಯು ಬಿಡುಗಡೆ..ಎಷ್ಟಿದೆ ಗೊತ್ತಾ ಬೆಲೆ?

ಭಾರತದ ದ್ವಿ ಚಕ್ರ ವಾಹನ ಮಾರುಕಟ್ಟೆಯಲ್ಲಿರುವ 125 ಸಿಸಿ ಎಂಜಿನ್‌ನ ಸ್ಕೂಟರ್‌ಗಳಿಗೆ ಬಿಎಸ್‌6 ಡೆಸ್ಟಿನಿಯ ಬೆಲೆಯನ್ನು ಹೋಲಿಸಿದರೆ ಇದರ ಬೆಲೆಯು ಬೇರೆಲ್ಲಾ ಸ್ಕೂಟರ್‌ಗಿಂತ ಕಡಿಮೆಯಿದೆ ಎನ್ನಬಹುದು.

ಬಿಎಸ್‌6 ಹೀರೋ ಡೆಸ್ಟಿನಿ 125


ಬಿಎಸ್‌6 ಹೀರೋ ಡೆಸ್ಟಿನಿ ಸ್ಕೂಟರ್‌ನ್ನು ಭಾರತದಲ್ಲಿ ಎಲ್‌ಎಕ್ಸ್‌ ಮತ್ತು ವಿಎಕ್ಸ್‌ ಈ ಎರಡು ಆವೃತ್ತಿಗಳಲ್ಲಿ ಖರೀದಿಸಬಹುದಾಗಿದೆ. ಬಿಎಸ್‌6 ಡೆಸ್ಟಿನಿಯ ಎಲ್‌ಎಕ್ಸ್‌ ಆವೃತ್ತಿಯ ಬೆಲೆಗಿಂತಲೂ ವಿಕ್ಸ್‌ ಆವೃತ್ತಿಯ ಬೆಲೆಯು ಅಧಿಕವಾಗಿದ್ದು, ಈ ವಿಎಕ್ಸ್‌ ಆವೃತ್ತಿಯ ಎಕ್ಸ್‌ ಶೋರೂಂ ಬೆಲೆಯು 66,800 ರೂಪಾಯಿಗಳಾಗಿವೆ.

Celebrities Car: ಸೆಕೆಂಡ್‌ ಹ್ಯಾಂಡ್‌ ಕಾರು ತಕ್ಕೊಂಡ್ರಾ ಕೊಹ್ಲಿ, ಶಿಲ್ಪಾ ಶೆಟ್ಟಿ, ಯುವಿ..?

ಬಿಎಸ್‌6 ಹೀರೋ ಡೆಸ್ಟಿನಿ ಸ್ಕೂಟರ್‌ಗಳ ಈ ಎರಡೂ ಆವೃತ್ತಿಗಳು ಒಂದೇ ರೀತಿಯ ಎಂಜಿನ್‌ನ್ನು ಹೊಂದಿದ್ದರೂ ಕೂಡ ಎಲ್‌ಎಕ್ಸ್‌ ಆವೃತ್ತಿಯು ಚಾಲನೆಯಲ್ಲಿ ಹೊರಹಾಕುವ ಶಕ್ತಿಗಿಂತಲೂ ವಿಎಕ್ಸ್‌ ಆವೃತ್ತಿಯು ಹೊರಹಾಕುವ ಶಕ್ತಿಯು ಅಧಿಕವಾಗಿದೆ ಆದ್ದರಿಂದ ವಿಎಕ್ಸ್‌ ಆವೃತ್ತಿಯ ಬೆಲೆಯು ಎಲ್‌ಎಕ್ಸ್‌ ಗಿಂತ ಹೆಚ್ಚಿದೆ.

ಹೀರೋ ಬಿಡುಗಡೆಗೊಳಿಸಿದ ಬಿಎಸ್‌6 ಸ್ಕೂಟರ್‌


ಬಿಎಸ್‌6 ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು 124 ಸಿಸಿ ಸಿಂಗಲ್‌ ಸಿಲಿಂಡರ್ ಎಂಜಿನ್‌ನ್ನು ಒಳಗೊಂಡಿದ್ದು, ಈ ಎಂಜಿನ್‌ಗಳು 7000 ಆರ್‌ಪಿಎಂ ನಲ್ಲಿ 9 ಬಿಹೆಚ್‌ಪಿ ಶಕ್ತಿಯನ್ನು ಹಾಗೂ 5500 ಆರ್‌ಪಿಎಂ ನಲ್ಲಿ 10.4 ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸುತ್ತದೆ. ಬಿಎಸ್‌6 ಡೆಸ್ಟಿನಿ 125 ಸ್ಕೂಟರ್‌ಗಳು ಬಿಎಸ್‌4 ಡೆಸ್ಟಿನಿ 125 ಸ್ಕೂಟರ್‌ಗಳು ನೀಡುವ ಶಕ್ತಿಗಿಂತಲೂ 0.2 ಬಿಹೆಚ್‌ಪಿ ಯಷ್ಟು ಶಕ್ತಿಯನ್ನು ಅಧಿಕವಾಗಿ ಉತ್ಪಾದಿಸುತ್ತದೆ.

Indian Armed Force: ಭಾರತೀಯ ಸಶಸ್ತ್ರ ಪಡೆಗಾಗಿ ಕಾರ್ಗಿಲ್‌..ಎಷ್ಟಿದೆ ಗೊತ್ತಾ ಬೆಲೆ..?

ಬಿಎಸ್4 ಹೀರೋ ಡೆಸ್ಟಿನಿ 125 ಸ್ಕೂಟರ್‌ನಲ್ಲಿ ಕಾರ್ಬುರೇಟರ್‌ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು, ಆದರೆ ಬಿಎಸ್‌6 ಹೀರೋ ಡೆಸ್ಟಿನಿ 125 ಸ್ಕೂಟರ್‌ ನಲ್ಲಿ ಇಂಧನ ಇಂಜೆಕ್ಟ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೇ ಬಿಎಸ್‌6 ಡೆಸ್ಟಿನಿ 125 ಸ್ಕೂಟರ್‌ಗಳು ಬಿಎಸ್‌4 ಗಿಂತಲೂ ಶೇಕಡ 11ರಷ್ಟು ಹೆಚ್ಚಿನ ಮೈಲೇಜ್‌ನ್ನು ಚಾಲಕರಿಗೆ ಒದಗಿಸುತ್ತದೆ.


ಈ ಮೇಲಿನ ಅಂದರೆ ಈ ಮೇಲೆ ಹೇಳಿದ ಹಾಗೇ ಬಿಎಸ್‌6 ಡೆಸ್ಟಿನಿಯು ಬಿಎಸ್‌4 ಡೆಸ್ಟಿನಿಯ ಎಂಜಿನ್‌ಗಿಂತಲೂ ಹೆಚ್ಚಿನ ಕಾರ್ಯದಕ್ಷತೆಯನ್ನು ನೀಡಬಲ್ಲ ಎಂಜಿನ್‌ನ್ನು ಹೊಂದಿದೆಯೇ ಹೊರತು ಬೇರಾವ ವೈಶಿಷ್ಟ್ಯತೆಯಲ್ಲಾಗಲಿ, ವಿನ್ಯಾಸದಲ್ಲಿ ಅಭಿವೃದ್ಧಿಯನ್ನು ಅಥವಾ ಬದಲಾವಣೆಯನ್ನು ಪಡೆದುಕೊಂಡಿಲ್ಲ.

2020 BMW: ಕೈಗೆಟಕುವ ದರದಲ್ಲಿ ಬಿಎಂಡಬ್ಲ್ಯೂ 530ಐ ಸ್ಪೋರ್ಟ್‌ ಬಿಡುಗಡೆ

ಬಿಎಸ್‌5 ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು ಬಿಎಸ್‌4 ಡೆಸ್ಟಿನಿಯಂತೇ ಅರೆ ಡಿಜಿಟಲ್‌ ಇನ್ಸ್ಟ್ರುಮೆಂಟ್‌ ಕ್ಲಸ್ಟರ್‌ನ್ನು, ಸ್ಟಾರ್ಟ್‌ ಅಥವಾ ಸ್ಟಾಪ್‌ ತಂತ್ರಜ್ಞಾನ, ಅಲಾಯ್‌ ಚಕ್ರಗಳನ್ನು, ಬೂಟ್‌ ಲ್ಯಾಂಪ್‌ಗಳನ್ನು, ಮೊಬೈಲ್ ಚಾರ್ಜಂಗ್‌ನ್ನು, ಕ್ರೋಮ್‌ ವಿನ್ಯಾಸವನ್ನು, ಡ್ಯುಯೆಲ್‌ ಟೆಕ್ಸ್ಚರ್‌ ಆಸನವನ್ನೇ ಬಿಎಸ್‌6 ಡೆಸ್ಟಿನಿ 125 ಸ್ಕೂಟರ್‌ ಮುಂದುವರೆಸಿಕೊಂಡು ಬಂದಿದೆ.

ಬಿಎಸ್6 ಹೀರೋ ಡೆಸ್ಟಿನಿ ಸ್ಕೂಟರ್‌ನ ಮಿರರ್‌ ವ್ಯವಸ್ಥೆ


ಬಿಎಸ್‌6 ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು ಮಾಯೆಸ್ಟ್ರೋ ಎಡ್ಜ್‌ 125 ಸ್ಕೂಟರ್‌ನಂತೇ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದ್ದು, ಇದರ ವಿನ್ಯಾಸವು ಯುವ ಪೀಳಿಗೆಯನ್ನು ಆಕರ್ಷಿತಗೊಳಿಸುವಂತಿದೆ.

Porsche: ಮತ್ತೊಮ್ಮೆ ಪ್ರವೇಶಿಸಲಿದೆ 20 ನೇ ಶತಮಾನದ ಪೋರ್ಷೆ 914

ಬಿಎಸ್‌6 ಹೀರೋ ಡೆಸ್ಟಿನಿ 125 ಮೋಟಾರ್‌ ಸೈಕಲ್‌ಗಳು 125 ಸಿಸಿ ಎಂಜಿನ್‌ಗಳಲ್ಲೇ ಕಡಿಮೆ ಬೆಲೆಯನ್ನು ಪಡೆದಿರುವ ಸ್ಕೂಟರಾಗಿದೆ. ಬಿಎಸ್‌6 ಡೆಸ್ಟಿನಿ 125 ಸ್ಕೂಟರ್‌ಗಳು ಬಿಎಸ್‌4 ಡೆಸ್ಟಿನಿಗಿಂತಲೂ ಎಂಜಿನ್‌ನಲ್ಲಿ, ಮೈಲೇಜ್‌ನಲ್ಲಿ ಹಾಗೂ ಕಾರ್ಯದಕ್ಷತೆಯಲ್ಲಿ ಬದಲಾವಣೆಯನ್ನು ಹಾಗೂ ಅಭಿವೃದ್ಧಿಯನ್ನು ಪಡೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ