ಆ್ಯಪ್ನಗರ

2019ರಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಿದ 5 ಬೈಕ್‌ಗಳು

2019ರಲ್ಲಿ ಬೈಕ್‌ ಪ್ರಿಯರು ಗೂಗಲ್‌ನಲ್ಲಿ ಬಜಾಜ್‌ ಪಲ್ಸರ್‌ 150, ಬುಲೆಟ್‌350, ಸ್ಪ್ಲೆಂಡರ್‌ ಪ್ಲಸ್‌, ಆಕ್ಟಿವಾ 125, 790 ಡ್ಯೂಕ್‌ ಮೋಟಾರ್‌ ಸೈಕಲ್‌ಗಳನ್ನು ಅತೀ ಹೆಚ್ಚಾಗಿ ಹುಡುಕಿದ್ದಾರೆ.

Vijaya Karnataka Web 4 Jan 2020, 10:15 am
2019 ಕಳೆದು 2020 ಬರುತ್ತಿದ್ದಂತೆ ನಾವು ಎಲೆಕ್ಟ್ರಿಕ್‌ ವಾಹನಗಳನ್ನು, ಬಿಎಸ್‌6 ನಿಬಂಧನೆಯ ವಾಹನಗಳನ್ನು ನೋಡಬಹುದಾಗಿದೆ. ಎಷ್ಟೇ ನೂತನ ಮಾಡೆಲ್‌ನ ಬೈಕ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಿದರೂ ಕೂಡ ಬೈಕ್‌ ಪ್ರಿಯರಿಗೆ ತಮ್ಮದೇ ಆದ ಮಾಡಲ್‌ ಬೈಕ್‌ ಇದ್ದೇ ಇರುತ್ತದೆ. ಆ ಬೈಕ್‌ನ ಕುರಿತು ಅಂತರ್ಜಾಲದಲ್ಲಿ ಹುಡುಕಾಡುತ್ತಲೇ ಇರುತ್ತಾರೆ. ಪ್ರತೀ ವರ್ಷದಂತೇ ಈ ವರ್ಷವೂ ಕೂಡ ಗೂಗಲ್‌ 2019ರಲ್ಲಿ ದ್ವಿಚಕ್ರ ವಾಹನ ಪ್ರಿಯರು ಅಂತರ್ಜಾಲದಲ್ಲಿ ಹುಡುಕಿದ ಟಾಪ್‌ 5 ದ್ವಿಚಕ್ರವಾಹನವನ್ನು ಬಹಿರಂಗಪಡಿಸಿದೆ. ಆ ಐದು ದ್ವಿಚಕ್ರ ವಾಹನಗಳು ಹೀಗಿವೆ.
Vijaya Karnataka Web most searched bikes on google in 2019
2019ರಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಿದ 5 ಬೈಕ್‌ಗಳು


​ಬಜಾಜ್‌ ಪಲ್ಸರ್‌ 150

ಬೈಕ್‌ ಪ್ರಿಯರು ಗೂಗಲ್‌ನಲ್ಲಿ ಹುಡುಕಿದ ಬೈಕ್‌ನ ಕುರಿತು ನೋಡಿದಾಗ ಅವರು ಹೆಚ್ಚಾಗಿ ಹುಡುಕಿದ ಬೈಕ್‌ ಬಜಾಜ್‌ನ ಬಜಾಜ್‌ ಪಲ್ಸರ್‌ 150. ಸುಮಾರು 18 ವರ್ಷಗಳಿಂದ ಇಲ್ಲಿಯವರೆಗೂ ಕೂಡ ಪಲ್ಸರ್‌ ತನ್ನ ಗುಣಮಟ್ಟದ ಕಾರ್ಯದಕ್ಷತೆಯಿಂದಾಗಿ ಇಂದಿಗೂ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲ್ಲಾ ಬೈಕ್‌ಗಳಿಗಿಂತ ಮುಂಚೂಣಿಯಲ್ಲಿದೆ.

​ಬಜಾಜ್ ಪಲ್ಸರ್‌ 150 ಬೈಕ್‌

ಬಜಾಜ್ ತನ್ನ ಪಲ್ಸರ್‌ 150 ಬೈಕ್‌ನಲ್ಲಿ ವರ್ಷಗಳು ಕಳೆದಂತೆ ವಿನ್ಯಾಸವನ್ನು, ವೈಶಿಷ್ಟ್ಯತೆಯನ್ನು ಅಭಿವೃದ್ಧಿಪಡಿಸುತ್ತಾ ಬಂದಿರುವುದರಿಂದ ಇಂದಿಗೂ ಪಲ್ಸರ್‌ 150 ಬೈಕ್ ಮಾರುಕಟ್ಟೆಯಲ್ಲಿ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದೆ. ಇತ್ತೀಚೆಗಷ್ಟೇ ಇದರ ಪೇಂಟ್‌ನಲ್ಲಿ ಬದಲಾವಣೆಯಲ್ಲಿ ಪಡೆದಿರುವುದು ಮಾತ್ರವಲ್ಲದೇ ಇದರಲ್ಲಿನ ಇಂಧನ ಟ್ಯಾಂಕ್‌ನ್ನು ಮತ್ತಷ್ಟು ವಿಸ್ತರಿಸಲಾಗಿದೆ ಹಾಗೂ ಎಬಿಎಸ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

​ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ 350

ಬೈಕ್‌ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕ್ಲಾಸಿಕ್‌ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ 350. ಈ ಬೈಕ್‌ ವಾಹನ ಮಾರುಕಟ್ಟೆಯಲ್ಲಿ ಜಾವಾ ಮತ್ತು ಬೆನೆಲ್ಲಿ ಬೈಕ್‌ಗಳಿಂದ ಬಲಿಷ್ಟವಾದ ಸ್ವರ್ಧೆಯನ್ನು ಎದುರಿಸುತ್ತಿದ್ದರೂ ಕೂಡ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದು ಮೋಟಾರ್‌ಸೈಕಲ್‌ನಲ್ಲಿ ಸ್ಕ್ರ್ಯಾಂಬಲ್‌ ರೂಪಾಂತರವಾದ ಬುಲೆಟ್‌ ಟ್ರಯಲ್ಸ್‌ 350 ಮತ್ತು ಟ್ರಯಲ್ಸ್‌ 500 ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

​ಹೀರೋ ಸ್ಪ್ಲೆಂಡರ್‌ ಪ್ಲಸ್‌

ಹೀರೋದ ಈ ಸ್ಪ್ಲೆಂಡರ್‌ ಪ್ಲಸ್‌ ಬೈಕ್ ಕೂಡ ಪಲ್ಸರ್‌ನಂತೆ ತುಂಬಾ ಹಳೆಯ ಬೈಕ್‌. ಈಗಾಗಲೇ ಹೀರೋ ತನ್ನ ಸ್ಪ್ಲೆಂಡರ್‌ನ್ನು ಬಿಎಸ್‌6 ನಿಬಂಧನೆಗೆ ಅನುಗುಣವಾಗಿ ತಯಾರಿಸಿ ಹೀರೋ ಸ್ಪ್ಲೆಂಡರ್‌ ಪ್ಲಸ್‌ ಐ ಸ್ಮಾರ್ಟ್‌ ಬಿಎಸ್‌6 ಬೈಕ್‌ನ್ನು ವಾಹನ ಮಾರುಕಟ್ಟೆಗೆ ನೀಡಿದೆ. ಎಲ್ಲಾ ವಯಸ್ಸಿನ ಬೈಕ್‌ ರೈಡರ್‌ಗಳಿಗೂ ಆರಾಮದಾಯಕ ಚಾಲನೆಯನ್ನು ನೀಡುತ್ತಿರುವ ಸ್ಪ್ಲೆಂಡರ್‌ ಪ್ಲಸ್‌ ಹೀರೋ ಉತ್ಪಾದಿತ ಮೋಟಾರ್‌ ಸೈಕಲ್‌ಗಳಲ್ಲೇ ಅತೀ ಹೆಚ್ಚು ಮಾರಾಟವಾಗುತ್ತಿರುವ ಮೋಟಾರ್‌ಸೈಕಲ್‌ ಆಗಿದೆ.

​ಹೋಂಡಾ ಆಕ್ಟಿವಾ 125

ಭಾರತದಲ್ಲಿ ಮೊದಲ ಬಾರಿಗೆ ಬಿಎಸ್‌6 ನಿಬಂಧನೆಯ ಸ್ಕೂಟರ್‌ನ್ನು ವಾಹನ ಮಾರುಕಟ್ಟೆಗೆ ಪರಿಚಯಿಸಿದ ಹೆಗ್ಗಳಿಕೆ ಹೋಂಡಾ ಕಂಪೆನಿಯದ್ದಾಗಿದೆ. ಹೋಂಡಾವು ತನ್ನ ಆಕ್ಟಿವಾವನ್ನು ಬಿಎಸ್6 ನಿಬಂಧನೆಯಲ್ಲಿ ಹೋಂಡಾ ಆಕ್ಟಿವಾ 125 ಬಿಎಸ್‌6 ಸ್ಕೂಟರ್‌ನ್ನು ವಾಹನ ಮಾರುಕಟ್ಟೆಗೆ ಪರಿಚಯಿಸಿದೆ. ಈ 125 ಸಿಸಿ ಸ್ಕೂಟರ್‌ ಹೊಸ ಮಾದರಿಯ ಮೋಟಾರ್‌ ವ್ಯವಸ್ಥೆಯನ್ನು ಹಾಗೂ ಶಬ್ಧ ರಹಿತ ಸ್ಟಾರ್ಟಿಂಗ್‌ನ್ನು ಪಡೆದಿದೆ.

​ಕೆಟಿಎಂ 790 ಡ್ಯೂಕ್‌

ಭಾರತದ ವಾಹನ ತಯಾರಕ ಸಂಸ್ಥೆಗಳಿಂದ ತಯಾರಿಸಲಾದ ಬೈಕ್‌ ಅಲ್ಲದಿದ್ದರೂ ಕೂಡ 790 ಡ್ಯೂಕ್‌ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಬೈಕ್‌ ಇದಾಗಿದೆ. ರೈಡರ್‌ಗಳಿಗೆ ಸ್ಪೋರ್ಟಿ ಲುಕ್‌ನ್ನು ನೀಡುವ 790 ಡ್ಯೂಕ್‌ ಹಗುರವಾಗಿದ್ದು, ತೀಕ್ಷ್ಣವಾದ ಹ್ಯಾಂಡ್ಲಿಂಗ್‌ ಹಾಗೂ ಕೆಲವೊಂದು ವಿದ್ಯುತ್‌ ಸಾಧನಗಳನ್ನು ಹೊಂದಿದೆ.

Youtube-2019 KTM DUKE 390 OFFICAL TRAILER

ರಿವೋಲ್ಟ್‌ ಆರ್‌ವಿ 400 & ಬಜಾಜ್‌ ಚೇತಕ್‌

ಈ ಮೇಲಿನ ಎಲ್ಲಾ ಮೋಟಾರ್‌ ಸೈಕಲ್‌ಗಳು ಹೊರತುಪಡಿಸಿ, ರಿವೋಲ್ಟ್‌ ಆರ್‌ವಿ 400, ಬಜಾಜ್‌ ಚೇತಕ್‌ನ್ನು ಕೂಡ ಬೈಕ್‌ ಪ್ರಿಯರು ಅಂತರ್ಜಾಲದಲ್ಲಿ ಅತೀ ಹೆಚ್ಚಾಗಿ ಹುಡುಕಾಡಿದ್ದಾರೆ ಆದರೆ ಈ ಎರಡೂ ದ್ವಿಚಕ್ರ ವಾಹನಗಳು ಎಲೆಕ್ಟ್ರಿಕ್‌ ವಾಹನಗಳಾಗಿರುವುದರಿಂದ ಮೇಲಿನ ವಾಹನಗಳ ಸಾಲಿನಲ್ಲಿ ಸೇರ್ಪಡೆ ಮಾಡಲಾಗಿಲ್ಲ.

ಟಿವಿಎಸ್‌ ಜ್ಯುಪಿಟರ್‌ & ಡ್ಯೂಕ್‌ 390

ಇನ್ನು ಟಿವಿಎಸ್‌ ಜ್ಯುಪಿಟರ್‌ನ್ನು ಹಾಗೂ ಕೆಟಿಎಂ ಡ್ಯೂಕ್‌ 390ಯನ್ನು ಈ ಮೇಲಿನ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಏಕೆಂದರೆ ಜ್ಯುಪಿಟರ್‌ ಆಧುನಿಕ ವಿನ್ಯಾಸವನ್ನು, ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ ಮತ್ತು ಕೆಟಿಎಂ ಡ್ಯೂಕ್‌ 390 ಬೈಕ್‌ ಚಾಲಕರ ಸುರಕ್ಷತೆಯನ್ನು ಕಾಪಾಡುವಲ್ಲಿ ಹಿಂದುಳಿದಿದೆ ಎಂದು ಸುದ್ಧಿಗಳು ಹರಡಿರುವುದರಿಂದ ಈ ಎರಡೂ ಮೋಟಾರ್‌ ಸೈಕಲ್‌ನ್ನು ಪಟ್ಟಿಯಲ್ಲಿ ಇರಿಸಲಾಗಿಲ್ಲ ಆದರೆ ಈ ಎರಡೂ ಬೈಕ್‌ಗಳನ್ನು ಕೂಡ ಗೂಗಲ್‌ನಲ್ಲಿ ಹೆಚ್ಚು ನೋಡಾಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ