ಆ್ಯಪ್ನಗರ

Royal Enfield Classic 350 BS6: 1,65,205 ರೂಪಾಯಿಗಳಲ್ಲಿ ಬಿಎಸ್‌6 ಬೈಕ್‌ ಬಿಡುಗಡೆ

ರಾಯಲ್‌ ಎನ್‌ಫೀಲ್ಡ್‌ ಭಾರತವು ಜನವರಿ 7, 2020ರಂದು ಭಾರತದಲ್ಲಿ ತನ್ನ ಬಿಎಸ್‌6 ನಿಬಂಧನೆಯ ರಾಯಲ್‌ ಎನ್‌ಫೀಲ್ಡ್ ಕ್ಲಾಸಿಕ್‌ 350 ಬಿಎಸ್‌6 ಮೊದಲ ಬೈಕ್‌ನ್ನು ಬಿಡುಗಡೆಗೊಳಿಸಿದೆ.

TNN & Agencies 8 Jan 2020, 11:58 am
ಚೆನೈನ ಮೋಟಾರ್‌ ಸೈಕಲ್‌ ಉತ್ಪಾದಿತ ಕಂಪೆನಿಯಾದ ರಾಯಲ್‌ ಎನ್‌ಫೀಲ್ಡ್‌ ನಿನ್ನೆಯಷ್ಟೇ ಅಂದರೆ ಜನವರಿ 7 ರಂದು ತನ್ನ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಬಿಎಸ್‌6 ಬೈಕ್‌ನ್ನು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈಗಾಗಲೇ ಎನ್‌ಫೀಲ್ಡ್‌ 350 ಬಿಎಸ್‌6 ಬೈಕ್ ಈಗಾಗಲೇ ದೇಶದ ಕೆಲವೊಂದು ವಿತರಕರ ಕೈಸೇರಿದೆ. ಎನ್‌ಫೀಲ್ಡ್‌ ಬಿಎಸ್‌6 ಮೊದಲಿದ್ದ ಬಿಎಸ್‌4ನ ರೂಪಾಂತರವಾಗಿದ್ದು, ವಿನ್ಯಾಸದಲ್ಲಿ ಹಾಗೂ ವೈಶಿಷ್ಟ್ಯತೆಯಲ್ಲಿ ಕೆಲವೊಂದು ವ್ಯತ್ಯಾಸವನ್ನು ಪಡೆದಿದೆ.
Vijaya Karnataka Web Royal Enfield Classic 350 BS6
ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಬಿಎಸ್‌6


ರಾಕಿಂಗ್ ಸ್ಟಾರ್‌ ಯಶ್‌: ಸ್ಯಾಂಡಲ್‌ವುಡ್‌ನ ಈ ನಟನ ಫೇವರೇಟ್‌ ಬೈಕ್‌, ಕಾರು ಯಾವುದು ಗೊತ್ತಾ..?
ರಾಯಲ್ ಎನ್‌ಫೀಲ್ಡ್‌ ಬಿಎಸ್‌6 ಭಾರತದಲ್ಲಿ 1,65,205 ರೂಪಾಯಿಗಳ ಎಕ್ಸ್‌ಶೋರೂಂ ಬೆಲೆಯನ್ನು ಹೊಂದಿದ್ದು, ಬಿಎಸ್‌4 ನ ರಾಯಲ್‌ ಎನ್‌ಫೀಲ್ಡ್‌ಗಿಂತಲೂ 12,500 ರೂಪಾಯಿಗಳಷ್ಟು ಹೆಚ್ಚಿನ ಮೌಲ್ಯವನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್‌ನ ದಿ ಬೆಸ್ಟ್‌ ಮಾಡೆಲ್‌ ಎಂಬ ಬಿರುದುಕೊಂಡ ಬೈಕ್‌ ಕ್ಲಾಸಿಕ್‌ 350.

ಕ್ಲಾಸಿಕ್‌ 350 ಬಿಎಸ್‌4


ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಬಿಎಸ್‌6 ನ್ನು ಸ್ಟೆಲ್ತ್‌ ಕಪ್ಪು ಮತ್ತು ಕ್ರೋಮ್‌ ಕಪ್ಪು ಈ ಎರಡು ಶೇಡ್‌ಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಕ್ಲಾಸಿಕ್‌ 350 ಬಿಎಸ್‌6ನ ಸ್ಟೆಲ್ತ್‌ ಕಪ್ಪು ಮತ್ತು ಗನ್‌ಮೆಟಾಲ್‌ ಬೂದು ಬಣ್ಣದ ಬೈಕ್‌ 1.78 ಲಕ್ಷ ರೂಪಾಯಿಗಳ ಮತ್ತು 1.8 ಲಕ್ಷ ರೂಪಾಯಿಗಳ ಎಕ್ಸ್‌ ಶೋರೂಂ ಬೆಲೆಯನ್ನು ಪಡೆದಿರುವುದರೊಂದಿಗೆ ಅಲಾಯ್‌ ಚಕ್ರಗಳಿಂದ, ಟ್ಯೂಬ್‌ರಹಿತ ಟಯರ್‌ನಿಂದ ವಿನ್ಯಾಸಿಸಲಾಗಿದೆ.

ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಬಿಎಸ್‌6


ಕ್ಲಾಸಿಕ್‌ 350 ಬಿಎಸ್‌6 ಬೈಕ್‌ ಮೊದಲಿದ್ದ ಬಿಎಸ್‌4ನ ಎಂಜಿನ್‌ ಸಾಮರ್ಥ್ಯವನ್ನೇ ಇರಿಸಿಕೊಂಡಿದ್ದು, ತನ್ನ 346 ಸಿಸಿ ಏರ್‌ ಕೂಲಡ್‌ ಒಂದೇ ಸಿಲಿಂಡರ್‌ನ ಎಂಜಿನ್‌ನಿಂದ 19.8 ಬಿಹೆಚ್‌ಪಿ ಶಕ್ತಿಯನ್ನು ಮತ್ತು 28 ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸುವ ಸಮನಾದ ಸಾಮರ್ಥ್ಯವನ್ನೇ ಹೊಂದಿದೆ.

Royal Enfield Classic 350 BS6: ಎಷ್ಟಿದೆ ಗೊತ್ತಾ ಈ ಬಿಎಸ್‌6 ರಾಯಲ್‌ನ ಬೆಲೆ..?
ರಾಯಲ್ ಎನ್‌ಫೀಲ್ಡ್‌ ತನ್ನ ಹೊಸ ಕ್ಲಾಸಿಕ್‌ 350 ಬಿಎಸ್‌6 ಬೈಕ್‌ನ ಬುಕಿಂಗ್‌ನ್ನು ತೆರವುಗೊಳಿಸಿರುವುದನ್ನು ಇದಾಗಲೇ ನೀವು ನಮ್ಮ ಪೇಜ್‌ನಲ್ಲಿ ಓದಿರಬಹುದು. ಹೌದು ರಾಯಲ್‌ ಎನ್‌ಫೀಲ್ಡ್‌ ಜನವರಿ 7 ರಂದು ಬಿಡುಗಡೆಯಾದ ಕ್ಲಾಸಿಕ್‌ 350 ಬಿಎಸ್6 ಬೈಕ್‌ನ್ನು10,000 ರೂಪಾಯಿಗಳ ಮರುಪಾವತಿ ಹಣದಿಂದ ಬುಕಿಂಗ್‌ ಮಾಡಬಹುದೆಂದು ಘೋಷಿಸಿತ್ತು.

ಕ್ಲಾಸಿಕ್‌ 350 ಬಿಎಸ್‌6 ಬೈಕ್‌

" />
ನೀವು ನಮ್ಮ ಪೇಜ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ನ ಬುಕಿಂಗ್‌ ಮಾತ್ರವಲ್ಲದೇ 'ರಾಯಲ್‌ ಎನ್‌ಫೀಲ್ಡ್‌ನ ರೈಡ್‌ ಶ್ಯೂರ್‌ ಯೋಜನೆ' ಯ ಕುರಿತು ಕೂಡ ಓದಿರಬಹುದು. ಈ ಯೋಜನೆಯಲ್ಲಿ ರಾಯಲ್‌ ಎನ್‌ಫೀಲ್ಡ್‌ ತನ್ನ ಬ್ರ್ಯಾಂಡ್‌ಗಿದ್ದ 2 ವರ್ಷಗಳ ವಾರಂಟಿ ಅವಧಿಯನ್ನು ಬರೋಬ್ಬರಿ 4 ವರ್ಷಗಳ ವಾರಂಟಿಗೆ ವಿಸ್ತರಿಸಿದೆ. ರಾಯಲ್‌ ಎನ್‌ಫೀಲ್ಡ್‌ ನಿನ್ನೆ ಬಿಡುಗಡೆಗೊಳಿಸಿದ ತನ್ನ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಬಿಎಸ್‌6 ಗೂ ಕೂಡ ಈ ಯೋಜನೆಯನ್ನು ಅಳವಡಿಸಿದೆ.

Hyundai - Uber: ಏರ್‌ಟ್ಯಾಕ್ಸಿಗಳಿಗಾಗಿ ಹ್ಯುಂಡೈನ ಸಹಭಾಗಿತ್ವ ಪಡೆದ ಉಬರ್‌
ರಾಯಲ್‌ ಎನ್‌ಫೀಲ್ಡ್‌ ಎಪ್ರಿಲ್‌ನಿಂದ ಅನಾವರಣಗೊಳ್ಳಲಿರುವ ಬಿಎಸ್‌6 ನಿಬಂಧನೆಗೆ ಅನುಗುಣವಾಗಿ ಹೊಸ ಬೈಕ್‌ನ್ನು ತಯಾರಿಸಲ್ಲ ಬದಲಾಗಿ ತನ್ನಲ್ಲಿದ್ದ ಅಥವಾ ಮಾರುಕಟ್ಟೆಯಲ್ಲಿ ಈಗಿರುವ ಕ್ಲಾಸಿಕ್‌ 350 ಬಿಎಸ್‌4ನ ಎಂಜಿನ್‌ನ್ನು ಬಿಎಸ್‌6 ಗೆ ಅಭಿವೃದ್ಧಿಗೊಳಿಸಿ ಜನವರಿ 7, 2020 ರಂದು ಬಿಡುಗಡೆಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ