ಆ್ಯಪ್ನಗರ

ABS ಸುರಕ್ಷತೆಯೊಂದಿಗೆ 2018 ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆ ಹೋಂಡಾ ಮೋಟಾರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಸಂಸ್ಥೆಯು, ಆ್ಯಂಟಿ ಲಾಂಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ವ್ಯವಸ್ಥೆಯೊಂದಿಗೆ ತನ್ನ ಜನಪ್ರಿಯ 2018 ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆಗೊಳಿಸಿದೆ.

TIMESOFINDIA.COM 28 Mar 2018, 1:52 pm
ಹೊಸದಲ್ಲಿ: ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆ ಹೋಂಡಾ ಮೋಟಾರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಸಂಸ್ಥೆಯು, ಆ್ಯಂಟಿ ಲಾಂಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ವ್ಯವಸ್ಥೆಯೊಂದಿಗೆ ತನ್ನ ಜನಪ್ರಿಯ 2018 ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆಗೊಳಿಸಿದೆ.
Vijaya Karnataka Web 2018-Honda-CB-Hornet-160R-02


ಬೆಲೆ ಮಾಹಿಹಿ (ಎಕ್ಸ್ ಶೋ ರೂಂ ಬೆಂಗಳೂರು)


2018 ಹೋಂಡಾ ಸಿಬಿ ಹಾರ್ನೆಟ್ 160ಆರ್

ಸಿಬಿಎಸ್: 91294 ರೂ.
ಸ್ಟ್ಯಾಂಡರ್ಡ್: 86794 ರೂ.
ಎಬಿಎಸ್ ಡಿಲಕ್ಸ್: 94794 ರೂ.
ಎಬಿಎಸ್ ಸ್ಟ್ಯಾಂಡರ್ಡ್: 92294 ರೂ.

2018 ಸಿಬಿ ಹಾರ್ನೆಟ್ 160ಆರ್ ಬೈಕ್ ಹೊಸತಾದ ಬಣ್ಣದ ಆಯ್ಕೆಯ ಜತೆಗೆ ಒಟ್ಟು ಐದು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ಬಣ್ಣಗಳು: ಗ್ರೀನ್ ಆನ್ ಗ್ರೇ, ಆರೆಂಜ್ ಆನ್ ಗ್ರೇ, ಬ್ಲೂ, ರೆಡ್ ಮತ್ತು ಯಲ್ಲೋ.


ಪ್ರಮುಖ ಬದಲಾವಣೆಗಳು:
  • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ
  • ಸ್ಮಾರ್ಟ್ ಆಲ್ ಎಲ್‌ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್,
  • ಬ್ಲೂ ಬ್ಯಾಕ್‌ಲಿಟ್ ಎಲ್‌ಸಿಡಿ ಡಿಸ್‌ಪ್ಲೇ,
  • ನವೀಕೃತ ಹೌಸಿಂಗ್

ಎಬಿಎಸ್ ಹಾಗೂ ಸಿಬಿಎಸ್ ಆಯ್ಕೆಯು ನೂತನ ಹೋಂಡಾ ಹಾರ್ನೆಟ್ ಬೈಕ್‌ನ್ನು ಹೆಚ್ಚು ಸುರಕ್ಷಿತವಾಗಿಸಲಿದೆ. ಅಲ್ಲದೆ ಸ್ಕಿಡ್ಡಿಂಗ್ ಆಗುವ ಸಾಧ್ಯತೆ ಕಡಿಮೆ.

ಎಂಜಿನ್:
162.7cc ಸಿಂಗಲ್ ಸಿಲಿಂಡರ್,
ಏರ್ ಕೂಲ್ಡ್ ಎಂಜಿನ್,
15.1PS at 8,500rpm,
14.5Nm peak torque at 6,500rpm

ಗೇರ್ ಬಾಕ್ಸ್: 5 ಸ್ಪೀಡ್.


ಹಿಂದುಗಡೆ 140 ಸೆಕ್ಷನ್ ಚಕ್ರ, ರಿಯರ್ ಮೊನೊಶಾಕ್ ಸಸ್ಪೆನ್ಷನ್ ಇತರೆ ಪ್ರಮುಖ ಆಕರ್ಷಣೆಯಾಗಿದೆ.

ಪ್ರತಿಸ್ಪರ್ಧಿಗಳು:
ಯಮಹಾ ಎಫ್‌ಝಡ್ (150ಸಿಸಿ) ಶ್ರೇಣಿಯ ಬೈಕ್‌ಗಳು,
ಸುಜುಕಿ ಜಿಕ್ಸರ್,
ಟಿವಿಎಸ್ ಅಪಾಚಿ ಆರ್‌ಟಿಆರ್ 160 4ವಿ,
ಬಜಾಜ್ ಪಲ್ಸರ್ ಎನ್‌ಎಸ್160

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ