ಆ್ಯಪ್ನಗರ

2019 ದಟ್ಸನ್ ಗೊ, ಗೊ ಪ್ಲಸ್ ಅನಾವರಣ

ಹಬ್ಬದ ಋತುವಿನಲ್ಲಿ ಗರಿಷ್ಠ ಮಾರಾಟ ಗುರಿಯಿರಿಸಿಕೊಂಡಿರುವ 2019 ದಟ್ಸನ್ ಗೊ ಮತ್ತು ಗೊ ಪ್ಲಸ್ ಕಾರುಗಳು

TOI.in 2 Oct 2018, 2:53 pm
ಹೊಸದಿಲ್ಲಿ: ಜಪಾನ್ ಮೂಲದ ಮುಂಚೂಣಿಯ ವಾಹನ ಸಂಸ್ಥೆ ದಟ್ಸನ್ ಅತಿ ನೂತನ 2019 ದಟ್ಸನ್ ಗೊ ಹ್ಯಾಚ್‌ಹ್ಯಾಕ್ ಹಾಗೂ ದಟ್ಸನ್ ಗೊ ಪ್ಲಸ್ ಮಲ್ಟಿ ಪರ್ಪಸ್ ವಾಹನಗಳನ್ನು ಅನಾವರಣಗೊಳಿಸಿದೆ.
Vijaya Karnataka Web 2019-datsun-go


ಬಿಡುಗಡೆ ದಿನಾಂಕ: ಅಕ್ಟೋಬರ್ 09.

ಇದರಂತೆ ನೂತನ ಕಾರುಗಳ ಮುಗಂಡ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಆಸಕ್ತ ಗ್ರಾಹಕರು 11,000 ರೂ. ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಅಕ್ಟೋಬರ್ 10ರಿಂದ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ಎರಡು ಬಣ್ಣಗಳು: ಆ್ಯಂಬೆರ್ ಆರಂಜ್ ಮತ್ತು ಸನ್‌ಸ್ಟೋನ್ ಬ್ರೌನ್.

ಕಾಸ್ಮೆಟಿಕ್ ಬದಲಾವಣೆ, ಪರಿಷ್ಕೃತ ಗ್ರಿಲ್, ಹೆಡ್‌ಲ್ಯಾಂಪ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗೂ 14 ಇಂಚುಗಳ ಚಕ್ರಗಳು ಇರಲಿದೆ.


ಕಾರಿನೊಳಗೆ ಟಚ್ ಸ್ಕ್ರೀನ್ ಇನ್ಪೋಟನ್ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಆ್ಯಪರ್ ಕಾರ್ ಪ್ಲೇ, ಸ್ಟ್ಯಾಂಡರ್ಡ್ ಬ್ಲೂಟೂತ್, ಆಕ್ಸ್ ಹಾಗೂ ಯುಎಸ್‌ಬಿ ಇರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಹಾಗಿದ್ದರೂ ಪ್ರಯಾಣಿಕ ಬದಿಯ ಏರ್‌ಬ್ಯಾಗ್ ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ ಮಾತ್ರ ದೊರಕಲಿದೆ.

ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ ಐದು ಸ್ಪಿಡ್ ಗೇರ್ ಬಾಕ್ಸ್ ಇರಲಿದೆ. ಇದೇ ವೇಳೆಯಲ್ಲಿ ಎಎಂಟಿ ಸಹ ನಿರೀಕ್ಷೆ ಮಾಡಲಾಗುತ್ತಿದೆ.

ಅಂತಿಮವಾಗಿ ಹೊಸ ಕಾರುಗಳು ಈಗಿರುವ ಮಾದರಿಗಿಂತಲೂ 30,000 ರೂ.ಗಳಷ್ಟು ಹೆಚ್ಚು ದುಬಾರಿಯೆನಿಸುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ