ಆ್ಯಪ್ನಗರ

ಮದುಮಗಳ ಜೊತೆ ಹಳೆಯ ಕಾರುಗಳ ಹೋಲಿಕೆ; ಆಡಿಗೆ ಕಗ್ಗಂಟ್ಟು

ತಮ್ಮ ಉತ್ಪನ್ನಗಳನ್ನು ಗರಿಷ್ಠ ಮಟ್ಟದಲ್ಲಿ ಮಾರಾಟ ಮಾಡಲು ವಾಹನ ನಿರ್ಮಾಣ ಸಂಸ್ಥೆಗಳು ನಾನಾ ರೀತಿಯ ಜಾಹೀರಾತು ನೀತಿಗಳನ್ನು ಅನುಸರಿಸುತ್ತಿದೆ. ಅತ್ತ ಜರ್ಮನಿಯ ಐಷಾರಾಮಿ ಕಾರುಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿರುವಂತೆಯೇ ಫೋಕ್ಸ್‌ವ್ಯಾಗನ್ ಮಾಲಿಕತ್ವದ ಆಡಿ ವಿಚಿತ್ರವಾದ ನೀತಿಯನ್ನು ಅನುಸರಿಸಿ ಭಾರಿ ವಿವಾದಕ್ಕೆ ಸಿಲುಕಿದೆ.

ಟೈಮ್ಸ್ ಆಫ್ ಇಂಡಿಯಾ 19 Jul 2017, 8:14 pm
ಬೀಜಿಂಗ್: ತಮ್ಮ ಉತ್ಪನ್ನಗಳನ್ನು ಗರಿಷ್ಠ ಮಟ್ಟದಲ್ಲಿ ಮಾರಾಟ ಮಾಡಲು ವಾಹನ ನಿರ್ಮಾಣ ಸಂಸ್ಥೆಗಳು ನಾನಾ ರೀತಿಯ ಜಾಹೀರಾತು ನೀತಿಗಳನ್ನು ಅನುಸರಿಸುತ್ತಿದೆ. ಅತ್ತ ಜರ್ಮನಿಯ ಐಷಾರಾಮಿ ಕಾರುಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿರುವಂತೆಯೇ ಫೋಕ್ಸ್‌ವ್ಯಾಗನ್ ಮಾಲಿಕತ್ವದ ಆಡಿ ವಿಚಿತ್ರವಾದ ನೀತಿಯನ್ನು ಅನುಸರಿಸಿ ಭಾರಿ ವಿವಾದಕ್ಕೆ ಸಿಲುಕಿದೆ.
Vijaya Karnataka Web audi under fire in china for ad comparing used cars with brides
ಮದುಮಗಳ ಜೊತೆ ಹಳೆಯ ಕಾರುಗಳ ಹೋಲಿಕೆ; ಆಡಿಗೆ ಕಗ್ಗಂಟ್ಟು


ಚೀನಾದಲ್ಲಿ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಮದುಮಗಳ ಜೊತೆಗೆ ಹಳೆಯ ಕಾರುಗಳನ್ನು ಹೋಲಿಸಿರುವ ಆಡಿ ಕಗ್ಗಂಟ್ಟಿಗೆ ಸಿಲುಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಡಿ, ಇಂತಹದೊಂದು ಪ್ರಮಾದ ಎಸಗಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದು, ವಿವಾದತ್ಮಕ ಜಾಹೀರಾತನ್ನು ಹಿಂಪಡೆದಿದೆ.



ವಿವಾಹಿತರಾಗಲು ಸನ್ನದ್ಧರಾಗಿದ್ದ ಯುವ ದಂಪತಿಗಳ ಬಳಿ ಬಂದ ಅತ್ತೆ ತನ್ನ ಮಗನ ಭಾವಿ ವಧುವನ್ನು ಪರೀಕ್ಷೆಗೊಳಪಡಿಸುತ್ತಾರೆ. ಈ ಮೂಲಕ ಮಹಿಳೆಯರನ್ನು ಅವಮಾನಕ್ಕೀಡು ಮಾಡಲಾಗಿದೆ. ಮಧು ಮಗಳ ಕಣ್ಣು, ಮೂಗು, ಬಾಯಿ ಹೀಗೆ ಅಂಗಾಂಗಗಳನ್ನು ಪರೀಕ್ಷೆ ಮಾಡುವ ಅತ್ತೆ ಮುಖ್ಯವಾದ ನಿರ್ಧಾರಗಳನ್ನು ಅತ್ಯಂತ ಜಾಗರೂಕರಾಗಿ ತೆಗೆದುಕೊಳ್ಳಬೇಕು. ಅಧಿಕೃತ ಪ್ರಮಾಣೀಕರಣದಿಂದ ಮಾತ್ರ ನೆಮ್ಮದಿ ಪಡೆಯಬಹುದಾಗಿದೆ ಎಂದು ಉಲ್ಲೇಖಿಸುತ್ತಾರೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಡಿಗೆ ತಕ್ಕ ಶಾಸ್ತಿ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ