ಆ್ಯಪ್ನಗರ

Hyundai Venue: ದಾಖಲೆಯ ಬುಕ್ಕಿಂಗ್‌

ಎರಡು ಪೆಟ್ರೋಲ್‌ ಹಾಗೂ ಒಂದು ಡೀಸೆಲ್‌ ಮಾದರಿಯಲ್ಲಿ ಕಾರು ಲಭ್ಯವಾಗಲಿದೆ. ಪೆಟ್ರೋಲ್‌ ಮಾದರಿಯಲ್ಲಿ 1.0 ಲೀಟರ್‌ ಟಿ-ಜಿಎಫ್‌ಯು ಎಂಜಿನ್‌ ಇದ್ದು, ಇದು 120 ಪಿಎಸ್‌ ಪವರ್‌ ಉತ್ಪಾದಿಸುತ್ತದೆ.

Vijaya Karnataka 12 May 2019, 3:03 pm
ಬೆಂಗಳೂರು: ಹುಂಡೈ ಹೊಸದಾಗಿ ಬಿಡುಗಡೆ ಮಾಡಿರುವ ವೆನ್ಯೂ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅತ್ಯಧಿಕ ಸಂಖ್ಯೆಯ ಬುಕಿಂಗ್ ಕಂಡಿದೆ.
Vijaya Karnataka Web Venue


ಹುಂಡೈ ಮೋಟಾರ್ಸ್‌ ಇಂಡಿಯಾ ತನ್ನ ಹೊಸ ಕಾರು ವೆನ್ಯೂನ ಬುಕ್ಕಿಂಗ್‌ ಆರಂಭವಾದ ಒಂದೇ ದಿನದಲ್ಲಿ ಎರಡು ಸಾವಿರ ಜನರು ಬೇಡಿಕೆ ಮುಂದಿಟ್ಟಿದ್ದಾರೆ ಎಂದು ತಿಳಿಸಿದೆ. ಮೇ 21ರಂದು ಕಾರು ಮಾರುಕಟ್ಟೆಗೆ ಬರಲಿದ್ದು, ಬೆಲೆ 7.5 ಲಕ್ಷ ರೂ. ಆಗಿರುವ ನಿರೀಕ್ಷೆಯಿದೆ.

ದಿನ ನಿತ್ಯದ ಬಳಕೆಗೆ ಬೇಕಾಗುವ ಹೊಸ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಬಾರಿ ಅರೆ ನಗರಗಳಿಂದ ಹೆಚ್ಚಿನ ಬುಕ್ಕಿಂಗ್‌ ಬಂದಿದೆ. ಇದಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಕಾರಿನ ಬಗ್ಗೆ ದೂರವಾಣಿ ಮೂಲಕ ಪರಿಶೀಲನೆ ನಡೆಸಿದ್ದಾರೆ. ಮೇ 20ರವರೆಗೆ ಬುಕ್ಕಿಂಗ್‌ ಮಾಡಬಹುದಾಗಿದೆ. ಬುಕ್ಕಿಂಗ್‌ ಮೊತ್ತ 21 ಸಾವಿರ ರೂ. ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿಕಾಸ್‌ ಜೈನ್‌ ತಿಳಿಸಿದ್ದಾರೆ.

ಎರಡು ಪೆಟ್ರೋಲ್‌ ಹಾಗೂ ಒಂದು ಡೀಸೆಲ್‌ ಮಾದರಿಯಲ್ಲಿ ಕಾರು ಲಭ್ಯವಾಗಲಿದೆ. ಪೆಟ್ರೋಲ್‌ ಮಾದರಿಯಲ್ಲಿ 1.0 ಲೀಟರ್‌ ಟಿ-ಜಿಎಫ್‌ಯು ಎಂಜಿನ್‌ ಇದ್ದು, ಇದು 120 ಪಿಎಸ್‌ ಪವರ್‌ ಉತ್ಪಾದಿಸಿದರೆ, ಇನ್ನೊಂದು ಮಾದರಿ 1.2 ಲೀಟರ್‌ ಎಂಜಿನ್‌ ಹೊಂದಿದ್ದು, 83 ಪಿಎಸ್‌ ಪವರ್‌ ಉತ್ಪಾದಿಸುತ್ತದೆ.

ಡೀಸೆಲ್‌ ಮಾದರಿಯು 1.4 ಲೀಟರ್‌ ಸಾಮರ್ಥ್ಯದ ಎಂಜಿನ್‌ ಹೊಂದಿದೆ. 1.0 ಪೆಟ್ರೋಲ್‌ ಎಂಜಿನ್‌ ಮಾದರಿಯಲ್ಲಿ ಏಳು ಗೇರು ಇದ್ದರೆ, 1.2 ಪೆಟ್ರೋಲ್‌ ಎಂಜಿನ್‌ ಕಾರು ಐದು ಮ್ಯಾನುಯಲ್‌ ಗೇರು ಹೊಂದಿರಲಿದೆ. ಡೀಸೆಲ್‌ ಕಾರು 6 ಗೇರು ಹೊಂದಿರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ