ಆ್ಯಪ್ನಗರ

12 ಲಕ್ಷಕ್ಕೆ ಡುಕಾಟಿ ಸೂಪರ್‌ಸ್ಪೋರ್ಟ್ ಎಂಟ್ರಿ

ಇಟಲಿ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಸಂಸ್ಥೆ ಡುಕಾಟಿ ದೇಶದಲ್ಲಿ ಅತಿ ನೂತನ ಸೂಪರ್‌ಸ್ಪೋರ್ಟ್ ಕ್ರೀಡಾ ಬೈಕನ್ನು ಬಿಡುಗಡೆಗೊಳಿಸಿದೆ.

Zigwheels.com 22 Sep 2017, 9:06 pm
ಹೊಸದಿಲ್ಲಿ: ಇಟಲಿ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಸಂಸ್ಥೆ ಡುಕಾಟಿ ದೇಶದಲ್ಲಿ ಅತಿ ನೂತನ ಸೂಪರ್‌ಸ್ಪೋರ್ಟ್ ಕ್ರೀಡಾ ಬೈಕನ್ನು ಬಿಡುಗಡೆಗೊಳಿಸಿದೆ.
Vijaya Karnataka Web ducati supersport launched at rs 12 08 lakh
12 ಲಕ್ಷಕ್ಕೆ ಡುಕಾಟಿ ಸೂಪರ್‌ಸ್ಪೋರ್ಟ್ ಎಂಟ್ರಿ


ಎರಡು ವೆರಿಯಂಟ್:

ಸ್ಟ್ಯಾಂಡರ್ಡ್ ಮತ್ತು ಸೂಪರ್ ಸ್ಪೋರ್ಟ್ ಎಸ್

ಬೆಲೆ :

ಸೂಪರ್‌ಸ್ಪೋರ್ಟ್: 12,08,000
ಸೂಪರ್‌ಸ್ಪೋರ್ಟ್ ಎಸ್: 13,39,000

ಡುಕಾಟಿ 959 ಪನಿಗಲ್ ಬಳಿಕ ಇಟಲಿಯ ಪ್ರತಿಷ್ಠಿತ ಸಂಸ್ಥೆಯು ಪರಿಚಯಿಸುತ್ತಿರುವ ತಾಜಾ ಕ್ರೀಡಾ ಬೈಕ್ ಇದಾಗಿದೆ. ಹೆದ್ದಾರಿ ಮತ್ತು ಟೂರಿಂಗ್ ಕೇಂದ್ರಿಕರಿಸಿ ಇದನ್ನು ರಚಿಸಲಾಗಿದೆ.

ದೊಡ್ಡದಾದ ವಿಂಡ್ ಸ್ಕ್ರೀನ್, ಆರಾಮದಾಯಕ ಚಾಲನೆ, ಪರಿಷ್ಕೃತ ಹೆಡ್‌ಲೈಟ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ದೊಡ್ಡದಾದ ಸ್ಯಾಡಲ್, ಸಣ್ಣದಾದ ಎಕ್ಸಾಸ್ಟ್ ಮಫ್ಲರ್, ಎಲ್ಲ ಡಿಜಿಟಲ್ ಎಲ್‌ಸಿಡಿ ಡಿಸ್‌ಪ್ಲೇ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಬೈಕ್ ಅಡಿಯಲ್ಲಿರುವ 937 ಸಿಸಿ ಎಲ್ ಟ್ವಿನ್ ಟೆಸ್ಟಾಟ್ರೆಟಾ, ಲಿಕ್ವಿಡ್ ಕೂಲ್ಡ್, ಟ್ವಿನ್ ಸಿಲಿಂಡರ್ ಮೋಟಾರು 93 ಎನ್‌ಎಂ ತಿರುಗುಬಲದಲ್ಲಿ(6500rpm) 110 ಅಶ್ವಶಕ್ತಿಯನ್ನು (9500rpm) ಉತ್ಪಾದಿಸಲಿದೆ.

ಗೇರ್ ಬಾಕ್ಸ್: 6 ಸ್ಪೀಡ್

ರೈಡ್-ಬೈ-ವೈರ್, ಪವರ್ ಮೋಡ್, ಮೂರು ಹಂತದ ಬಾಷ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, 8 ವಲಯದ ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆಯು ಭದ್ರತೆಯನ್ನು ಖಾತ್ರಿಪಡಿಸಲಿದೆ.

ಪ್ರತಿಸ್ಪರ್ಧಿಗಳು:
ಕವಾಸಕಿ ನಿಂಜಾ 1000
ಸುಜುಕಿ ಜಿಎಸ್‌ಎಕ್ಸ್-ಎಸ್1000ಎಫ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ