ಆ್ಯಪ್ನಗರ

ಹೊಸ ಹೋಂಡಾ ಆಕ್ಟಿವಾ 125 ಬಿಡುಗಡೆ; ಏನಿದರ ವೈಶಿಷ್ಟ್ಯ?

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ಅತಿ ನೂತನ ಬಿಎಸ್ IV ಎಂಜಿನ್ ಒಳಗೊಂಡಿರುವ ಆಕ್ಟಿವಾ 125 ಸ್ಕೂಟರನ್ನು ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ತನ್ಮೂಲಕ ಹೆಚ್ಚು ಪರಿಸರ ಸ್ನೇಹಿ ಬಿಎಸ್ IV ಎಂಜಿನ್ ಜೋಡಣೆಯಾಗಿರುವ ದೇಶದ ಮೊತ್ತ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಟೈಮ್ಸ್ ಆಫ್ ಇಂಡಿಯಾ 11 Feb 2017, 4:25 pm
ಹೊಸದಿಲ್ಲಿ: ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ಅತಿ ನೂತನ ಬಿಎಸ್ IV ಎಂಜಿನ್ ಒಳಗೊಂಡಿರುವ ಆಕ್ಟಿವಾ 125 ಸ್ಕೂಟರನ್ನು ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ತನ್ಮೂಲಕ ಹೆಚ್ಚು ಪರಿಸರ ಸ್ನೇಹಿ ಬಿಎಸ್ IV ಎಂಜಿನ್ ಜೋಡಣೆಯಾಗಿರುವ ದೇಶದ ಮೊತ್ತ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Vijaya Karnataka Web first scooter in india with bs iv norm new honda activa 125 launched
ಹೊಸ ಹೋಂಡಾ ಆಕ್ಟಿವಾ 125 ಬಿಡುಗಡೆ; ಏನಿದರ ವೈಶಿಷ್ಟ್ಯ?


ಹೊಸ ಹೋಂಡಾ ಆಕ್ಟಿವಾ 125 ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಸ್ಟ್ಯಾಂಡರ್ಡ್ ವೆರಿಯಂಟ್: 55,954 ರೂ.
ನ್ಯೂ ಅಲಾಯ್ ಡ್ರಮ್: 58,900 ರೂ.
ಅಲಾಯ್ ಡಿಸ್ಕ್ ವೆರಿಯಂಟ್: 61,362 ರೂ.

ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್
ಇವೆಲ್ಲದರ ಹೊರತಾಗಿ ಬೈಕ್‌ನಲ್ಲಿರುವುದಕ್ಕೆ ಸಮಾನವಾಗಿ ಹೊಚ್ಚ ಹೊಸತಾದ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ಸೇವೆಯನ್ನು (ಎಎಚ್‌ಒ) ನೂತನ ಆಕ್ಟಿವಾ 125 ಸ್ಕೂಟರ್‌ನಲ್ಲಿ ನೀಡಲಾಗುವುದು.

ಹೋಂಡಾ ಇಕೊ ಟೆಕ್ನಾಲಜಿ
ನೂತನ ಆಕ್ಟಿವಾ, 125 ಸಿಸಿ ಹೋಂಡಾ ಇಕೊ ಟೆಕ್ನಾಲಜಿ (ಎಚ್‌ಇಟಿ) ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 10.54 ಎನ್‌ಎಂ ತಿರುಗುಬಲದಲ್ಲಿ 8.52 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಐದು ಆಕರ್ಷಕ ಬಣ್ಣಗಳು:
ಹೊಸತಾದ ಮ್ಯಾಟ್ ಕ್ರಸ್ಟ್ ಮೆಟ್ಯಾಲಿಕ್,
ಪಿಯರ್ಲ್ ಅಮೇಜಿಂಗ್ ವೈಟ್,
ಮಿಡ್‌ನೈಟ್ ಬ್ಲೂ ಮೆಟ್ಯಾಲಿಕ್,
ಬ್ಲ್ಯಾಕ್,
ರೆಬೆಲ್ ರೆಡ್ ಮೆಟ್ಯಾಲಿಕ್.

ವೈಶಿಷ್ಟ್ಯಗಳು
ಹೊಸತಾದ ಎಲ್‌ಇಡಿ ಪೊಸಿಷನ್ ಬೆಳಕು,
ಪ್ರೀಮಿಯಂ ಫ್ರಂಟ್ ಕ್ರೋಮ್,
ದೊಡ್ಡದಾದ ತ್ರಿಡಿ ಹೋಂಡಾ ಲಾಂಛನ,
ಮೊಬೈಲ್ ಚಾರ್ಜಿಂಗ್ ಸಾಕೆಟ್.

ಕೇಂದ್ರ ಸರಕಾರದ ಹೊಸ ನಿಯಮದಂತೆ 2017 ಎಪ್ರಿಲ್ 01ರಿಂದ ಎಲ್ಲ ದ್ವಿಚಕ್ರ ವಾಹನಗಳಿಗೂ ಬಿಎಸ್ VI ಎಂಜಿನ್ ಹಾಗೂ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಆನ್ ವ್ಯವಸ್ಥೆಯು ಕಡ್ಡಾಯವಾಗಲಿದೆ. ಇದರಂತೆ ಹೋಂಡಾ ತನ್ನೆಲ್ಲ ಶ್ರೇಣಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ಅಪ್‌ಡೇಟ್‌ಗೊಳಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ