ಆ್ಯಪ್ನಗರ

ಜಿಎಸ್‌ಟಿ ಪ್ರಭಾವ; ದ್ವಿಚಕ್ರ ವಾಹನಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ?

ದೇಶದ್ಯಾಂತ ಏಕರೂಪದ ತೆರಿಗೆ ಉದ್ದೇಶದಿಂದ 2017 ಜುಲೈ 01ರಂದು ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ಜಾರಿಗೊಳಿಸಲಾಗಿದೆ. ಇದರಿಂದಾಗಿ ಸಾಕಷ್ಟು ಚರ್ಚೆಗಳಾಗಿದ್ದು, ಹೊಸ ಬೈಕ್ ಖರೀದಿ ಅಗ್ಗವೇ ಅಥವಾ ದುಬಾರಿಯಾಗಲಿದೆಯೇ ಎಂಬುದು ಸಾಕಷ್ಟು ಸಂಶಯಕ್ಕೀಡು ಮಾಡಿದೆ. ಈ ಸಂಬಂಧ ವಿಸೃತ ವರದಿಯನ್ನು ಇಲ್ಲಿ ನೀಡಲಿದ್ದೇವೆ.

ಟೈಮ್ಸ್ ಆಫ್ ಇಂಡಿಯಾ 4 Jul 2017, 9:19 pm
ಹೊಸದಿಲ್ಲಿ: ದೇಶದ್ಯಾಂತ ಏಕರೂಪದ ತೆರಿಗೆ ಉದ್ದೇಶದಿಂದ 2017 ಜುಲೈ 01ರಂದು ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ಜಾರಿಗೊಳಿಸಲಾಗಿದೆ. ಇದರಿಂದಾಗಿ ಸಾಕಷ್ಟು ಚರ್ಚೆಗಳಾಗಿದ್ದು, ಹೊಸ ಬೈಕ್ ಖರೀದಿ ಅಗ್ಗವೇ ಅಥವಾ ದುಬಾರಿಯಾಗಲಿದೆಯೇ ಎಂಬುದು ಸಾಕಷ್ಟು ಸಂಶಯಕ್ಕೀಡು ಮಾಡಿದೆ. ಈ ಸಂಬಂಧ ವಿಸೃತ ವರದಿಯನ್ನು ಇಲ್ಲಿ ನೀಡಲಿದ್ದೇವೆ.
Vijaya Karnataka Web gst impact on two wheelers is your ride less expensive now
ಜಿಎಸ್‌ಟಿ ಪ್ರಭಾವ; ದ್ವಿಚಕ್ರ ವಾಹನಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ?


ಜಿಎಸ್‌ಟಿಯೊಂದಿಗೆ ದ್ವಿಚಕ್ರ ವಾಹನ ಕ್ಷೇತ್ರದ ವಹಿವಾಟು ಮತ್ತಷ್ಟು ಸರಳವಾಗಲಿದೆ. ಜಿಎಸ್‌ಟಿ ದಿಚಕ್ರ ವಾಹನವನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

*350 ಸಿಸಿಗೂ ಕಡಿಮೆ ಸಾಮರ್ಥ್ಯದ ಎಂಜಿನ್ ಮತ್ತು
*350 ಸಿಸಿಗೂ ಜಾಸ್ತಿ ಸಾಮರ್ಥ್ಯದ ಎಂಜಿನ್


350 ಸಿಸಿಗೂ ಕಡಿಮೆ ಎಂಜಿನ್ ಸಾಮರ್ಥ್ಯದ ಬೈಕ್ ಅಗ್ಗ:
ನೂತನ ಜಿಎಸ್‌ಟಿ ತೆರಿಗೆ ನಿಯಮದಂತೆ 350ಸಿಸಿಗಿಂತಲೂ ಕಡಿಮೆ ಸಿಸಿ ಬೈಕ್‌ಗಳು ಅಗ್ಗವಾಗಲಿದೆ. ಇದುವರೆಗೆ ಇಂತಹ ದ್ವಿಚಕ್ರ ವಾಹನಗಳ ಮೇಲೆ ವ್ಯಾಟ್, ವಿದ್ಯಾಭ್ಯಾಸ ಸೆಸ್, ಕೃಷಿ ಸೆಸ್, ಗ್ರೀನ್ ಸೆಸ್ ಸೇರಿದಂತೆ ಶೇಕಡಾ 30ರಷ್ಟು ನಾನಾ ರೀತಿಯ ತೆರಿಗೆಗಳನ್ನು ಹೇರಲಾಗುತ್ತಿತ್ತು. ಇದೀಗ ಈ ತೆರಿಗೆ ಪ್ರಮಾಣವನ್ನು ಶೇಕಡಾ 28ಕ್ಕೆ ಇಳಿಮುಖಗೊಳಿಸಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಹೋಂಡಾ ಆಕ್ಟಿವಾ ಸ್ಕೂಟರ್, ಬಜಾಜ್ ಪಲ್ಸರ್ 220 ಹಾಗೂ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಇದರ ಪ್ರಯೋಜನವನ್ನು ಪಡೆಯಲಿದೆ.

ಉದಾಹರಣೆಗಾಗಿ ಜೂನ್ 30ರ ವರೆಗೆ ದೆಹಲಿ ಎಕ್ಸ್ ಶೋ ರೂಂ ಬೆಲೆ 57,001 ರೂ.ಗಳಷ್ಟಿದ್ದ ಹೋಂಡಾ ಆಕ್ಟಿವಾ 125 ಸ್ಕೂಟರ್ ಮೇಲೆ ಹಿಂದಿನ ತೆರಿಗೆ ಪ್ರಕಾರ ಶೇಕಡಾ 30ರಷ್ಟು ತೆರಿಗೆ ವಿಧಿಸಲಾಗುತಿತ್ತು. ನೂತನ ಜಿಎಸ್‌ಟಿ ಪ್ರಕಾರ ಶೇಕಡಾ 2ರಷ್ಟು ತೆರಿಗೆ ವಿನಾಯಿತಿ ದೊರಕಲಿದ್ದು, ಸ್ಕೂಟರ್ ಬೆಲೆ 56,124 ರೂ.ಗಳಿಗೆ ಇಳಿಮುಖವಾಗಲಿದೆ. ಅಂದರೆ 877 ರೂ.ಗಳಷ್ಟು ಉಳಿತಾಯವಾಗಲಿದೆ.

350 ಸಿಸಿಗೂ ಜಾಸ್ತಿ ಎಂಜಿನ್ ಸಾಮರ್ಥ್ಯದ ಬೈಕ್ ದುಬಾರಿ...
ಎರಡನೇ ವಿಭಾಗದಲ್ಲಿ ಕಾಣಿಸಿಕೊಳ್ಳುವ 350 ಸಿಸಿಗೂ ಹೆಚ್ಚು ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಶೇಕಡಾ 28ರಷ್ಟು ಜಿಎಸ್‌ಟಿ ಹೊರತಾಗಿ ಹೆಚ್ಚುವರಿಯಾಗಿ ಶೇಕಡಾ 3ರಷ್ಟು ತೆರಿಗೆ ಹೊರೆ ಬೀಳಲಿದೆ. ಅಂದರೆ ಒಟ್ಟು ತೆರಿಗೆ ಶೇಕಡಾ 31ರಷ್ಟಾಗಲಿದ್ದು, ಹಿಂದಿಗಿಂತಲೂ ಶೇಕಡಾ 1ರಷ್ಟು ವರ್ಧನೆಯಾಗಲಿದೆ.

ಈ ವಿಭಾಗದಲ್ಲಿ ಪ್ರಮುಖವಾಗಿಯೂ ರಾಯಲ್ ಎನ್‌ಫೀಲ್ಡ್ ಬುಲೆಟ್ 500, ಕ್ಲಾಸಿಕ್ 500, ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750, ಸ್ಟ್ರೀಟ್ ರೊಡ್, ಕೆಟಿಎಂ ಆರ್‌ಸಿ 390 ಹಾಗೂ ಬಜಾಜ್ ಡೊಮಿನರ್ ಮುಂತಾದ ಬೈಕ್‌ಗಳು ಕಾಣಿಸಿಕೊಳ್ಳಲಿದೆ.

ಉದಾಹರಣೆಗಾಗಿ, ರಾಯಲ್ ಎನ್‌ಫೀಲ್ಡ್ ಎಕ್ಸ್ ಶೋ ರೂಂ ಬೆಲೆ ಜೂನ್ 30ರ ವರೆಗೆ 1,71,000 ರೂ.ಗಳಷ್ಟಿತ್ತು. ಆದರೆ ಜಿಎಸ್‌ಟಿ ಬಳಿಕ ಬೆಲೆ 1,72,315 ರೂ.ಗಳಿಗೆ ಏರಿಕೆಯಾಗಲಿದೆ. ಅಂದರೆ 1,300 ರೂ.ಗಳ ವರ್ಧನೆಯುಂಟಾಗಲಿದೆ.

ಪ್ರೀಮಿಯಂ ಬೈಕ್...
ಅತ್ತ ಪ್ರೀಮಿಯಂ ಬೈಕ್‌ಗಳಿಗೂ ಬೆಲೆ ಏರಿಕೆಯಾಗಲಿದೆ. ಇದನ್ನು ಡುಕಾಟಿ ಇಂಡಿಯಾ, ಹಾರ್ಲೆ ಡೇವಿಡ್ಸನ್ ಸಹ ಖಚಿತಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ