ಆ್ಯಪ್ನಗರ

Hero Xtreme: ಪರ್ಫೆಕ್ಟ್ ಬೈಕ್‌ ಖ್ಯಾತಿ

ಎಕ್ಸ್‌ಟ್ರೀಮ್‌ 200 ಆರ್‌ನ ರೀತಿಯ ಎಂಜಿನ್‌ ಹೊಂದಿದ್ದರೂ, ಹೊಸ ಬೈಕ್‌, ಅಡ್ವೆಂಚರ್‌, ಟೂರರ್‌ ಮತ್ತು ಸ್ಪೋರ್ಟ್ಸ್ ಎಂಬ ಮೂರು ವಿಭಾಗಗಳಲ್ಲಿ ಸಿಗುತ್ತದೆ.

Agencies 12 May 2019, 3:13 pm
ಹೀರೋ ಮೊಟೋ ಕಾರ್ಪ್‌ ಎಕ್ಸ್‌ಟ್ರೀಮ್‌ ಸರಣಿಯಲ್ಲಿ ಮತ್ತೆ ಮೂರು ಮಾದರಿ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. 2018ರಲ್ಲಿ ಲಾಂಚ್‌ ಮಾಡಿದ್ದ ಎಕ್ಸ್‌ಟ್ರೀಮ್‌ 200 ಆರ್‌ನ ರೀತಿಯ ಎಂಜಿನ್‌ ಹೊಂದಿದ್ದರೂ, ಹೊಸ ಬೈಕ್‌, ಅಡ್ವೆಂಚರ್‌, ಟೂರರ್‌ ಮತ್ತು ಸ್ಪೋರ್ಟ್ಸ್ ಎಂಬ ಮೂರು ವಿಭಾಗಗಳಲ್ಲಿ ಸಿಗುತ್ತದೆ.

ಎಲ್‌ಇಡಿ ಹೆಡ್‌ಲೈಟ್‌ ಮತ್ತು ಇಂಡಿಕೇಟರ್‌, ಇಂಧನ ಟ್ಯಾಂಕ್‌ನ ಕೊನೆಯಲ್ಲಿ ರಬ್ಬರ್‌ ಪ್ಯಾಡ್‌ ಹೊಂದಿದೆ. ಸೀಟಿನ ಎತ್ತರ 795 ಮಿ.ಮೀ. ಇದ್ದು, ಗ್ರೌಂಡ್‌ ಕ್ಲಿಯರೆನ್ಸ್‌ 165 ಮಿ.ಮೀ. ಆಗಿದೆ. 149 ಕೆ. ಜಿ. ತೂಕದ ಇದು 12.5 ಲೀಟರ್‌ ಸಾಮರ್ಥ್ಯದ ಇಂಧನ ಟ್ಯಾಂಕ್‌ ಹೊಂದಿದೆ. ಹೀರೋ ಆ್ಯಪ್‌ ಮೂಲಕ ಬ್ಲೂಟೂತ್‌ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ.

199.6 ಸಿಸಿ ಏರ್‌ಕೂಲ್ಡ್‌ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿರುವ ಇದು ಐದು ಸ್ಪೀಡ್‌ ಗೇರ್‌ ಮತ್ತು ಮಲ್ಟಿ-ಪ್ಲೇಟ್‌ ವೆಟ್‌ ಕ್ಲಚ್‌ ಹೊಂದಿದೆ. ಟಾಪ್‌ ಸ್ಪೀಡ್‌ ಗಂಟೆಗೆ 120 ಕಿ.ಮೀ. ಎಂದು ಹೇಳಲಾಗಿದ್ದು, ಸಿಂಗಲ್‌ ಎಬಿಎಸ್‌ ಹೊಂದಿದ ಡಿಸ್ಕ್‌ ಬ್ರೇಕ್‌ ಇದರಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ