ಆ್ಯಪ್ನಗರ

ಹೋಂಡಾದಿಂದ ಐ20 ಪ್ರತಿಸ್ಪರ್ಧಿ: WR-V

ಜಪಾನ್ ಮೂಲದ ಮುಂಚೂಣಿಯ ವಾಹನ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಸಂಸ್ಥೆಯು ಮುಂಬರುವ ಮಾರ್ಚ್ 16ರಂದು ಅತಿ ನೂತನ ಡಬ್ಲ್ಯುಆರ್-ವಿ ಕ್ರಾಸೋವರ್ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಿದೆ.

ಟೈಮ್ಸ್ ಆಫ್ ಇಂಡಿಯಾ 2 Mar 2017, 5:41 pm
ಹೊಸದಿಲ್ಲಿ: ಜಪಾನ್ ಮೂಲದ ಮುಂಚೂಣಿಯ ವಾಹನ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಸಂಸ್ಥೆಯು ಮುಂಬರುವ ಮಾರ್ಚ್ 16ರಂದು ಅತಿ ನೂತನ ಡಬ್ಲ್ಯುಆರ್-ವಿ ಕ್ರಾಸೋವರ್ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಿದೆ. ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಸಾಧಿಸುತ್ತಿರುವ ಹ್ಯುಂಡೈ ಐ20 ಆಕ್ಟಿವ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ.
Vijaya Karnataka Web honda wr v gets march 16 launch date bookings now open
ಹೋಂಡಾದಿಂದ ಐ20 ಪ್ರತಿಸ್ಪರ್ಧಿ: WR-V


ಹ್ಯುಂಡೈ ಐ20 ಆಕ್ಟಿವ್ ಹೊರತಾಗಿ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಹಾಗೂ ಸಬ್ ಫೋರ್ ಮೀಟರ್ ವಿಭಾಗದಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಕಾರಿಗೂ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ನಿರೀಕ್ಷಿತ ವೈಶಿಷ್ಟ್ಯಗಳು:
ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,
16 ಇಂಚುಗಳ ಅಲಾಯ್ ಚಕ್ರಗಳು,
ಟಚ್ ಓಪನ್/ಕ್ಲೋಸ್ ಸನ್ ರೂಫ್,
ಎಚ್‌ಡಿಎಂಐ ಮಿರರ್‌ಲಿಂಕ್ ಕ್ರಿಯಾತ್ಮಕತೆ,
1.5 ಜಿಬಿ ಇಂಟರ್ನಲ್ ಮೆಮರಿ, ಯುಎಸ್‌ಬಿ,
ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ

ಜನಪ್ರಿಯ ಜಾಝ್ ಹ್ಯಾಚ್‌ಬ್ಯಾಕ್ ಕಾರಿನಿಂದಲೂ ವಿನ್ಯಾಸ ಸ್ಪೂರ್ತಿ ಪಡೆಯಲಿರುವ ನೂತನ ಡಬ್ಲ್ಯುಆರ್‌-ವಿ ಕಾರಿನಲ್ಲಿ ಗರಿಷ್ಠ ಭದ್ರತೆಯನ್ನು ಕಾಪಾಡಿಕೊಳ್ಳಲಾಗುವುದು. ಅಲ್ಲದೆ ಪ್ರತಿ ಲೀಟರ್‌ಗೆ 25 ಕೀ.ಮೀ.ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ನಡುವೆ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆಸಕ್ತರು ಹೋಂಡಾ ಅಧಿಕೃತ ಡೀಲರುಗಳ ಬಳಿ ತೆರಳಿ 21,000 ರೂ. ಪಾವತಿಸಿ ತಮ್ಮ ಕನಸಿನ ಕಾರನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ