ಆ್ಯಪ್ನಗರ

ಹೋಂಡಾ ಡಬ್ಲ್ಯುಆರ್‌ವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಅತಿ ನೂತನ ಡಬ್ಲ್ಯುಆರ್‌ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 7.75 ಲಕ್ಷ ರೂ.ಗಳಾಗಿವೆ.

ಟೈಮ್ಸ್ ಆಫ್ ಇಂಡಿಯಾ 16 Mar 2017, 4:03 pm
ಹೊಸದಿಲ್ಲಿ: ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಅತಿ ನೂತನ ಡಬ್ಲ್ಯುಆರ್‌ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 7.75 ಲಕ್ಷ ರೂ.ಗಳಾಗಿವೆ.
Vijaya Karnataka Web honda wr v launched at starting price of 7 75 lakh
ಹೋಂಡಾ ಡಬ್ಲ್ಯುಆರ್‌ವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ


ಜಾಝ್ ತಳಹದಿಯಲ್ಲಿ ನಿರ್ಮಾಣವಾಗಿರುವ ನೂತನ ಹೋಂಡಾ ಡಬ್ಲ್ಯುಆರ್-ವಿ ಭಾರತೀಯ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ವರ್ಧಿತ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿದೆ. ಮುಂಭಾಗದಲ್ಲಿರುವ ಎಲ್ಇಡಿ ಡೈಟೈಮ್ ರನ್ನಿಂಗ್ ಲೈಟ್ಸ್ ಕಾರಿಗೆ ವಿಶಿಷ್ಟ ಮುಖಛಾಯೆಯನ್ನು ನೀಡುತ್ತಿದೆ.

ಕಾರಿನೊಳಗೆ 2017 ಹೋಂಡಾ ಸಿಟಿ ಕಾರಿನಲ್ಲಿ ಸಮಾನವಾಗಿ ಸನ್ ರೂಫ್, ಏಳು ಇಂಚುಗಳ ಇನ್ಪೋಟೈನ್ಮೆಂಟ್ ಸಿಸ್ಟಂ, ಎಚ್‌ಡಿಎಂಐ ಸ್ಲಾಟ್, ಎರಡು ಯುಎಸ್‌ಬಿ ಪೋರ್ಟ್ ಹಾಗೂ ಮಿರರ್ ಲಿಂಕ್ ಕನೆಕ್ಟಿವಿಟಿ ಇರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಕ್ರೂಸ್ ಕಂಟ್ರೋಲ್ ಹಾಗೂ ಪುಶ್ ಬಟನ್ ಸ್ಟ್ಯಾರ್ಟ್ ವ್ಯವಸ್ಥೆಗಳು ಇರಲಿದೆ.

ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಜಾಝ್‌ಗೆ ಸಮಾನವಾಗಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದ್ದು, 89 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ. ಇನ್ನು 1.5 ಲೀಟ್ರ ಡೀಸೆಲ್ ಎಂಜಿನ್ 99 ಅಶ್ವಶಕ್ತಿಯನ್ನು ನೀಡಲಿದೆ. ಇದು ಪ್ರತಿ ಲೀಟರ್‌ಗೆ 25.5 ಮೈಲೇಜ್ ನೀಡುವಷ್ಟು ಸಕ್ಷಮವಾಗಿರಲಿದೆ. ಇನ್ನು ಆಟೋಮ್ಯಾಟಿಕ್ ವೆರಿಯಂಟ್ ಸದ್ಯಕ್ಕೆ ಬರುವ ಯಾವುದೇ ಸೂಚನೆಗಳಿಲ್ಲ.

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್ ಎಸ್ (ಮ್ಯಾನುವಲ್): 7,75,000 ರೂ.
ಪೆಟ್ರೋಲ್ ವಿಎಕ್ಸ್ (ಮ್ಯಾನುವಲ್): 8,99,000 ರೂ.
ಡೀಸೆಲ್ ಎಸ್ (ಮ್ಯಾನುವಲ್): 8,79,000 ರೂ.
ಡೀಸೆಲ್ ವಿಎಕ್ಸ್ (ಮ್ಯಾನುವಲ್): 9,99,900 ರೂ.

ಅದೇ ಹೊತ್ತಿಗೆ ಆರು ಹೊರಮೈ ಹಾಗೂ ಎರಡು ಒಳಮೈ ಬಣ್ಣಗಳಲ್ಲಿ ಹೋಂಡಾ ಡಬ್ಲ್ಯುಆರ್-ವಿ ಲಭ್ಯವಿರುತ್ತದೆ. ಹಾಗೆಯೇ ಮೂರು ವರ್ಷಗಳ ಅನಿಯಮಿತ ಕೀ.ಮೀ.ಗಳ ವಾರಂಟಿ ಸೌಲಭ್ಯವಿದ್ದು, ಇದನ್ನು ಐದು ವರ್ಷಗಳಿಗೂ ವಿಸ್ತರಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ