ಆ್ಯಪ್ನಗರ

ಗುಡ್ ಬೈ ಹೇಳಿದ ಜನಪ್ರಿಯ ಹ್ಯುಂಡೈ ಐ10

ಕಳೆಗುಂದಿರುವ ಜನಪ್ರಿಯ ಐ10 ನಿರ್ಮಾಣಕ್ಕೆ ಬ್ರೇಕ್ ಹಾಕಲು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಸಂಸ್ಥೆ ನಿರ್ಧರಿಸಿದೆ. ತನ್ಮೂಲಕ ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯು ಆಧುನಿಕ ಕಾರುಗಳತ್ತ ಗಮನ ಹರಿಸಲಿದೆ.

ಟೈಮ್ಸ್ ಆಫ್ ಇಂಡಿಯಾ 9 Mar 2017, 5:06 pm
ಹೊಸದಿಲ್ಲಿ: ಕಳೆಗುಂದಿರುವ ಜನಪ್ರಿಯ ಐ10 ನಿರ್ಮಾಣಕ್ಕೆ ಬ್ರೇಕ್ ಹಾಕಲು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಸಂಸ್ಥೆ ನಿರ್ಧರಿಸಿದೆ. ತನ್ಮೂಲಕ ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯು ಆಧುನಿಕ ಕಾರುಗಳತ್ತ ಗಮನ ಹರಿಸಲಿದೆ.
Vijaya Karnataka Web hyundai decides to retire i10 from indian roads
ಗುಡ್ ಬೈ ಹೇಳಿದ ಜನಪ್ರಿಯ ಹ್ಯುಂಡೈ ಐ10


2007ನೇ ಇಸವಿಯಲ್ಲಿ ಹ್ಯುಂಡೈ ಐ10 ಮೊದಲ ಬಾರಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಅಲ್ಲದೇ ದೇಶೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಾಗಿ 16.95 ಲಕ್ಷಕ್ಕೂ ಹೆಚ್ಚು ಯುನಿಟ‌್‌ಗಳ ಮಾರಾಟವನ್ನು ಕಂಡಿದೆ.

ಭಾರತದಲ್ಲಿ ಹ್ಯುಂಡೈ ಯಶಸ್ಸಿನಲ್ಲಿ ಐ10 ಕಾರು ಬಹು ದೊಡ್ಡ ಪಾತ್ರ ವಹಿಸಿತ್ತು. ಈ ಚೊಕ್ಕದಾದ ಕಾರು ನಿರ್ವಹಣೆ, ಗುಣಮಟ್ಟತೆ, ಶೈಲಿ ಹಾಗೂ ಇಂಧನ ಕ್ಷಮತೆಯಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸಿತ್ತು.

2013ನೇ ಸಾಲಿನಲ್ಲಿಐ10 ಉತ್ತರಾಧಿಕಾರಿಯಾಗಿರುವ ಗ್ರಾಂಡ್ ಐ10 ಮಾರುಕಟ್ಟೆಗೆ ಪ್ರವೇಶಿಸಿತ್ತು. ನೂತನ ಕಾರಿನ ಪ್ರವೇಶದ ಬಳಿಕವೂ ತನ್ನ ಜನಪ್ರಿಯ ಕಾರಿನ ಮಾರಾಟವನ್ನು ಹ್ಯುಂಡೈ ಮುಂದುವರಿಸಿತ್ತು.

ಅಂದ ಹಾಗೆ 2017ರಿಂದ 2020ರ ಅವಧಿಯಲ್ಲಿ ಇನ್ನು ಎಂಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹ್ಯುಂಡೈ ಹೊಂದಿದೆ. ಈ ಪೈಕಿ ಮೂರು ಹೊಸ ಹಾಗೂ ಬಾಕಿ ಉಳಿದ ಐದು ಕಾರುಗಳು ಪರಿಷ್ಕೃತ ಮಾದರಿಯಾಗಿರಲಿದೆ. ಏತನ್ಮಧ್ಯೆ 2018ರಲ್ಲಿ 'ಐಯೊನಿಕ್' ಹೈಬ್ರಿಡ್ ಕಾರು ಬಿಡುಗಡೆಮ ಮಾಡುವ ಯೋಜನೆಯನ್ನು ಹ್ಯುಂಡೈ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ