ಆ್ಯಪ್ನಗರ

ಹ್ಯುಂಡೈನ ಸೆಡಾನ್ ಕಾರು ಈಗ ಔರಾ

ಗ್ರ್ಯಾಂಡ್ ಐ10 ನಿಯೋಸ್ ಮಾದರಿಯಲ್ಲಿನ ಸಬ್ - 4 ಮೀಟರ್ ಸೆಡಾನ್‌ ಕಾರನ್ನು ಮುಂದಿನ ಪೀಳಿಗೆಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಔರಾ ಎಂಬ ಹೆಸರಿನೊಂದಿಗೆ ಹ್ಯುಂಡೈ ಕಾರು ಕಂಪೆನಿಯು ಕಾರು ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆಯಿದೆ.

Agencies 15 Nov 2019, 1:15 pm
ದಕ್ಷಿಣ ಕೊರಿಯಾದ ಬಹುರಾಷ್ಟ್ರೀಯ ವಾಹನ ತಯಾರಕ ಕಂಪೆನಿಗಳಲ್ಲಿ ಒಂದಾದ ಹ್ಯುಂಡೈ ಮೋಟರ್ಸ್ ಎಂದೇ ಕರೆಯಲಾಗುವ ಹ್ಯುಂಡೈ ಮೋಟರ್ ಕಂಪೆನಿಯು ಮಾರುಕಟ್ಟೆಗೆ ಪರಿಚಯಿಸಲಿರುವ ಸಬ್ - 4 ಮೀಟರ್ ಸೆಡಾನ್ ಕಾರನ್ನು ಔರಾ ಎಂದು ಕರೆಯಲಾಗುವುದು ಎಂದು ಅದು ಘೋಷಿಸಿದೆ. ಇದು ಗ್ರ್ಯಾಂಡ್ ಐ10 ನಿಯೋಸ್ ಮಾದರಿಯಲ್ಲಿ 2020 ರ ಫೆಬ್ರುವರಿಯಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ಹಳೆಯ ಹ್ಯುಂಡೈ ಎಕ್ಸ್‌ಸೆಂಟ್ ಕಾರಿನ ಬದಲೀ ಮಾದರಿಯ ಕಾರು ಇದಾಗಿದೆ. ಹ್ಯುಂಡೈ ಔರಾ ಗ್ರ್ಯಾಂಡ್ ಐ10 ನಿಯೋಸ್‌ನಂತೆಯೇ ಪ್ಲ್ಯಾಟ್‌ಫಾರ್ಮ್‌ನ್ನು ಒಳಗೊಂಡಿರುವುದು ಮಾತ್ರವಲ್ಲದೇ ಹ್ಯುಂಡೈನ ಎಲ್‌ಇಡಿ ಡಿಆರ್‌ಎಲ್‌ ಮತ್ತು ಅಪ್‌ಸ್ವೆಟ್‌ ಹೆಡ್‌ಲ್ಯಾಂಪ್‌ಗಳನ್ನೂ ಕೂಡ ಒಳಗೊಂಡಿದೆ.
Vijaya Karnataka Web New Project (3)
Hyundai AURA


2020ರ ಕೊಡುಗೆಯಾಗಿ ಭಾರತಕ್ಕೆ ಬ್ರ್ಯಾಂಡೆಡ್‌ ಆಡಿ ಕ್ಯೂ8 ಎಸ್‌ಯುವಿ

ಔರಾದ ಎರಡು ಬದಿಗಳು ವೈಭವೀಪೂರ್ಣವಾಗಿದ್ದು, ಸುಮಾರು 15 ಇಂಚಿನಷ್ಟಿರುವ ಡ್ಯುಯೆಲ್ ಟೋನ್ ಅಲಾಯ್ ಚಕ್ರಗಳನ್ನು ಇದು ತನ್ನ ಎರಡೂ ಬದಿಗಳಲ್ಲಿ ಒಳಗೊಂಡಿದೆ. ಕಾರಿನ ಹಿಂಭಾಗದಲ್ಲಿನ ಅರ್ಧ ಭಾಗದಲ್ಲಿ ಎಲ್ಇಡಿಯನ್ನು ಅಳವಡಿಸಲಾಗಿದ್ದು, ಸಿ - ಆಕಾರದ ಟೈಲ್‌ ಲ್ಯಾಂಪ್‌ಗಳನ್ನು, ವೆನ್ಯೂ ಮತ್ತು ನಿಯೋಸ್‌ನಂತೆಯೇ ಔರಾ ಕೂಡ ಬೂಟ್‌ ಲಿಡ್‌ನ ಮಧ್ಯ ಭಾಗದಲ್ಲಿ ಕಾರಿನ ಹೆಸರನ್ನು ಧರಿಸುವುದರೊಂದಿಗೆ ಹ್ಯುಂಡೈ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್ಮೆಂಟ್ ವ್ಯವಸ್ಥೆ, ಸ್ವಯಂಚಾಲಿತ ಹವಮಾನ ನಿಯಂತ್ರಕ, ವೈರ್‌ರಹಿತ ಫೋನ್ ಚಾರ್ಜರ್‌ ಮತ್ತು ಹಿಂಭಾಗದಲ್ಲಿ ಉತ್ತಮ ರೂಪಾಂತರದೊಂದಿಗೆ ಎಸಿ ವೆಂಟ್‌ಗಳನ್ನು ಅಳವಡಿಸುವ ನಿರೀಕ್ಷೆಯನ್ನು ಇದು ಇಟ್ಟುಕೊಂಡಿದೆ.

ಕಾರಿನ ಹೊರಾಂಗಣ ವಿನ್ಯಾಸವು ಕಾರು ಗ್ರಾಹಕರಿಗೆ ಅಥವಾ ಕಾರು ಪ್ರಿಯರಿಗೆ ಮನಸೆಳೆಯುವಂತಿದ್ದು ಇನ್ನೂ ಇದರ ಒಳಾಂಗಣ ವಿನ್ಯಾಸವನ್ನು ಹೊರಾಂಗಣ ವಿನ್ಯಾಸಕ್ಕಿಂತ ಹೆಚ್ಚಾಗಿ ಅಪ್‌ಡೇಟ್‌ ಮಾಡಲಾಗಿದೆ. ಇದರ ಒಳಾಂಗಣ ವಿನ್ಯಾಸವು ಗ್ರ್ಯಾಂಡ್‌ ಐ 10 ನಿಯೋಸ್‌ನಂತೆಯೇ ಡ್ಯುಯೆಲ್ ಟೋನ್ ವಿನ್ಯಾಸವನ್ನು ಹೊಂದುವ ನಿರೀಕ್ಷೆಯೊಂದಿಗೆ ನಿಯೋಸ್‌ನಂತೆ 1.2 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಔರಾದಲ್ಲೂ ಅಳವಡಿಸಲಾಗುವುದು ಎಂದು ತಿಳಿದು ಬಂದಿದೆ.

ಭಾರತ ಸರ್ಕಾರದ ಬಿಎಸ್‌6 ನಿಬಂಧನೆಗೆ ಅನುಗುಣವಾಗುವಂತೆ ಈ ಕಾರನ್ನು4 ಸ್ಪೀಡ್ ಎಟಿ ಮಾದರಿಯಿಂದ 5 ಸ್ಪೀಡ್ ಎಟಿ ಮಾದರಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು. ಹ್ಯುಂಡೈ ಔರಾದ ಬೆಲೆಯನ್ನು 6 ಲಕ್ಷದಿಂದ 9 ಲಕ್ಷದವರೆಗೆ ಸ್ವಲ್ಪಮಟ್ಟಿಗೆ ಹೆಚ್ಚಿಸಲು ಕಂಪೆನಿಯು ಅಂದಾಜಿಸಿದ್ದು, ಇದು ತನ್ನ ಚಾಲನೆಯನ್ನು ಆರಂಭಿಸಿದ ನಂತರ ಇದು ಮಾರುತಿ ಸುಝುಕಿ ಡಿಝೈರ್, ಟಾಟಾ ಟಿಗೋರ್, ಫೋರ್ಡ್ ಆಸ್ಪೈರ್ ಮತ್ತು ವಿಡಬ್ಲ್ಯೂ ಆಮಿಯೋಗೆ ಪೈಪೋಟಿ ನೀಡುವ ಸಾಧ್ಯತೆಯಿದೆ. 83 ಪಿಎಸ್‌ ಮತ್ತು 114 ಎನ್‌ಎಂ ಟಾರ್ಕ್‌ ಉತ್ಪಾದಿಸಬಲ್ಲ ಹಳೆಯ ಹ್ಯುಂಡೈಗಿಂತ ಔರಾವು ಹೆಚ್ಚಿನ ಅಂದರೆ 75 ಪಿಎಸ್‌ ಮತ್ತು 190ಎನ್‌ಎಂನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಔರಾವು ಈಗಿರುವ ಕ್ಸೆಂಟ್‌ಗಿಂತ ಹೆಚ್ಚಿನ ವೈಶಿಷ್ಟ್ಯತೆಯನ್ನು ಒಳಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ