ಆ್ಯಪ್ನಗರ

ಭಾರತಕ್ಕೆ ಬಂದ ಜಾಗ್ವಾರ್‌ ಡೀಸೆಲ್‌ ಕಾರು

ಟಾಟಾ ಮೋಟಾರ್ಸ್‌ನ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಇಂಡಿಯಾ, ತನ್ನ ಜಾಗ್ವಾರ್‌ ಎಕ್ಸ್‌ಇ ಡೀಸೆಲ್‌ ಸೆಡಾನ್‌ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Vijaya Karnataka Web 8 Jun 2017, 4:00 am

ಟಾಟಾ ಮೋಟಾರ್ಸ್‌ನ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಇಂಡಿಯಾ, ತನ್ನ ಜಾಗ್ವಾರ್‌ ಎಕ್ಸ್‌ಇ ಡೀಸೆಲ್‌ ಸೆಡಾನ್‌ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 38.25 ಲಕ್ಷ ರೂ.ನಿಂದ ಇದರ ಬೆಲೆ ಆರಂಭವಾಗುತ್ತದೆ. 2 ಲೀಟರ್‌ ಡೀಸೆಲ್‌ ಎಂಜಿನ್‌ ಹೊಂದಿರುವ ಇದು 132 ಕೆವ್ಯಾಟ್‌ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಸಂಸ್ಥೆ ಹೇಳಿದೆ.

ಪ್ರಸಕ್ತ 2. ಲೀಟರ್‌ ಪೆಟ್ರೋಲ್‌ ಎಂಜಿನ್‌ನ ಜಗ್ವಾರ್‌, 37.25 ಲಕ್ಷ ರೂ.ನಲ್ಲಿ ಸಿಗುತ್ತಿದ್ದು, ಇದಕ್ಕೆ ಪೂರಕವಾಗಿ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಡೀಸೆಲ್‌ ಆವೃತ್ತಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ. ಕಾರು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಾಗ್ವಾರ್‌ ಲ್ಯಾಂಡ್‌ ರೋವರ್‌ ವ್ಯವಸ್ಥಾಪಕ ನಿರ್ದೇಶಕ ರೋಹಿತ್‌ ಸೂರಿ, ಎಕ್ಸ್‌ಇ ಅತ್ಯಂತ ಯಶಸ್ವಿ ಉತ್ಪನ್ನ ಎಂದು ಹೇಳಿದರು.

Vijaya Karnataka Web jaguar diesel cars now in india
ಭಾರತಕ್ಕೆ ಬಂದ ಜಾಗ್ವಾರ್‌ ಡೀಸೆಲ್‌ ಕಾರು



ದೇಶದಲ್ಲಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಡೀಸೆಲ್‌ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ವಿಮಾನ ತಯಾರಿಕಾ ಕೈಗಾರಿಕೆಯಿಂದ ಪಡೆದ ಲೈಟ್‌-ವೈಟ್‌ ಅಲ್ಯುಮಿನಿಯಂ ಆರ್ಕಿಟೆಕ್ಚರ್‌ನ್ನು ಇದು ಹೊಂದಿದೆ. ಎಂಟು ಅಟೋಮೆಟಿಕ್‌ ಗೇರ್‌, ಸುವ್ಯವಸ್ಥಿತ ಬ್ರೇಕಿಂಗ್‌ ಕಂಟ್ರೋಲ್‌ ಮೊದಲಾದ ಆಧುನಿಕ ಫೀಚರ್‌ಗಳು ಇದರಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ