ಆ್ಯಪ್ನಗರ

ಮೇಕ್ ಇನ್ ಇಂಡಿಯಾ: 2020ಕ್ಕೆ ಸಿಟ್ರೋಯೆನ್ ಸಿ5 ಏರ್‌ಕ್ರಾಸ್ ಹೈಬ್ರೀಡ್ ಎಸ್‌ಯುವಿ

ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸರ್ಕಾರ ಇದಾಗಲೇ ಹಲವಾರು ಕಾರು ಕಂಪೆನಿಗಳ ಮೇಲೆ ನಿಬಂಧನೆಯನ್ನು ಹೇರಿತ್ತಾದರೂ ಇದೀಗ ಪರಿಸರ ಪ್ರೇಮಿ ವಿದ್ಯುತ್ ಸಿಟ್ರೋಯೆನ್ ಸಿ5 ಏರ್‌ಕ್ರಾಸ್ ಹೈಬ್ರೀಡ್ ಎಸ್‌ಯುವಿ ಕಾರೊಂದು 2020ರ ವೇಳೆಗೆ ಭಾರತದ ಕಾರುಮಾರುಕಟ್ಟೆಗೆ ಪ್ರವೇಶಿಸಲಿದೆ.

Agencies 15 Nov 2019, 2:38 pm
ಕಾರು ತಯಾರಕ ಕಂಪೆನಿಯಾದ ಪಿಎಸ್‌ಎ ತಂಡವು ಇತ್ತೀಚಿನ ಫಿಯೆಟ್-ಕ್ರಿಸ್ಟಲ್ ಆಟೋಮೊಬೈಲ್ಸ್ ಗುಂಪಿನೊಂದಿಗೆ ವಿಲೀನಗೊಳ್ಳಲಿದ್ದು, ಭಾರತದ ಸಿಟ್ರೋಯೆನ್ ಯೋಜನೆಯ ಮೇಲೆ ಪರಿಣಾಮ ಬೀರುವುದರೊಂದಿಗೆ ಸಿಟ್ರೋಯೆನ್ ಸಿ5 ಏರ್‌ಕ್ರಾಸ್ ಪ್ಲಗ್ - ಇನ್ ಹೈಬ್ರೀಡ್ ಇಲೆಕ್ಟ್ರಿಕ್ ವಾಹನಗಳನ್ನು ಭಾರತಕ್ಕೆ ಪರರಿಚಯಿಸುವುದಾಗಿ ತಿಳಿಸಿದೆ. 2025ರ ವೇಳೆಗೆ ವಾಹನಗಳನ್ನು ಸಂಪೂರ್ಣವಾಗಿ ವಿದ್ಯುದೀಕರಣ ಮಾಡಲಾಗುವುದು ಎಂದು ಅದು ಘೋಷಿಸಿದೆ.
Vijaya Karnataka Web New Project (3)
Electric Cetroen C5 Aircross Hybrid SUV


ಸಿಟ್ರೋಯೆನ್ ಮೊದಲ ಬಾರಿಗೆ ವಿದ್ಯುದೀಕರಣ ಯೋಜನೆಯನ್ನು ಪ್ರಾರಂಭಿಸಿದ್ದು, ಫ್ರಾನ್ಸ್‌ನಲ್ಲಿ ಆದೇಶದ ಮೇರೆಗೆ ಸಿ5 ಏರ್‌ಕ್ರಾಸ್ ಹೈಬ್ರೀಡ್‌ಗಳು ಲಭ್ಯವಾಗುತ್ತಿದೆ. ಇದರ ಬೆಲೆ ಯುರೋ ಕರೆನ್ಸಿಗೆ ಅನುಗುಣವಾಗಿ 39,950 ರಿಂದ ಪ್ರಾರಂಭವಾಗಿ, 31.42 ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಲಾಗಿದೆ. 2020ರಲ್ಲಿ ಈ ವಾಹನಗಳ ವಿತರಣೆಗಳು ಭಾರತದಲ್ಲೂ ಪ್ರಾರಂಭವಾಗಲಿದೆ ಎಂದು ಕಂಪೆನಿಯು ಅಭಿಪ್ರಾಯಿಸಿದೆ.

ಪ್ಲಗ್‌-ಇನ್ ಸಿ 5 ಏರ್‌ಕ್ರಾಸ್ ಭಾರತಕ್ಕೆ ಆಗಮಿಸಿದರೆ ಭಾರತದ ಹೈಬ್ರೀಡ್ ಕಾರುಗಳಾದ ಟೊಯೋಟಾ ಕ್ಯಾಮ್ರಿ, ಪ್ರಿಯುಸ್ ಮತ್ತು ಹೋಂಡಾ ಅಕಾರ್ಡ್‌ನಂತಹ ಉತ್ತಮ ಗುಣಮಟ್ಟದ ಕಾರುಗಳೊಂದಿಗೆ ಸ್ಪರ್ಧಿಸುವಲ್ಲಿ ಸಂಶಯವಿಲ್ಲ. ಸಾಮಾನ್ಯ ಕಾರುಗಳಲ್ಲದೇ ಇಲೆಕ್ಟ್ರಿಕ್ ಕಾರುಗಳಾದ ಹ್ಯುಂಡೈ ಕೋನಾ ಹಾಗೂ ಕಾರು ಮಾರುಕಟ್ಟೆಗೆ ಪ್ರವೇಶಿಸಲಿರುವ ಇಲೆಕ್ಟ್ರಿಕ್ ಕಾರು ಎಂಜಿ ಝಡ್‌ಎಸ್‌ಗೂ ಕೂಡ ಇದು ಸ್ಪರ್ಧೆಯೊಡ್ಡಲಿದೆ.

2020ರ ಕೊಡುಗೆಯಾಗಿ ಭಾರತಕ್ಕೆ ಬ್ರ್ಯಾಂಡೆಡ್‌ ಆಡಿ ಕ್ಯೂ8 ಎಸ್‌ಯುವಿ

ಸಿಟ್ರೋಯೆನ್ ಸಿ5 ಏರ್‌ಕ್ರಾಸ್‌ನ್ನು ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಕೊಡುಗೆಯಾಗಿ ನೀಡಲಿದೆ ಎಂದು ಕಂಪೆನಿಯು ತಿಳಿಸಿದೆ. ಸ್ಪೋರ್ಟ್ ಯುಟಿಲಿಟಿ ವಾಹನವು(ಎಸ್‌ಯುವಿ) ಪ್ರೋಗ್ರೆಸ್ಸಿವ್ ಹೈಡ್ರಾಲಿಕ್ ಕುಶನ್ ಹೊಂದಿದ್ದು, ಇದು ಇತರ ಗಾತ್ರದ ಎಸ್‌ಯುವಿಗಳಿಗಿಂತಲೂ ಉತ್ತಮ ಗುಣಮಟ್ಟದ ಚಾಲನೆಯ ಅನುಭವವನ್ನು ನೀಡಲಿದೆ. ಪ್ಲಗ್ ಇನ್ ಇಲೆಕ್ಟ್ರಿಕ್ ವಾಹನಗಳಲ್ಲಿ 182 ಪಿಎಸ್ ಪೆಟ್ರೋಲ್ ಎಂಜಿನ್‌ನ್ನು ಮತ್ತು 80 ಕೆಡಬ್ಲ್ಯೂ ಇಲೆಕ್ಟ್ರಿಕ್ ಮೋಟರ್‌ನಿಂದ ವಿದ್ಯುತ್‌ನ್ನು ಇದು ಪಡೆದುಕೊಳ್ಳುತ್ತದೆ. ಒಟ್ಟು 228 ಪಿಎಸ್ ಮತ್ತು 320 ಎನ್‌ಎಂ ಟಾರ್ಕ್‌, 1.6 ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಎಂಜಿನ್‌ನ್ನು ಒಳಗೊಂಡಿದೆ. ಇದು ಪಿಎಸ್‌ಎಯ 8 ಸ್ಪೀಡ್ ಸ್ವಯಂಚಾಲಿತ ಹೈಬ್ರೀಡ್ ಅಪ್ಲಿಕೇಶನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದ ಇ-ಇಎಟಿ8 ರಿಂದ ತನ್ನ ಶಕ್ತಿಯನ್ನು ಪ್ರಸರಣಗೊಳಿಸುತ್ತದೆ.
ಹ್ಯುಂಡೈನ ಸೆಡಾನ್ ಕಾರು ಈಗ ಔರಾ

ಇದರಲ್ಲಿ ಅಳವಡಿಸಲಾದ 13.2 ಕಿ.ವ್ಯಾಟ್ ಯುನಿಟ್ ಬ್ಯಾಟರಿಯು ಸಿ5ಕ್ಕೆ ಸುಮಾರು 50 ಕಿ.ಮೀವರೆಗೆ ಎಲ್ಲಾ ರೀತಿಯ ವಿದ್ಯತ್ ಶ್ರೇಣಿಯನ್ನು ಒದಗಿಸುತ್ತದೆ. ಇನ್ನೂ ಅಧಿಕ ವ್ಯಾಟ್‌ಗಳು ಬೇಕಾದಲ್ಲಿ 7.4ಕಿಲೋ ವ್ಯಾಟ್‌ ಚಾರ್ಜರನ್ನು ಹೆಚ್ಚಿನ ಅವಶ್ಯಕತೆಗೆ ಬಳಸಬಹುದಾಗಿದೆ. ಈ ಪಿಹೆಚ್‌ಇವಿಯನ್ನು ಸಂಪೂರ್ಣವಾಗಿ ಕೇವಲ 2 ಗಂಟೆಯೊಳಗಾಗಿ ಚಾರ್ಜ್‌ ಮಾಡಬಹುದು. ಒಂದು ವೇಳೆ ಚಾರ್ಜ್‌ರ್ ನಿಮ್ಮ ಬಳಿ ಇಲ್ಲವಾದಲ್ಲಿ ಸ್ಟ್ಯಾಂಡರ್ಡ್ ಹೋಮ್ ಸಾಕೇಟ್‌ನಿಂದ ಕೂಡ ಸಿಟ್ರೋಯೆನ್ 7ಗಂಟೆಗಳ ಒಳಗೆ ಜಾರ್ಜ್‌ ಮಾಡಿಕೊಳ್ಳಬಹುದು. ಇನ್ನೂ ಇದಕ್ಕೆ ಗ್ರೀನ್‌ಅಪ್ ಲೆಗ್ರ್ಯಾಂಡ್ 230 ವೋಲ್ಟೇಜ್ 14 ಎ ಸಾಕೆಟ್ ನಿಮಗೆ ಕೇವಲ 4 ಗಂಟೆಯಲ್ಲಿ ಪೂರ್ಣ ಚಾರ್ಜ್‌ನ್ನು ನೀಡುತ್ತದೆ. ಹೈಬ್ರೀಡ್ ಮಾದರಿಯ ಈ ನೂತನ ಕಾರು ಇಂದಿನ ಆರ್ಥಿಕತೆಗೆ ಹೇಳಿ ಮಾಡಿಸಿದಂತಿದೆ ಎಂದರೆ ತಪ್ಪಾಗಲಾರದು. ಅಸಾಧಾರಣ ಇಂಧನ ಆರ್ಥಿಕತೆಯನ್ನು ಪಡೆಯುವಲ್ಲಿ ಸಹಕರಿಸುವ ಈ ಕಾರನ್ನು ಸ್ಟ್ಯಾಂಡರ್ಡೈಸ್ಡ್ ವರ್ಲ್ಡ್ ಹಾರ್ಮೋನೈಸ್ಡ್ ಡ್ಯೂಟಿ ವಾಹನಗಳ ಪರೀಕ್ಷಾ ವಿಧಾನದ ಮೂಲಕ ಪರೀಕ್ಷಿಸಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ಸ್ಟೇರಿಂಗ್ ಚಕ್ರಗಳ ಮೂಲಕ ಭಾರತದ ಹೆದ್ದಾರಿಯಲ್ಲಿ ಮತ್ತು ಒರಾಟದ ರಸ್ತೆಯಲ್ಲಿ ಸರಾಗವಾಗಿ ಸಾಗಬಲ್ಲ ಸಾಮರ್ಥ್ಯವನ್ನು ಇದು ಹೊಂದಿದ್ದು, 2020ರ ಅಂತ್ಯದೊಳಗೆ ಈ ಮಾದರಿಯ ಕಾರುಗಳು ಭಾರತವನ್ನು ಪ್ರವೇಶಿಸಬಹುದೆಂದು ಅಂದಾಜಿಸಬಹುದಾಗಿದೆ. ಈ ಕಾರುಗಳ ಬೆಲೆಯು 16 ಲಕ್ಷ ರೂಪಾಯಿಗಳಿಂದ ಆರಂಭವಾಗುವ ನೀರೀಕ್ಷೆಯಿದ್ದು, 2023ರವರೆಗೆ ಪ್ರತೀ ವರ್ಷವು ಕಂಪೆನಿಯು ಇದೇ ರೀತಿಯಲ್ಲಿ ಹೊಸ ಮಾದರಿಯ ಕಾರುಗಳನ್ನು ಪರಿಚಯಿಸಲಾಗುತ್ತದೆ ಎಂದು ಭರವಸೆಯನ್ನು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ