ಆ್ಯಪ್ನಗರ

ಮಾರುತಿ ಸುಜುಕಿ ಸ್ವಿಫ್ಟ್‌ಗೆ ಟೈಮ್ಸ್‌ ವರ್ಷದ ಕಾರು ಪ್ರಶಸ್ತಿ

ಬಿಬಿಸಿ ಟಾಪ್‌ ಗೇರ್‌ ಸಹಯೋಗದಲ್ಲಿ ನಡೆದ 11ನೇ ಆವೃತ್ತಿಯ ಟೈಮ್ಸ್‌ ಆಟೊ ಅವಾರ್ಡ್ಸ್ ಸಮಾರಂಭದಲ್ಲಿ ಟಾಟಾ ಮೋಟಾರ್ಸ್‌ ವರ್ಷದ ಉತ್ಪಾದಕ ಪ್ರಶಸ್ತಿ ಗಳಿಸಿತು.

Vijaya Karnataka 10 Mar 2019, 9:40 am
ಮುಂಬಯಿ: ಮಾರುತಿ ಸುಜುಕಿಯ ಸ್ವಿಫ್ಟ್‌ ಕಾರು, ಪ್ರತಿಷ್ಠಿತ ಟೈಮ್ಸ್‌ ಆಟೊ ಅವಾರ್ಡ್ಸ್ 2019 ಕಾರ್ಯಕ್ರಮದಲ್ಲಿ ವರ್ಷದ ಕಾರು ಪ್ರಶಸ್ತಿಯನ್ನು ಗಳಿಸಿದೆ.
Vijaya Karnataka Web Swift


ದ್ವಿಚಕ್ರ ವಾಹನ ಉತ್ಪಾದಕ ಈಶರ್‌ ಮೋಟಾರ್ಸ್‌ ತನ್ನ ರಾಯಲ್‌ ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್‌ 650 ಸಲುವಾಗಿ ವರ್ಷದ ಬೈಕ್‌ ಪ್ರಶಸ್ತಿಯನ್ನು ಪಡೆದಿದೆ. ಮುಂಬಯಿನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಆಟೊಮೊಬೈಲ್‌ ವಲಯದ ದಿಗ್ಗಜರು ಭಾಗವಹಿಸಿದ್ದರು. ಸಿನಿಮಾ ರಂಗದ ಸೆಲೆಬ್ರಿಟಿಗಳಾದ ಪತ್ರಲೇಖಾ, ಗುರ್ಮಿತ್‌ ಚೌಧುರಿ, ಸಮೀರಾ ರೆಡ್ಡಿ, ರಾಧಿಕಾ ಮದನ್‌ ಮೊದಲಾದವರು ಭಾಗವಹಿಸಿದ್ದರು.

ಬಿಬಿಸಿ ಟಾಪ್‌ ಗೇರ್‌ ಸಹಯೋಗದಲ್ಲಿ ನಡೆದ 11ನೇ ಆವೃತ್ತಿಯ ಟೈಮ್ಸ್‌ ಆಟೊ ಅವಾರ್ಡ್ಸ್ ಸಮಾರಂಭದಲ್ಲಿ ಟಾಟಾ ಮೋಟಾರ್ಸ್‌ ವರ್ಷದ ಉತ್ಪಾದಕ ಪ್ರಶಸ್ತಿ ಗಳಿಸಿತು. ಪೋರ್ಷೆಯ ಕೇನ್‌ ಲಕ್ಸುರಿ ಎಸ್‌ಯುವಿ ಪ್ರಶಸ್ತಿ ಗಳಿಸಿತು. ಸಮಾರಂಭದಲ್ಲಿ ಬಿಸಿಸಿಎಲ್‌ ಅಧ್ಯಕ್ಷ (ರೆವೆನ್ಯೂ ವಿಭಾಗ) ಶಿವಕುಮಾರ್‌ ಸುಂದರಂ ಅವರು ಮಾತನಾಡಿ, '' ಟೈಮ್ಸ್‌ ಆಟೊ ಅವಾರ್ಡ್ಸ್ ಕಾರ್ಯಕ್ರಮದಿಂದ ಬಿಸಿಸಿಎಲ್‌ ಹಾಗೂ ಟಾಪ್‌ ಗೇರ್‌ ಇಂಡಿಯಾ ಸಹಭಾಗಿತ್ವ ಮತ್ತಷ್ಟು ವೃದ್ಧಿಸಿದಂತಾಗಿದೆ.

ಆಟೊಮೊಬೈಲ್‌ ಉದ್ದಿಮೆಯಲ್ಲಿ ಹೊಸ ಮಾನದಂಡವನ್ನು ಸಿದ್ಧಪಡಿಸಲು ಇದು ನೆರವಾಗಿದೆ. ಟೈಮ್ಸ್‌ ಆಟೊ ಮತ್ತು ಬಿಬಿಸಿ ಟಾಪ್‌ಗೇರ್‌ ಎರಡೂ ಅತ್ಯಂತ ಪ್ರತಿಷ್ಠಿತ ಬ್ರ್ಯಾಂಡ್‌ಗಳಾಗಿದ್ದು, ಈ ಪ್ರಶಸ್ತಿಗಳು ಆಟೊಮೊಬೈಲ್‌ ವಲಯದ ಶ್ರೇಷ್ಠತೆಯನ್ನು ಬಿಂಬಿಸುತ್ತಿದೆ'' ಎಂದು ಹೇಳಿದರು.

ಬಿಬಿಸಿ ಟಾಪ್‌ಗೇರ್‌ ಇಂಡಿಯಾದ ಸಂಪಾದಕರಾದ ಗಿರೀಶ್‌ ಕರ್ಕೆರಾ ಮಾತನಾಡಿ, '' ಮಾರುಕಟ್ಟೆಯಲ್ಲಿ ಮಾರಾಟದ ಅಂಕಿ ಅಂಶಗಳು ಅಥವಾ ಗಳಿಸಿದ ಸಂಪಾದನೆಯನ್ನು ಆಧರಿಸಿ ಆಟೊಮೊಬೈಲ್‌ ಉತ್ಪನ್ನದ ಯಶಸ್ಸನ್ನು ಸದಾ ಅಳೆಯುವುದು ಸಹಜ. ಆದರೆ ನಾವು ಉತ್ಪನ್ನದ ನಿರ್ಮಾಣದ ಹಿಂದಿನ ಉದ್ದೇಶ, ಅದು ಪ್ರತಿಸ್ಪರ್ಧಿಗಳಿಗಿಂತ ಹೇಗೆ ಮುಂಚೂಣಿಯಲ್ಲಿದೆ ಎಂಬಿತ್ಯಾದಿಗಳನ್ನೂ ಪರಿಗಣಿಸುತ್ತವೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ