ಆ್ಯಪ್ನಗರ

ಹೋಂಡಾ ಸಿಬಿಆರ್650ಎಫ್ ರಸ್ತೆಗೆ; ಬೆಲೆ, ವೈಶಿಷ್ಟ್ಯ

ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ನಿರ್ಮಾಣ ಸಂಸ್ಧೆಯ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ಅತಿ ನೂತನ ಸಿಬಿಆರ್650ಎಫ್ ಬೈಕ್ ಬಿಡುಗಡೆಗೊಳಿಸಿದೆ.

ಟೈಮ್ಸ್ ಆಫ್ ಇಂಡಿಯಾ 11 Oct 2017, 4:57 pm
ಹೊಸದಿಲ್ಲಿ: ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ನಿರ್ಮಾಣ ಸಂಸ್ಧೆಯ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ಅತಿ ನೂತನ ಸಿಬಿಆರ್650ಎಫ್ ಬೈಕ್ ಬಿಡುಗಡೆಗೊಳಿಸಿದೆ.
Vijaya Karnataka Web new honda cbr650f launched at rs 7 3 lakh bookings open
ಹೋಂಡಾ ಸಿಬಿಆರ್650ಎಫ್ ರಸ್ತೆಗೆ; ಬೆಲೆ, ವೈಶಿಷ್ಟ್ಯ


ಬೆಲೆ: 7.3 ಲಕ್ಷ ರೂ. (ಎಕ್ಸ್ ಶೋ ರೂಂ ದಿಲ್ಲಿ)

2015ನೇ ಇಸವಿಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿರುವ ಹೋಂಡಾ ಸಿಬಿಆರ್650ಎಫ್, ಭಾರತದ ಮೊದಲ ಪ್ರೀಮಿಯಂ 'ಮೇಡ್ ಇನ್ ಇಂಡಿಯಾ' ಬೈಕಾಗಿದೆ.

2017 ಸಿಬಿಆರ್650ಎಫ್ ಬೈಕ್‌ನಲ್ಲಿ ಹೊಸತಾದ ಮಿಲೇನಿಯಂ ರೆಡ್, ಮ್ಯಾಟ್ ಗನ್ ಪೌಡರ್ ಬ್ಲ್ಯಾಕ್ ಮೆಟ್ಯಾಲಿಕ್ ಜೊತೆಗೆ ಆಕರ್ಷಕ ಗ್ರಾಫಿಕ್ಸ್ ನೀಡಲಾಗಿದೆ.

ಇದರಲ್ಲಿರುವ ಶೋವಾ ಡ್ಯುಯಲ್ ಬೆಂಡಿಂಗ್ ವಾಲ್ವ್ ವಿಧದ ಫ್ರಂಟ್ ಫಾರ್ಕ್ ಮತ್ತು ನವೀಕೃತ ನಿಸ್ಸಿನ್ ಬ್ರೇಕ್ ಕ್ಯಾಲಿಪರ್ ಡ್ಯುಯಲ್ ಮುಂಭಾಗದ ಚಕ್ರದಲ್ಲಿ 320ಎಂಎಂ ಪೆಡಲ್ ಡಿಸ್ಕ್ ಉತ್ತಮ ಸ್ಥಿರತೆಯನ್ನು ಪ್ರದಾನ ಮಾಡಲಿದೆ.

ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಡ್ಯುಯಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಪ್ರಮುಖ ಆಕರ್ಷಣೆಯಾಗಿರಲಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

ಎಂಜಿನ್:
649 ಸಿಸಿ,
ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್,
6 ಸ್ಪೀಡ್ ಗೇರ್ ಬಾಕ್ಸ್,
86.6PS (11,000rpm)
60.5Nm (8,500rpm)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ