ಆ್ಯಪ್ನಗರ

ಅಚ್ಚರಿಯ ಬೆಲೆಗಳಲ್ಲಿ ಮಾರುತಿ ಸ್ವಿಫ್ಟ್ ಭರ್ಜರಿ ಎಂಟ್ರಿ

ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವಾಗಿರುವ 2018 ಆಟೋ ಎಕ್ಸ್‌ಪೊದಲ್ಲಿ ಅತಿ ನೂತನ ಸ್ವಿಫ್ಟ್ ಕಾರಿನ ಪ್ರವೇಶವಾಗಿದೆ.

TIMESOFINDIA.COM 8 Feb 2018, 3:01 pm
ಹೊಸದಿಲ್ಲಿ: ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವಾಗಿರುವ 2018 ಆಟೋ ಎಕ್ಸ್‌ಪೊದಲ್ಲಿ ಅತಿ ನೂತನ ಸ್ವಿಫ್ಟ್ ಕಾರಿನ ಪ್ರವೇಶವಾಗಿದೆ.
Vijaya Karnataka Web new maruti suzuki swift launched starting at rs 5 lakh
ಅಚ್ಚರಿಯ ಬೆಲೆಗಳಲ್ಲಿ ಮಾರುತಿ ಸ್ವಿಫ್ಟ್ ಭರ್ಜರಿ ಎಂಟ್ರಿ


ಆದರೆ ಎಲ್ಲರನ್ನು ಅಚ್ಚರಿಗೊಳಿಸುವ ರೀತಿಯಲ್ಲಿ 4.99 ಲಕ್ಷ ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಸ್ವಿಫ್ಟ್ ಭರ್ಜರಿ ಬಿಡುಗಡೆ ಕಂಡಿದೆ. ಹಾಗೆಯೇ ಟಾಂಪ್ ಎಂಡ್ ವೆರಿಯಂಟ್ 7.96 ಲಕ್ಷ ರೂ.ಗಳಷ್ಟು ದುಬಾರಿಯೆನಸಲಿದೆ.

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ)

ಪೆಟ್ರೋಲ್ ಮ್ಯಾನುವಲ್
ಎಲ್‌ಎಕ್ಸ್‌ಐ: 4.99 ಲಕ್ಷ ರೂ.
ವಿಎಕ್ಸ್‌ಐ: 5.87 ಲಕ್ಷ ರೂ.
ಝಡ್ಎಕ್ಸ್‌ಐ: 6.49 ಲಕ್ಷ ರೂ.
ಝಡ್ಎಕ್ಸ್‌ಐ ಪ್ಲಸ್: 7.29 ಲಕ್ಷ ರೂ.

ಪೆಟ್ರೋಲ್ ಆಟೋಮ್ಯಾಟಿಕ್ (ಎಜಿಎಸ್)
ವಿಎಕ್ಸ್‌ಐ: 6.34 ಲಕ್ಷ ರೂ.
ಝಡ್ಎಕ್ಸ್‌ಐ: 6.96 ಲಕ್ಷ ರೂ.

ಡೀಸೆಲ್ ಮ್ಯಾನುವಲ್
ಎಲ್‌ಡಿಐ: 5.99 ಲಕ್ಷ ರೂ.
ವಿಡಿಐ: 6.87 ಲಕ್ಷ ರೂ.
ಝಡ್‌ಡಿಐ: 7.49 ಲಕ್ಷ ರೂ.
ಝಡ್‌ಡಿಐ ಪ್ಲಸ್: 8.29 ಲಕ್ಷ ರೂ.

ಡೀಸೆಲ್ ಆಟೋಮ್ಯಾಟಿಕ್ (ಎಜಿಎಸ್)
ವಿಡಿಐ: 7.34 ಲಕ್ಷ ರೂ.
ಝಡ್‌ಡಿಐ: 7.96 ಲಕ್ಷ ರೂ.

ಮೂರನೇ ತಲೆಮಾರಿನ ಹೊಸ ಹೊಚ್ಚ ಸ್ವಫ್ಟಿ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯು ಜನವರಿ ತಿಂಗಳಿನಿಂದಲೇ ಆರಂಭವಾಗಿತ್ತು. ಅಲ್ಲದೆ ಈಗಗಾಲೇ 40,000ಗಿಂತಲೂ ಹೆಚ್ಚು ಮುಂಗಡ ಬುಕ್ಕಿಂಗ್‌ಗಳು ದಾಖಲಾಗಿದೆ.

ಎಂಜಿನ್:
ನೂತನ ಸ್ವಿಫ್ಟ್ ಕಾರು 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

2005ನೇ ಇಸವಿಯಲ್ಲಿ ಮೊದಲ ಬಾರಿಗೆ ದೇಶಕ್ಕೆ ಎಂಟ್ರಿ ಕೊಟ್ಟಿರುವ ಸ್ವಿಫ್ಟ್ ಇದುವರೆಗೆ 18 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟವನ್ನು ಕಂಡಿದೆ.

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಅಗ್ರ ಐದು ಕಾರುಗಳಲ್ಲಿ ಗುರುತಿಸಿಕೊಳ್ಳುವ ಸ್ವಿಫ್ಟ್, ದೇಶದ ಸರ್ವಕಾಲಿಕ ಶ್ರೇಷ್ಠ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ