ಆ್ಯಪ್ನಗರ

ರಸ್ತೆಗೆ ಪ್ರವೇಶಿಸಿದ ಕ್ವಿಡ್ ಹೊಸ ಅವತಾರ

ದೇಶದ ಸಣ್ಣ ಕಾರು ವಾಹನ ಮಾರುಕಟ್ಟೆಯಲ್ಲಿ ಭಾರಿ ಸಂಚಲವನ್ನುಂಟು ಮಾಡಿರುವ ರೆನೊ ಕ್ವಿಡ್‌ನ ಮಗದೊಂದು ಆಕರ್ಷಕ ಆವೃತ್ತಿ ದೇಶದ ರಸ್ತೆಗೆ ಪ್ರವೇಶಿಸಿದೆ. ಅದುವೇ ಕ್ವಿಡ್ ಆರ್‌ಎಕ್ಸ್‌ಎಲ್ 1.0 ಲೀಟರ್ ಎಸ್‌ಸಿಇ (ಸ್ಮಾರ್ಟ್ ಕಂಟ್ರೋಲ್ ಎಫಿಷಿಯೆನ್ಸಿ)

ಟೈಮ್ಸ್ ಆಫ್ ಇಂಡಿಯಾ 24 Feb 2017, 5:22 pm
ಹೊಸದಿಲ್ಲಿ: ದೇಶದ ಸಣ್ಣ ಕಾರು ವಾಹನ ಮಾರುಕಟ್ಟೆಯಲ್ಲಿ ಭಾರಿ ಸಂಚಲವನ್ನುಂಟು ಮಾಡಿರುವ ರೆನೊ ಕ್ವಿಡ್‌ನ ಮಗದೊಂದು ಆಕರ್ಷಕ ಆವೃತ್ತಿ ದೇಶದ ರಸ್ತೆಗೆ ಪ್ರವೇಶಿಸಿದೆ. ಅದುವೇ ಕ್ವಿಡ್ ಆರ್‌ಎಕ್ಸ್‌ಎಲ್ 1.0 ಲೀಟರ್ ಎಸ್‌ಸಿಇ (ಸ್ಮಾರ್ಟ್ ಕಂಟ್ರೋಲ್ ಎಫಿಷಿಯೆನ್ಸಿ)
Vijaya Karnataka Web renault launches kwid variant priced at rs 3 54 lakh
ರಸ್ತೆಗೆ ಪ್ರವೇಶಿಸಿದ ಕ್ವಿಡ್ ಹೊಸ ಅವತಾರ


ಎರಡು ಮಾದರಿಗಳಲ್ಲಿ ಲಭ್ಯ: ಮ್ಯಾನುವಲ್ ಹಾಗೂ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ರೆನೊ ಕ್ವಿಡ್ ಆರ್‌ಎಕ್ಸ್‌ಎಲ್ 1.0 ಲೀ. ಎಸ್ಇ (ಮ್ಯಾನುವಲ್): 3.54 ಲಕ್ಷ ರೂ.
ರೆನೊ ಕ್ವಿಡ್ ಆರ್‌ಎಕ್ಸ್‌ಎಲ್ 1.0 ಲೀ. ಎಸ್ಇ (ಎಎಂಟಿ): 3.84 ಲಕ್ಷ ರೂ.

ಕ್ವಿಡ್ ನೂತನ ಮ್ಯಾನುವಲ್ ಮಾದರಿ 800ಸಿಸಿ ಆವೃತ್ತಿಗಿಂತಲೂ 22,000 ರೂ.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ. ಹಾಗೆಯೇ ಎಎಂಟಿ ಮಾದರಿಯು 1.0 ಲೀಟರ್ ಮ್ಯಾನುವಲ್ ಆವೃತ್ತಿಗಿಂತಲೂ 30,000 ರೂ.ಗಳಷ್ಟು ಹೆಚ್ಚು ದುಬಾರಿಯಾಗಲಿದೆ.

2015ನೇ ಸಾಲಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರೆನೊ ಕ್ವಿಡ್ ಈಗಾಗಲೇ 1.3 ಲಕ್ಷಕ್ಕೂ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಂಡಿದೆ. ಇದರೊಂದಿಗೆ ಕ್ವಿಡ್ 1.0 ಲೀಟರ್ ಮಾದರಿಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

1.0 ಆರ್‌ಎಕ್ಸ್‌ಎಲ್, 1.0 ಎಎಂಟಿ ಆರ್‌ಎಕ್ಸ್ಎಲ್, 1.0 ಆರ್‌ಎಕ್ಸ್‌ಟಿ, 1.0 ಆರ್‌ಎಕ್ಸ್‌ಟಿ (ಐಚ್ಛಿಕ) ಮತ್ತು 1.0 ಎಎಂಟಿ ಆರ್‌ಎಕ್ಸ್‌ಟಿ (ಐಚ್ಛಿಕ).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ