ಆ್ಯಪ್ನಗರ

ವಾಹನ ವಿಮೆಯಲ್ಲಿ ಗರಿಷ್ಠ ಶೇ. 21 ಏರಿಕೆ

ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಆರ್‌ಡಿಎಐ) ವಾಹನದ ಮೂರನೇ ಪಾರ್ಟಿ (ಥರ್ಡ್‌ ಪಾರ್ಟಿ) ವಿಮೆ ಮೊತ್ತವನ್ನು ಹೆಚ್ಚಿಸಿದೆ.

THE ECONOMIC TIMES 13 Jun 2019, 6:00 pm
ದ್ವಿಚಕ್ರ ವಾಹನ ಮಾಲೀಕರಿಗೆ ವಿಮೆ ಬೆಲೆಯೇರಿಕೆಯ ಬಿಸಿ ತಟ್ಟುತ್ತಿದೆ. ವಿಮೆ ನಿಯಂತ್ರಣ ಪ್ರಾಧಿಕಾರ ದ್ವಿಚಕ್ರ ವಾಹನಗಳ ಮೂರನೇ ಪಾರ್ಟಿ ವಿಮೆ ಮೊತ್ತವನ್ನು ಗರಿಷ್ಠ ಶೇ. 21ರಷ್ಟು ಹೆಚ್ಚಿಸಿದ್ದರೆ, ಕಾರುಗಳಿಗೆ ಶೇ. 12.5ರಷ್ಟು ಏರಿಕೆ ಮಾಡಿದೆ.
Vijaya Karnataka Web Cars


ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಆರ್‌ಡಿಎಐ) ವಾಹನದ ಮೂರನೇ ಪಾರ್ಟಿ (ಥರ್ಡ್‌ ಪಾರ್ಟಿ) ವಿಮೆ ಮೊತ್ತವನ್ನು ಹೆಚ್ಚಿಸಿದೆ. ಪ್ರೀಮಿಯಂ ದ್ವಿಚಕ್ರ ವಾಹನಗಳ ವಿಮೆಯು ಗರಿಷ್ಠ ಶೇ. 21ರಷ್ಟು ಹೆಚ್ಚಳವಾಗಿದ್ದರೆ, ಕಾರುಗಳ ವಿಮೆ ಮೊತ್ತ ಶೇ. 12.5ರಷ್ಟು ಏರಿಕೆಯಾಗಿದೆ.

150ರಿಂದ 350 ಸಿಸಿ ವಿಭಾಗದ ದ್ವಿಚಕ್ರ ವಾಹನಗಳ ಥರ್ಡ್‌ ಪಾರ್ಟಿ ವಿಮೆ ಮೊತ್ತವನ್ನು ಈಗಿನ 985ರಿಂದ 1, 193 (ಶೇ. 21) ಏರಿಕೆಯಾಗಿದೆ. 150 ಸಿಸಿವರೆಗಿನ ದ್ವಿಚಕ್ರ ವಾಹನಗಳ ವಿಮೆಯಲ್ಲಿ ಶೇ. 4.4 ಹೆಚ್ಚಳವಾಗಿದೆ.

ಕಾರುಗಳ ಥರ್ಡ್‌ ಪಾರ್ಟಿ ವಿಮೆ ಮೊತ್ತವನ್ನು ಕೂಡ ಆರ್‌ಡಿಎಐ ಏರಿಕೆ ಮಾಡಿದೆ. 1,000 ಸಿಸಿ ಒಳಗಿನ ಖಾಸಗಿ ಬಳಕೆಯ ಕಾರುಗಳ ವಿಮೆ ಮೊತ್ತ ಈಗಿನ 1,850ರಿಂದ 2,072ಕ್ಕೆ ತಲುಪಿದ್ದರೆ, 1,000-1,500 ಸಿಸಿ ಕಾರುಗಳ ಥರ್ಡ್‌ ಪಾರ್ಟಿ ವಿಮೆ ಮೊತ್ತದಲ್ಲಿ ಶೇ. 1.2.5ರಷ್ಟು ಏರಿಕೆ ಮಾಡಲಾಗಿದ್ದು, 3,211 ರೂ.ಗೆ ನಿಗದಿಯಾಗಿದೆ. ಆದರೆ ಪ್ರೀಮಿಯಂ ವಿಭಾಗದ ಕಾರುಗಳ ವಿಮೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಇಲೆಕ್ಟ್ರಿಕ್‌ ಕಾರುಗಳ ಒಂದು ವರ್ಷದ ವಿಮೆ ಪಾಲಿಸಿಗೆ 3,735 ರೂ. ಹಾಗೂ ದೀರ್ಘಾವಧಿ ಪಾಲಿಸಿಗೆ 11,085 ರೂ. ನಿಗದಿ ಮಾಡಲಾಗಿದೆ. ಇಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ವಿಮೆಯು ಒಂದು ವರ್ಷದ ಪಾಲಿಗೆ 1,010 ಹಾಗೂ ದೀರ್ಘಾವಧಿ ಪಾಲಿಸಿಗೆ 4,848 ರೂ.ಗಳಾಗಿವೆ. ಇದಲ್ಲದೆ ಖಾಸಗಿಯಾಗಿ ಬಳಕೆಯಾಗುವ ಇಲೆಕ್ಟ್ರಿಕ್‌ ಕಾರು ಮತ್ತು ದ್ವಿಚಕ್ರ ವಾಹನಗಳ ಥರ್ಡ್‌ ಪಾರ್ಟಿ ವಿಮೆಗೆ ಶೇ. 15ರ ರಿಯಾಯಿತಿಯನ್ನು ಕೂಡ ಐಆರ್‌ಡಿಎಐ ಪ್ರಕಟಿಸಿದೆ.

ಚಿಕ್ಕ ಕಾರುಗಳು (ಕ್ವಾಡ್ರಸೈಕಲ್‌)ಗಳ ವಿಮೆ 2,072 ರೂ. ಹಾಗೂ 500 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರದ ವಾಣಿಜ್ಯ ವಾಹನಗಳ ಥರ್ಡ್‌ ಪಾರ್ಟಿ ವಿಮೆಯನ್ನು 2,595 ರೂ.ಗೆ ನಿಗದಿ ಮಾಡಲಾಗಿದೆ. ಪ್ರಮಾಣೀಕೃತ ವಿಂಟೇಜ್‌ ಕಾರುಗಳ ಥರ್ಡ್‌ ಪಾರ್ಟಿ ವಿಮೆಗೆ ಶೇ. 50ರ ವಿನಾಯಿತಿ ನೀಡಲಾಗುತ್ತದೆ ಎಂದು ಆರ್‌ಡಿಎಐ ಪ್ರಕಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ