ಆ್ಯಪ್ನಗರ

BS6 Himalayan: ಅನಧಿಕೃತ ಬುಕಿಂಗ್‌ ತೆರವುಗೊಳಿಸಿದ ರಾಯಲ್‌ ಎನ್‌ಫೀಲ್ಡ್‌

ರಾಯಲ್‌ ಎನ್‌ಫೀಲ್ಡ್‌ ತನ್ನ ಬಿಎಸ್‌6 ನಿಬಂಧನೆಯ ಹಿಮಾಲಯನ್‌ ಮೋಟಾರ್‌ ಸೈಕಲ್‌ನ ಅನಧಿಕೃತ ಬುಕಿಂಗ್‌ನ್ನು ತೆರವುಗೊಳಿಸಿದ್ದು, ಟೋಕನ್ ಹಣದ ಮೂಲಕ ರಾಯಲ್‌ ಎನ್‌ಫೀಲ್ಡ್‌ನ ಆಯ್ದ ವಿತರಕರುಗಳಿಂದ ಈ ಮೋಟಾರ್‌ ಸೈಕಲ್‌ನ್ನು ಬುಕಿಂಗ್‌ ಮಾಡಬಹುದಾಗಿದೆ.

Agencies 11 Jan 2020, 3:28 pm
ಕೆಲವೊಂದು ಮಾಹಿತಿಗಳ ಪ್ರಕಾರ ಬಿಎಸ್‌6 ನಿಬಂಧನೆಯನ್ನು ಹೊಂದಿರುವ ರಾಯಲ್‌ ಎನ್‌ಫೀಲ್ಡ್‌ನ ಹಿಮಾಲಯನ್‌ ಮೋಟಾರ್‌ ಸೈಕಲ್‌ ಭಾರತದಲ್ಲಿ ಅನಧಿಕೃತವಾದ ಬುಕಿಂಗ್‌ ಆರಂಭಿಸಿದೆ ಎಂದು ತಿಳಿದು ಬಂದಿದೆ. ರಾಯಲ್‌ ಎನ್‌ಫೀಲ್ಡ್‌ನ ಆಯ್ದ ವಿತರಕರುಗಳಿಂದ 10,000 ರೂಪಾಯಿಗಳ ಟೋಕನ್‌ ಮೊತ್ತದಿಂದ ಈ ಮೋಟಾರ್‌ ಸೈಕಲ್‌ನ್ನು ಬುಕಿಂಗ್‌ ಮಾಡಬಹುದೆನ್ನಲಾಗಿದೆ.
Vijaya Karnataka Web BS6 Royal Enfield Himalayan
ಬಿಎಸ್‌6 ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌


ರಾಹುಲ್‌ ದ್ರಾವಿಡ್‌: ಭಾರತದ ಮಾಜಿ ಕ್ರಿಕೆಟ್‌ ಆಟಗಾರನ ಬಳಿ ಎಷ್ಟಿವೆ ಗೊತ್ತಾ ಕಾರುಗಳು..?
ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಮೋಟಾರ್‌ ಸೈಕಲ್‌ನ ವಿತರಕರುಗಳ ಪ್ರಕಾರ ಈ ಬೈಕ್‌ನ್ನು ಕಡು ಕೆಂಪು, ಬೂದು ಮತ್ತು ನೀಲಿ ಈ ಮೂರು ಬಣ್ಣಗಳ ಆಯ್ಕೆಯಲ್ಲಿ ಭಾರತದಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.

ಮರು ಅಭಿವೃದ್ಧಿಗೊಳಿಸಲಾದ ರಾಯಲ್‌ ಎನ್‌ಫೀಲ್ಡ್‌ನ ಹಿಮಾಲಯನ್‌ ಮೋಟಾರ್‌ ಸೈಕಲ್‌ ಇದೇ ತಿಂಗಳ ಅಂತ್ಯದಲ್ಲಿ ಅಂದರೆ ಜನವರಿಯ ಅಂತ್ಯದಲ್ಲಿ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಬಿಎಸ್‌6 ನಿಬಂಧನೆಯ ಈ ಬೈಕ್‌ ಮೊದಲಿದ್ದ ಹಿಮಾಲಯನ್‌ ಮೋಟಾರ್‌ ಹೊಂದಿರುವ ಮೌಲ್ಯಕ್ಕಿಂತಲೂ ಸುಮಾರು 9,000 ರೂಪಾಯಿಗಳಷ್ಟು ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ.

ಬಿಎಸ್‌6 ಹಿಮಾಲಯನ್‌


ಬಿಎಸ್‌4 ನಿಬಂಧನೆಯಿಂದ ಬಿಎಸ್‌6 ನಿಬಂಧನೆಯನ್ನು ಪಡೆದುಕೊಂಡ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಮೋಟಾರ್‌ ಸೈಕಲ್‌ ವಿನ್ಯಾಸದಲ್ಲಿ ಸಾಕಷ್ಟು ವ್ಯತ್ಯಾಸವನ್ನು ಹೊಂದಿದೆ. ಬಿಎಸ್‌6 ಹಿಮಾಲಯನ್‌ನ ಮುಂಭಾಗದ ಚಕ್ರಗಳಲ್ಲಿನ ಸ್ಪೋಕ್‌ಗಳು ಬಿಎಸ್‌4 ನಿಬಂಧನೆಯ ಹಿಮಾಲಯನ್‌ನ ಚಕ್ರದಲ್ಲಿರುವ ಸ್ಪೋಕ್‌ಗಳಿಗಿಂತಲೂ ಚಿಕ್ಕದಾಗಿದೆ.

ದೂರದಿಂದ ನೋಡುವವರಿಗೆ ಈ ಬೈಕ್‌ ಬಿಎಸ್‌4 ಹಿಮಾಲಯನ್‌ನಂತೆ ಕಂಡರೂ ಕೂಡ ಸಮೀಪದಿಂದ ಗಮನಿಸಿದಾಗ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಕೇವಲ ಚಕ್ರಗಳ ಸ್ಪೋಕ್‌ ವಿನ್ಯಾಸದಲ್ಲಿ ಮಾತ್ರವಲ್ಲದೇ ಉನ್ನತ ಗುಣಮಟ್ಟದ ಎಂಆರ್‌ಎಫ್‌ ಟೈರ್‌ಗಳನ್ನು ಪಡೆಯುವ ಮೂಲಕ ತನ್ನ ಟೈರ್‌ಗಳ ವಿನ್ಯಾಸದಲ್ಲೂ ಕೂಡ ಬಿಎಸ್‌6 ಹಿಮಾಲಯನ್‌ ಮೋಟಾರ್‌ ಸೈಕಲ್‌ ಬದಲಾವಣೆಯನ್ನು ಹೊಂದಿದೆ.

Mercedes Benz GLE: ಜನವರಿ 28 ರಂದು ಮತ್ತೊಂದು ಎಸ್‌ಯುವಿ ಬಿಡುಗಡೆ

ಬಿಎಸ್‌6 ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌


ಬಿಎಸ್4 ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ಗಿಂತಲೂ ಬಿಎಸ್‌6 ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಕಾರ್ಯದಕ್ಷತೆಯಲ್ಲಿಯೂ ಕೂಡ ಹೆಚ್ಚಿನ ಸ್ಥಾನವನ್ನು ತನ್ನದಾಗಿಸಿಕೊಳ್ಳಲಿದೆ. ಬಿಎಸ್‌6 ಬೈಕ್‌ ಇಂಧನ ಇಂಜೆಕ್ಟ್‌ನ್ನು ತನ್ನಲ್ಲಿ ಇರಿಸಿಕೊಳ್ಳುವುದರ ಮೂಲಕ ಹೆಚ್ಚಿನ ಎಂಜಿನ್‌ ಸಾಮರ್ಥ್ಯವನ್ನು ಪಡೆಯಬಹುದೆಂದು ಅಂದಾಜಿಸಲಾಗಿದೆ.

Harley Davidson : ಭಾರತೀಯ ವಾಹನ ಮಾರುಕಟ್ಟೆಯನ್ನು ಪ್ರವೇಶಿಸುತ್ತಾ ಅಮೆರಿಕದ ಮೋಟಾರ್‌ ಸೈಕಲ್‌..?
ವಾಹನ ಮಾರುಕಟ್ಟೆಯಲ್ಲಿ ಈಗಿರುವ ಬಿಎಸ್‌4 ಹಿಮಾಲಯನ್‌ ಮೋಟಾರ್‌ ಸೈಕಲ್‌ 411 ಸಿಸಿ ಮೋಟಾರ್‌ನಲ್ಲಿ 24.5 ಪಿಎಸ್‌ ಶಕ್ತಿಯನ್ನು ಮತ್ತು 32 ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸಿದರೆ ಬಿಎಸ್‌6 ಮೋಟಾರ್‌ ಸೈಕಲ್‌ ಇದಕ್ಕಿಂತಲೂ ಹೆಚ್ಚಿನ ಕಾರ್ಯಕ್ಷಮತೆಯನ್ನು ಚಾಲಕರಿಗೆ ನೀಡಬಹುದೆಂದು ಊಹಿಸಲಾಗಿದೆ.

ರಾಯಲ್‌ ಎನ್‌ಫೀಲ್ಡ್‌ ಮೋಟಾರ್‌ ಸೈಕಲ್‌


ಕೆಲವೊಂದು ವಿನ್ಯಾಸದಲ್ಲಿ ಹಾಗೂ ವೈಶಿಷ್ಟ್ಯತೆಗಳಲ್ಲಿ ನಾವು ಬದಲಾವಣೆಯನ್ನು ಗಮನಿಸಿದರೂ ಕೂಡ ಸಸ್ಪೆನ್ಷನ್‌ ಮತ್ತು ಬ್ರೇಕ್‌ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಬದಲಾವಣೆಯಗಲಾರದೆಂದು ನಂಬಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ