ಆ್ಯಪ್ನಗರ

ಪ್ರಯಾಣಿಕರ ರಕ್ಷಣೆಗೆ ಆದ್ಯತೆ: ಸುರಕ್ಷತೆ ನಿಯಮ ಕಡ್ಡಾಯ

2023ರೊಳಗೆ ಇಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ಅಟೋಮೆಟಿಕ್‌ ಬ್ರೇಕಿಂಗ್‌ ಸಿಸ್ಟಂನ್ನು ಪ್ರತಿ ವಾಹನ ಹೊಂದಲೇ ಬೇಕಾಗುತ್ತದೆ.

Vijaya Karnataka Web 28 Feb 2019, 2:33 pm
ಅಂತಾರಾಷ್ಟ್ರೀಯ ರಸ್ತೆ ನಿಯಮಗಳ ರೀತಿಯಲ್ಲೇ ಭಾರತದಲ್ಲೂ ವಾಹನ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ. 2023ರೊಳಗೆ ಇದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.
Vijaya Karnataka Web Car safety


ಈ ವರ್ಷವನ್ನು ದೇಶದಲ್ಲಿ 'ಸುರಕ್ಷಿತ ವಾಹನ ವರ್ಷ'ವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದಿಂದ ಸೀಟ್‌ ಬೆಲ್ಟ್‌ ಅಲರ್ಟ್‌, ರಿವರ್ಸ್‌ ಪಾರ್ಕಿಂಗ್‌ ಮತ್ತು ಸ್ಪೀಡಿಂಗ್‌, ಪಾಸ್‌ ಫ್ರಂಟ್‌, ಸೈಡ್‌ ಕ್ರಾಶ್‌ ಟೆಸ್ಟ್‌ ಕಡ್ಡಾಯಗೊಳಿಸಲಾಗಿದೆ.

2023ರೊಳಗೆ ಇಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ಅಟೋಮೆಟಿಕ್‌ ಬ್ರೇಕಿಂಗ್‌ ಸಿಸ್ಟಂನ್ನು ಪ್ರತಿ ವಾಹನ ಹೊಂದಲೇ ಬೇಕಾಗುತ್ತದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನಡೆಯುವ ರಸ್ತೆ ಅಪಘಾತಗಳಲ್ಲಿ ವಾಹನದೊಳಗೆ ಸಿಲುಕಿ ಸಾಯುತ್ತಿರುವವರ ಸಂಖ್ಯೆ ಕಡಿಮೆ ಇದೆ ಎಂಬುದು ಸತ್ಯ. ಆದರೂ, ಏರ್‌ಬ್ಯಾಗ್‌ ಕಡ್ಡಾಯದಂತಹ ಹಲವು ನಿಯಮಗಳನ್ನು ರಸ್ತೆ ಸಾರಿಗೆ ಸಚಿವಾಲಯ ಕಡ್ಡಾಯಗೊಳಿಸಿದೆ.

ಸರಕಾರದ ಅಧ್ಯಯನದ ಪ್ರಕಾರ ಕಳೆದ ಒಂದು ವರ್ಷದಲ್ಲಿ 26,869 ಕಾರು ಪ್ರಯಾಣಿಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನ ಪ್ರಯಾಣಿಕರ ಪೈಕಿ 72,000 ಜನರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಕಾರಿನಲ್ಲಿ ಸುರಕ್ಷತೆಯನ್ನು ಪಾಲಿಸುವ ನಿಯಮಗಳನ್ನು ಅಳವಡಿಸುವ ಹಿಂದೆ ವಾಹನವೇ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಬಾರದು ಎಂಬ ಉದ್ದೇಶವಿದೆ.

ಇದೇ ವೇಳೆ, ದ್ವಿಚಕ್ರ ವಾಹನಗಳಲ್ಲೂ ಇಂತಹುದೇ ನಿಯಮವನ್ನು ಪಾಲಿಸಬೇಕಾಗಿದೆ. ಹೊಸ ದ್ವಿಚಕ್ರ ವಾಹನಗಳಿಗೆ ಡೇ ಲೈಟ್‌ ರನ್ನಿಂಗ್‌ ಲೈಟ್‌ ಕಡ್ಡಾಯಗೊಳಿಸಲಾಗುತ್ತದೆ. ಆ್ಯಂಟಿಲಾಕ್‌ ಬ್ರೇಕಿಂಗ್‌ ಸಿಸ್ಟಂ (ಎಬಿಎಸ್‌) ಕೂಡ ಕಡ್ಡಾಯಗೊಳಿಸಲಾಗುತ್ತದೆ. ಈ ಮೂಲಕ ವಾಹನ ಸ್ಕಿಡ್‌ ಆಗುವ ಮೂಲಕ ಎದುರಾಗಬಹುದಾದ ಅವಘಡವನ್ನು ತಪ್ಪಿಸಲು ಸಾಧ್ಯವಿದೆ ಎಂದು ಸಾರಿಗೆ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ