ಆ್ಯಪ್ನಗರ

ಇನ್ಮುಂದೆ ಗಾಡಿಗಳನ್ನು ಹೇಗೆ ಬೇಕೋ ಹಾಗೆ ಆಲ್ಟ್ರೇಷನ್‌ ಮಾಡಿಸುವಂತಿಲ್ಲ, ಸುಪ್ರೀಂ ನಿಷೇಧಿಸಿದೆ!

ಹಳೆಯ ಜೀಪುಗಳ ಇಂಜಿನ್‌ ಉಪಯೋಗಿಸಿಕೊಂಡು ಹೊಸದಾಗಿ ಬೇಕಾದಂತೆ ಬಾಡಿ ಕಟ್ಟಿ ಹೊಸ ವಾಹನದ ರೂಪು ಕೊಡುವುದು ರಾಜ್ಯದ ಹಲವು ಕಡೆಗಳಲ್ಲಿ ಸಾಮಾನ್ಯವಾಗಿತ್ತು. ಇನ್ನು ಮುಂದೆ ಮೂಲ ವಾಹನಕ್ಕೆ ಧಕ್ಕೆ ತರುವಂತಹ ಮಾರ್ಪಾಡುಗಳನ್ನು ಮಾಡುವಂತಿಲ್ಲ. ಹಾಗೆ ಮಾಡಿದರೆ ವಾಹನ ನೋಂದಣಿ ರದ್ದುಗೊಳ್ಳಲಿದೆ.

Indiatimes 11 Jan 2019, 2:49 pm
ಹೊಸದಿಲ್ಲಿ: ರಾಷ್ಟ್ರದಲ್ಲಿ ವಾಹನಗಳನ್ನು ಆಲ್ಟ್ರೇಷನ್‌ ಮಾಡಿಸುವುದನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದೆ. ವಾಹನಗಳ ಮೂಲ ಸಂರಚನೆಯಲ್ಲಿ ಮಾರ್ಪಾಡುಗಳನ್ನು ಮಾಡಿದರೆ ಅಂತಹ ವಾಹನಗಳ ನೋಂದಣಿ ಮಾಡುವಂತಿಲ್ಲ ಎಂದು ಕೋರ್ಟ್‌ ಹೇಳಿದೆ.
Vijaya Karnataka Web Vehicle
ಸಾಂದರ್ಭಿಕ ಚಿತ್ರ


ಮೋಟಾರ್‌ ವಾಹನಗಳ ಕಾಯ್ದೆ ತಿದ್ದುಪಡಿಯನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್‌, ಸಿದ್ಧಗೊಂಡ ವಾಹನದ ಮೂಲ ಸಂರಚನೆಯನ್ನು ಯಾವುದೇ ಕಾರಣಕ್ಕೂ ಮಾರ್ಪಾಡು ಮಾಡುವಂತಿಲ್ಲ. ವಾಹಾನದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಹೊರತು ಪಡಿಸಿ, ನೋಂದಣಿ ಪತ್ರದಲ್ಲಿ ದಾಖಲಿಸಿರುವ ವಾಹನದ ಮೂಲಸಂರಚನೆಯನ್ನು ಯಾವುದೇ ಕಾರಣಕ್ಕೂ ಮಾರ್ಪಾಡು ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವಾಹನದ ಬಾಡಿ ಅಥವಾ ಮೂಲರಚನೆಯಲ್ಲಿ ಮಾರ್ಪಾಡು ಮಾಡಿದರೆ ಅಂತಹ ವಾಹಾನಗಳ ನೋಂದಣಿ ಅನರ್ಹಗೊಳ್ಳಲಿವೆ.

ಮಾರ್ಪಾಡುಗಳನ್ನು ಮಾಡಿದ ವಾಹನಗಳಿಗೆ ನೋಂದಣಿ ಮಾಡಬಹುದು ಎಂಬ ಕೇರಳ ಹೈಕೋರ್ಟ್‌ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಮೇಲ್ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ