ಆ್ಯಪ್ನಗರ

8 ಲಕ್ಷ ಬೆಲೆಬಾಳುವ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬಿಡುಗಡೆ

ಬ್ರಿಟನ್‌ನ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಟ್ರಯಂಫ್ ಮೋಟಾರ್‌ಸೈಕಲ್ಸ್, ಭಾರತದಲ್ಲಿ ಅತಿ ನೂತನ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬಿಡುಗಡೆಗೊಳಿಸಿದೆ. ಇದು ಮಾರ್ಡನ್ ಕ್ಲಾಸಿಕ್ ಶ್ರೇಣಿಯಲ್ಲಿ ಟ್ರಯಂಫ್ನಿಂದ ದೇಶದಲ್ಲಿ ಬಿಡುಗಡೆಯಾದ 6ನೇ ಬೈಕಾಗಿದೆ.

ಟೈಮ್ಸ್ ಆಫ್ ಇಂಡಿಯಾ 24 Aug 2017, 5:14 pm
ಹೊಸದಿಲ್ಲಿ: ಬ್ರಿಟನ್‌ನ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಟ್ರಯಂಫ್ ಮೋಟಾರ್‌ಸೈಕಲ್ಸ್, ಭಾರತದಲ್ಲಿ ಅತಿ ನೂತನ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬಿಡುಗಡೆಗೊಳಿಸಿದೆ. ಇದು ಮಾರ್ಡನ್ ಕ್ಲಾಸಿಕ್ ಶ್ರೇಣಿಯಲ್ಲಿ ಟ್ರಯಂಫ್ನಿಂದ ದೇಶದಲ್ಲಿ ಬಿಡುಗಡೆಯಾದ 6ನೇ ಬೈಕಾಗಿದೆ.
Vijaya Karnataka Web triumph street scrambler launched in india
8 ಲಕ್ಷ ಬೆಲೆಬಾಳುವ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬಿಡುಗಡೆ


ಬೆಲೆ: 8.1 ಲಕ್ಷ ರೂ. (ಎಕ್ಸ್ ಶೋ ರೂಂ)

ಈಗಿರುವ ಸ್ಟ್ರೀಟ್ ಟ್ವಿನ್ ತಳಹದಿಯಲ್ಲಿ ನೂತನ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ನಿರ್ಮಿಸಲಾಗಿದ್ದು, ಆಫ್ ರೋಡ್ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಈಗಾಗಲೇ ಬೊನ್‌ವಿಲ್ ತಳಹದಿಯ ಸ್ಕ್ರ್ಯಾಂಬ್ಲರ್ ಮಾರಾಟದಲ್ಲಿದ್ದು, ಈ ಶ್ರೇಣಿಗೆ ಮಗದೊಂದು ಸೇರ್ಪಡೆಯಾಗಿದೆ.

ಹಾಲಿವುಡ್ ಚಲನಚಿತ್ರ ಜ್ಯೂರಸಿಕ್ ವರ್ಲ್ಡ್‌ನಲ್ಲಿ ಕ್ರಿಸ್ ಪ್ರಾಟ್ ಸವಾರಿ ಮಾಡಿರುವ ಕಸ್ಟಮೈಸ್ಡ್ ಸ್ಕ್ರ್ಯಾಂಬ್ಲರ್ ಮಾದರಿಯಿಂದಲೂ ಸ್ಪೂರ್ತಿ ಪಡೆದು ರಚಿಸಲಾಗಿದೆ. ಇನ್ನು ದೇಹ ರಚನೆಯನ್ನು ಸ್ಟ್ರೀಟ್ ಟ್ವಿನ್ ತಳಹದಿಯಲ್ಲಿ ರಚಿಸಲಾಗಿದೆ.

ಎಂಜಿನ್:
900 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ 80 ಎನ್‌ಎಂ ತಿರುಗುಬಲದಲ್ಲಿ 55 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಗೇರ್ ಬಾಕ್ಸ್: ಫೈವ್ ಸ್ಪೀಡ್

ಬ್ರೇಕ್:
ಹಿಂದೆ: 255 ಎಂಎಂ ಡಿಸ್ಕ್ ಬ್ರೇಕ್
ಮುಂದೆ: 310 ಎಂಎಂ ಡಿಸ್ಕ್

ಮೈಲೇಜ್: 26 kmpl
ಇಂಧನ ಟ್ಯಾಂಕ್: 12 ಲೀಟರ್

ಸಸ್ಪೆನ್ಷನ್
ಮುಂದೆ: ಟೆಲಿಸ್ಕಾಪಿಕ್
ಹಿಂದೆ: ಟ್ವಿನ್ ಶಾಕ್ ಅಬ್ಸಾರ್ಬರ್

ಸಿಂಗಲ್ ಪೊಡ್ ಬಹು ಕ್ರಿಯಾತ್ಮಕ ಇನ್ಸ್ಟ್ರುಮೆಂಟ್ ಡಿಸ್‌ಪ್ಲೇ ಜೊತೆಗೆ ಹ್ಯಾಂಡಲ್‌ನಲ್ಲಿ ಕ್ರಿಯಾತ್ಮಕ ಕೀ ಜೋಡಿಸಲಾಗಿದೆ. ಸುರಕ್ಷತೆಗೂ ಹೆಚ್ಚಿನ ಗಮನ ಹರಿಸಲಾಗಿದ್ದು, ಸ್ವಿಚಬಲ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ರೈಡ್ ಬೈ ವೈರ್ ವ್ಯವಸ್ಥೆಯನ್ನು ಹೊಂದಿರಲಿದೆ.

ಪ್ರತಿಸ್ಪರ್ಧಿಗಳು: ಡುಕಾಟಿ ಸ್ಕ್ರ್ಯಾಂಬ್ಲರ್ ಶ್ರೇಣಿಯ ಅರ್ಬನ್ ಎಂಡ್ಯುರೊ ಮತ್ತು ಡೆಸರ್ಟ್ ಸ್ಲೆಡ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ