ಆ್ಯಪ್ನಗರ

Vespa SXL 150: ವೆಸ್ಪಾದಿಂದ ಭಾರತಕ್ಕೆ ಬಿಎಸ್‌6 ಸ್ಕೂಟರ್‌

ಇಟಲಯ ವಾಹನ ತಯಾರಕ ಕಂಪೆನಿಯಾದ ವೆಸ್ಪಾವು ಇದೀಗ ಭಾರತೀಯ ಸ್ಕೂಟರ್‌ ಮಾರುಕಟ್ಟೆಗೆ ಬಿಎಸ್‌6 ನಿಬಂಧನೆಯನ್ನೊಳಗೊಂಡ ಸ್ಕೂಟರ್‌ನ್ನು ಪರಿಚಯಿಸಿದೆ. ಬಿಎಸ್‌ 4 ನಿಬಂಧನೆಯ ವೆಸ್ಪಾ ಎಸ್‌ಎಕ್ಸ್‌ಎಲ್‌ 150 ಸ್ಕೂಟರ್‌ನ್ನು ಹೊಸದಾಗಿ ರೂಪಾಂತರಗೊಳಿಸಿ ಬಿಎಸ್‌6 ಮಾದರಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಇದರ ವಿನ್ಯಾಸದಲ್ಲಿ ಮಾತ್ರವಲ್ಲದೇ ಬೆಲೆಯಲ್ಲೂ ಕೂಡ ಹೆಚ್ಚಾಗಬಹುದೆಂಬ ನಿರೀಕ್ಷೆಯಿದೆ.

TNN & Agencies 2 Dec 2019, 6:22 pm
ವೆಸ್ಪಾವು ಇಟಲಿ ಬ್ರ್ಯಾಂಡ್‌ ಸ್ಕೂಟರ್‌ ಆಗಿದ್ದು, ಇದನ್ನು ಪಿಯಾಜ್ಜಿಯೋ ಕಂಪೆನಿಯು ಉತ್ಪಾದಿಸುತ್ತದೆ. ವೆಸ್ಪಾವು 1946 ರಿಂದ ಸ್ಕೂಟರ್‌ನ್ನು ಮಾರುಕಟ್ಟೆಗೆ ಪರಿಚಯಿಸಲು ಆರಂಭಿಸಿದೆ. ಪಿಯಾಜ್ಜಿಯೋ ಸ್ವಾಧೀನದ ಏಳು ಕಂಪೆನಿಗಳಲ್ಲಿ ಒಂದಾದ ವೆಸ್ಪಾವು ಇದೀಗ ಬಿಎಸ್‌6 ನಿಬಂಧನೆಯನ್ನೊಳಗೊಂಡ ವೆಸ್ಪಾ ಎಸ್‌ಎಕ್ಸ್‌ಎಲ್‌ 150ಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
Vijaya Karnataka Web Vespa SXL150
ಬಿಎಸ್‌4 ನಿಂದ ಬಿಎಸ್‌6 ನಿಬಂಧನೆಗೆ ರೂಪಾಂತರಗೊಂಡ ವೆಸ್ಪಾದ ಮೊದಲ ಸ್ಕೂಟರ್‌


ಬಿಎಸ್‌ 6 ನಿಬಂಧನೆಯೊಂದಿಗೆ ಭಾರತಕ್ಕೆ ಮೊದಲು ಕಾಲಿಟ್ಟ ವೆಸ್ಪಾದ ಸ್ಕೂಟರ್‌ ಇದಾಗಿದೆ. ನೋಡಲು ಹೈಸ್ಪೆಕ್‌ನಂತಿರುವ ವೆಸ್ಪಾ ಎಸ್‌ಎಕ್ಸ್‌ಎಲ್‌ 150ಯು ಈ ಮೊದಲೇ ವಾಹನ ಮಾರುಕಟ್ಟೆಯಲ್ಲಿದ್ದರೂ ಕೂಡ ಇದು ಬಿಎಸ್‌6 ನಿಬಂಧನೆಗೆ ಒಳಗಾಗಿರಲಿಲ್ಲ ಆದರೆ ಇದೀಗ ಭಾರತೀಯ ಗ್ರಾಹಕರು ಬಿಎಸ್‌6 ನಿಬಂಧನೆಯೊಂದಿಗೆ ಖರೀದಿಸಬಹುದಾಗಿದೆ. ಕಾರ್ಬುರೇಟರ್‌ ವ್ಯವಸ್ಥೆಯಲ್ಲಿದ್ದ ಎಸ್‌ಎಕ್ಸ್‌ಎಲ್‌ 150 ಬೈಕ್‌ನ್ನು ಇಂಧನ ಇಂಜೆಕ್ಷನ್‌ಗೆ ಪರಿವರ್ತಿಸಲಾಗಿದೆ.

KTM: ಅಕ್ಟೋಬರ್‌ ತಿಂಗಳಿನ ಬೈಕ್‌ ಮಾರಾಟದಲ್ಲಿ ಗಣನೀಯ ಏರಿಕೆ.
ಎಸ್‌ಎಕ್ಸ್‌ಎಲ್‌ 150 ಸ್ಕೂಟರ್‌ನ್ನು ಕ್ರೋಮ್‌ ಕವರ್‌ನೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ ಹಾಗೂ ಇದರ ಎಕ್ಸಾಸ್ಟ್‌ ವ್ಯವಸ್ಥೆಯನ್ನು ಕೂಡ ಮರುವಿನ್ಯಾಸಗೊಳಿಸಲಾಗಿದೆ. ಇದರ ಎಕ್ಸಾಸ್ಟ್‌ನ ತುದಿಯು ಕೆಳಮುಖವಾಗಿದ್ದು, ಸ್ಕೂಟರ್‌ಗೆ ಫ್ಯಾನ್ಸಿ ಲುಕ್‌ನ್ನು ನೀಡಿದೆ. ಬಿಎಸ್‌4 ನಿಬಂಧನೆಯ ಎಸ್‌ಎಕ್ಸ್ಎಲ್‌ 150 ಸ್ಕೂಟರ್‌ 10.9 ಎನ್‌ಎಂ ಟಾರ್ಕ್‌ನ್ನು ಹಾಗೂ 10.03 ಹೆಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತಿತ್ತು ಆದರೆ ಬಿಎಸ್‌6 ನಿಬಂಧನೆಯ ಈ ಬೈಕ್‌ ಎಷ್ಟು ಶಕ್ತಿಯನ್ನು ಹಾಗೂ ಟಾರ್ಕ್‌ನ್ನು ಉತ್ಪಾದಿಸುತ್ತದೆ ಎಂದು ನೋಡಬೇಕಾಗಿದೆ.

ಬಿಎಸ್‌6ನಲ್ಲಿನ ಸಣ್ಣದೊಂದು ಬದಲಾವಣೆಯೆಂದರೆ ಇದರ ಸ್ಪೀಡೋಮೀಟರ್‌ ಭಾಗವು ಕಪ್ಪು ಬಣ್ಣದ ಬದಲಾಗಿ ಬಿಳಿ ಬಣ್ಣದಿಂದ ಕೂಡಿದೆ. ಬಿಎಸ್‌4 ನಿಬಂಧನೆಯ ಎಸ್‌ಎಕ್ಸ್‌ಎಲ್‌ 150 ಯ ಸ್ಪೀಡೋಮೀಟರ್‌ ಭಾಗವು ಕಪ್ಪು ಬಣ್ಣವನ್ನು ಒಳಗೊಂಡಿತ್ತು ಆದರೆ ರೂಪಾಂತರಗಳೊಂದಿಗೆ ಬಿಳಿ ಬಣ್ಣದಲ್ಲಿ ಗ್ರಾಹಕರು ನೋಡಬಹುದಾಗಿದೆ. ಇನ್ನು ಇದರ ಬಲಗಡೆಯ ಏಪ್ರಾನ್‌ನಲ್ಲಿ 150 ಬ್ಯಾಡ್ಜ್‌ನ್ನು ಕೂಡ ಅಳವಡಿಸಲಾಗಿದೆ.


ಇದರ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊರತುಪಡಿಸಿ ಚಕ್ರಗಳು, ಟೈರ್‌ಗಳು ಮತ್ತು ಸಸ್ಪೆನ್ಷನ್‌ಗಳು ಬಿಎಸ್‌4 ನಿಬಂಧನೆಯ ಎಸ್‌ಎಕ್ಸ್‌ಎಲ್‌ 150 ಅಂತೆಯೇ ಇವೆ. ಈ ಹೊಸ ರೂಪಾಂತರವನ್ನು ಪಡೆದುಕೊಂಡ ವೆಸ್ಪಾ ತನ್ನ ಬೆಲೆಯಲ್ಲೂ ಕೂಡ ಸ್ವಲ್ಪ ವ್ಯತ್ಯಾಸವನ್ನು ಪಡೆದಿದೆ. ಮಾಡೆಲ್‌ಗಳ ಆಧಾರದ ಮೇಲೆ ರೂಪಾಯಿ 15,000 ದಿಂದ 19,000ದವರೆಗೆ ಹೆಚ್ಚಾಗಬಹುದೆಂಬ ನಿರೀಕ್ಷೆಯಿದೆ.

ವೆಸ್ಪಾ ಎಸ್‌ಎಕ್ಸ್‌ಎಲ್‌ 150 ಸ್ಕೂಟರ್‌ ಭಾರತದಲ್ಲಿನ ಸ್ಕೂಟರ್‌ಗಳಲ್ಲೇ ಅಧಿಕ ಮೌಲ್ಯವನ್ನು ಹೊಂದಬಹುದೆಂದು ನಿರೀಕ್ಷಿಸಲಾಗಿದೆ. 2020ರ ಮೊದಲನೇ ತಿಂಗಳಿನಿಂದ ಈ ಸ್ಕೂಟರ್‌ನ್ನು ವಿತರಿಸಲಾಗುವುದು ಎನ್ನಲಾಗಿದೆ. ಇದು 1.08 ಲಕ್ಷದಿಂದ 1.25 ಲಕ್ಷ ರೂಪಾಯಿ ಮೌಲ್ಯವನ್ನು ಹೊಂದಿದ ಬಿಎಸ್‌4 ಸ್ಕೂಟರ್‌ಗಿಂತಲೂ ಸ್ವಲ್ಪ ಮಟ್ಟಿಗೆ ಬೆಲೆಯಲ್ಲಿ ಹೆಚ್ಚಾಗಬಹುದಾಗಿದೆ.

Benelli Leoncino250: ಮೊದಲ ಚಾಲನೆಯ ಅನುಭವ
ವೆಸ್ಪಾದ ಈ ಸ್ಕೂಟರ್‌ ಭಾರತೀಯ ಸ್ಕೂಟರ್‌ ಮಾರುಕಟ್ಟೆಗೆ ಆಗಮಿಸಿದ ವೆಸ್ಪಾದ ಮೊದಲ ಬಿಎಸ್‌6 ನಿಬಂಧನೆಯ ಸ್ಕೂಟರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದು ಮಹಾರಾಷ್ಟ್ರದಲ್ಲಿ ಮೊದಲು ಕಂಡುಬಂದಿದೆ. ಹೊಸ ರೂಪಾಂತರದಲ್ಲಿ ವಾಹನ ಮಾರುಕಟ್ಟೆಗೆ ಆಗಮಿಸಿರುವುದರಿಂದ ಹಳೆಯ ಎಸ್‌ಎಕ್ಸ್‌ಎಲ್‌150 ಗಿಂತಲೂ ಸ್ವಲ್ಪ ಮಟ್ಟಿಗೆ ಬದಲಾವಣೆಯನ್ನುಪಡೆದುಕೊಂಡಿರಬಹುದು ಎಂದು ನಿರೀಕ್ಷಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ