ಆ್ಯಪ್ನಗರ

ಹೊಸಹೊಳಲು ಲಕ್ಷ್ಮೀನಾರಾಯಣ ರಥ

ಮಂಡ್ಯ ಜಿಲ್ಲೆಯ ಹೊಸಹೊಳಲು ಎಂಬ ಸಣ್ಣ ಪಟ್ಟಣದಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನ ಸುಂದರ ಕೆತ್ತನೆಗಳಿಂದ ಕೂಡಿದ್ದು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಇಲ್ಲಿ ಮಾರ್ಚ್‌ 13ರಂದು ಲಕ್ಷ್ಮೀ ನಾರಾಯಣ ರಥೋತ್ಸವ ನಡೆಯಲಿದೆ.

Vijaya Karnataka 31 Mar 2019, 2:10 am
ಮಂಡ್ಯ ಜಿಲ್ಲೆಯ ಹೊಸಹೊಳಲು ಎಂಬ ಸಣ್ಣ ಪಟ್ಟಣಒಂದು ಕಾಲದಲ್ಲಿ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಈ ಪಟ್ಟಣದ ತುಂಬಾ ಹೊಯ್ಸಳ ಶೈಲಿಯ ವಾಸ್ತುಕಲೆಗಳೇ ಕಣ್ಣಿಗೆ ಬೀಳುತ್ತದೆ. ಸುಂದರ ಕೆತ್ತನೆಯ ಶಿಲ್ಪಗಳು, ದೇವಸ್ಥಾನದ ಅದ್ಭುತ ಒಳಾಂಗಣ ವಿನ್ಯಾಸ ಮತ್ತು ಗೋಪುರ ಕಳಶಗಳ ಅತ್ಯಾಕರ್ಷಕ ವಿನ್ಯಾಸಗಳು ಇಲ್ಲಿನ ಪ್ರಮುಖ ಆಕರ್ಷಣೆ.
Vijaya Karnataka Web hosahoalalu


ಲಕ್ಷ್ಮೀ ನಾರಾಯಣ ಮಂದಿರವನ್ನು ಕ್ರಿ.ಪೂ.1250ರಲ್ಲಿ ಹೊಯ್ಸಳರ ದೊರೆಯಾಗಿದ್ದ ವೀರ ಸೋಮೆಶ್ವರ ಕಟ್ಟಿಸಿದ ಎಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ.

ಈ ದೇವಸ್ಥಾನವು ತ್ರಿಕೂಟ ವಿನ್ಯಾಸ ಮಾದರಿಯಲ್ಲಿದೆ. ಇದಕ್ಕೆ ಮೂರು ಗೋಪುರಗಳಿದ್ದು, ಈ ಮೂರು ಗೋಪುರಗಳು ಸೇರಿ ಒಂದು ಮಂದಿರವಾಗಿದೆ. ಲಕ್ಷ್ಮೀ ನಾರಾಯಣ ಮಂದಿರದ ಮೂರು ಗೋಪುರಗಳಲ್ಲಿ ಮಧ್ಯಭಾಗದ ಗೋಪುರವು ಎತ್ತರವಾಗಿದ್ದು. ಇನ್ನುಳಿದ ಎರಡು ಗೋಪುರಗಳು ಸಮತಟ್ಟಾದ ಮೇಲ್ಛಾವಣಿ ಹೊಂದಿದೆ.

ಈ ದೇವಾಲಯದ ಆರಾಧ್ಯ ದೈವ ವಿಷ್ಣು. ವಿಷ್ಣುವಿನ ಮತ್ತೊಂದು ಹೆಸರೇ ಲಕ್ಷ್ಮೀನಾರಾಯಣ. ಅಂದರೆ ಲಕ್ಷ್ಮಿಯ ಪತಿ ಎಂದರ್ಥ. ಇದು ವೈಷ್ಣವ ಮಂದಿರವಾಗಿರುವುದರಿಂದ ಇಲ್ಲಿ ವಿಷ್ಣುವಿನ ಕೆತ್ತನೆಗಳನ್ನು ಹೆಚ್ಚು ಕಾಣಬಹುದು. ರಾಮಾಯಣ ಹಾಗೂ ಮಹಾಭಾರತದ ಕೆಲವು ಸನ್ನಿವೇಶಗಳನ್ನೂ ಇಲ್ಲಿನ ಗೋಡೆಗಳ ಮೇಲೆ ಕೆತ್ತಲಾಗಿದೆ.

ಇಲ್ಲಿನ ಗೋಪುರಗಳಲ್ಲಿ ವಿಷ್ಣುವಿನ ವಿವಿಧ ಅವತಾರಗಳನ್ನು ನೆನಪಿಸುವ ಕೆತ್ತನೆಗಳನ್ನು ಮಾಡಲಾಗಿದೆ. ಹೀಗಾಗಿ ವೇಣುಗೋಪಾಲ, ಲಕ್ಷ್ಮೀ ನಾರಾಯಣ, ಲಕ್ಷ್ಮೀನರಸಿಂಹನ ವಿಗ್ರಹಗಳನ್ನು ಗೋಪುರದ ಮಂಟಪಗಳಲ್ಲಿ ಕಾಣಬಹುದು.

ಹೋಗುವುದು ಹೇಗೆ?
ಮೈಸೂರಿನಿಂದ 61ಕಿ.ಮೀ. ಹಾಗೂ ಬೆಂಗಳೂರಿನಿಂದ 161ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಸಾಕಷ್ಟು ಬಸ್‌ ಸೌಲಭ್ಯವಿದೆ. ಖಾಸಗಿ ವಾಹನದ ಮೂಲಕವೂ ಹೋಗಿ ಬರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ