ಆ್ಯಪ್ನಗರ

ತಿರುಮಲ ಬ್ರಹ್ಮೋತ್ಸವಕ್ಕೆ ಭರದ ಸಿದ್ಧತೆ

ತಿರುಮಲ ತಿರುಪತಿಯ ಪ್ರಮುಖ ಉತ್ಸವ ಬ್ರಹ್ಮರಥೋತ್ಸವ ಸೆ.30ರಿಂದ ಒಂಬತ್ತು ದಿನಗಳ ಕಾಲ ನಡೆಯಲಿದೆ. ಈ ಬಗ್ಗೆ ಭರ್ಜರಿ ತಯಾರಿ ನಡೆದಿದ್ದು, ಇದರ ರೂಪುರೇಷೆಗಳ ಬಗ್ಗೆ ಟಿಟಿಡಿ ವಿಶೇಷ ಅಧಿಕಾರಿ ಎ.ವಿ.ಧರ್ಮಾರೆಡ್ಡಿ ಪೂರ್ವಭಾವಿ ಸಭೆ ನಡೆಸಿದರು.

Vijaya Karnataka 7 Sep 2019, 5:00 am
ತಿರುಪತಿ : ತಿರುಮಲ ತಿರುಪತಿಯ ಪ್ರಮುಖ ಉತ್ಸವ ಬ್ರಹ್ಮರಥೋತ್ಸವ ಸೆ.30ರಿಂದ ಒಂಬತ್ತು ದಿನಗಳ ಕಾಲ ನಡೆಯಲಿದೆ. ಈ ಬಗ್ಗೆ ಭರ್ಜರಿ ತಯಾರಿ ನಡೆದಿದ್ದು, ಇದರ ರೂಪುರೇಷೆಗಳ ಬಗ್ಗೆ ಟಿಟಿಡಿ ವಿಶೇಷ ಅಧಿಕಾರಿ ಎ.ವಿ.ಧರ್ಮಾರೆಡ್ಡಿ ಪೂರ್ವಭಾವಿ ಸಭೆ ನಡೆಸಿದರು.
Vijaya Karnataka Web Tirumala Brahmotsavams


ಸಭೆಯ ಬಳಿಕ ಮಾತನಾಡಿದ ರೆಡ್ಡಿ, ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮಗಳು ಒಂಬತ್ತು ದಿನ ನಡೆಯುತ್ತವೆ. ಸೆ. 30ರಂದು ಧ್ವಜಾರೋಹಣ ಇರುತ್ತದೆ. ತಿರುಮಲೆಯ ಸಾಂಪ್ರದಾಯಿಕ ಪರಂಪರೆಗೆ ಅನುಗುಣವಾಗಿ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರು ರೇಷ್ಮೆ ವಸ್ತ್ರವನ್ನು ರಾಜ್ಯಸರಕಾರದ ಪರವಾಗಿ ವೆಂಕಟೇಶ್ವರ ಸ್ವಾಮಿಗೆ ಅಂದು ಅರ್ಪಿಸಲಿದ್ದಾರೆ. ಬ್ರಹ್ಮೋತ್ಸವಕ್ಕೆ ಪೂರ್ವಭಾವಿಯಾಗಿ ಸೆ.24ರಂದು ಕೋಯಿಲ್‌ ಆಳ್ವಾರ್‌ ತಿರುಮಂಜನೋತ್ಸವ ನಡೆಯಲಿದೆ. ಸೆ.25ರ ಹೊತ್ತಿಗೆ ತಿರುಮಲೆಯಲ್ಲಿ ಎಲ್ಲ ಎಂಜಿನಿಯರಿಂಗ್‌ ರಿಲೇಟೆಡ್‌ ಕೆಲಸಗಳು ಪೂರ್ಣಗೊಳ್ಳುವಂತೆ ಸೂಚಿಸಲಾಗಿದೆ.

ಟಿಟಿಡಿಯ ಅಧೀನಕ್ಕೆ ಒಳಪಡುವ ಒಳಚರಂಡಿ ಮಂಡಳಿ, ವಿಚಕ್ಷಣಾ ಇಲಾಖೆ, ಆರೋಗ್ಯ, ಅನ್ನಪ್ರಸಾದ ಸೇರಿದಂತೆ ಎಲ್ಲ ಇಲಾಖೆಗಳು ವಾರ್ಷಿಕ ಉತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರ್ಯನಿರತವಾಗಿವೆ. ಬ್ರಹ್ಮೋತ್ಸವಕ್ಕೆ ಪೂರ್ವಭಾವಿಯಾಗಿ ಪ್ರಾಯೋಗಿಕ ಗರುಡ ಸೇವೆಯನ್ನು ಸೆ.14ರಂದು ನಡೆಸಲಾಗುವುದು ಎಂದು ಧರ್ಮಾರೆಡ್ಡಿ ತಿಳಿಸಿದರು.

ಸೆ. 20ರೊಳಗೆ ಬ್ರಹ್ಮೋತ್ಸವಕ್ಕೆ ಬೇಕಾದ ಎಲ್ಲಸಿದ್ಧತೆಗಳು ಪೂರ್ಣಗೊಳ್ಳಬೇಕು ಎಂದು ತಿಳಿಸಿದ ಅವರು, ಭಕ್ತರು ದೇವರ ಉತ್ಸವವನ್ನು ಯಾವುದೇ ರೀತಿಯ ಅಡೆತಡೆಯಿಲ್ಲದೆ ವೀಕ್ಷಿಸಲು ಬೇಕಾದ ತಯಾರಿ ನಡೆಸುವಂತೆ ನಿರ್ದೇಶನ ನೀಡಿದರು.

ಬ್ರಹ್ಮೋತ್ಸವಕ್ಕೆಂದೇ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅವರೊಂದಿಗೆ 3,500 ಶ್ರೀವಾರಿ ಸೇವಕರು ಮತ್ತು 1,000 ಸ್ಕೌಟ್‌ ಮತ್ತು ಗೈಡ್‌ಗಳು ಸಹ ಭಾಗವಹಿಸಲಿದ್ದಾರೆ. ಇವರೆಲ್ಲರೂ ಜತೆಗೂಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಯಾತ್ರಿಕರಿಗೆ ಅಗತ್ಯವಾದ ಸೌಕರ್ಯವನ್ನು ಕಲ್ಪಿಸಲಿದ್ದಾರೆ.

ಇದೇ ವೇಳೆ, ಉತ್ಸವದ ಸಂದರ್ಭದಲ್ಲಿಟಿಟಿಡಿ ರೆಸ್ಟ್‌ ಹೌಸ್‌ಗಳಲ್ಲಿನಡೆಯಬಹುದಾದ ಕಳ್ಳತನವನ್ನು ತಡೆಯಲು ವಿಶೇಷ ಕ್ರಮ ಕೈಗೊಳ್ಳುವಂತೆ ರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ನಿಟ್ಟಿನಲ್ಲಿಟಿಟಿಡಿ ಜಾಗೃತ ದಳ ಮತ್ತು ಪೊಲೀಸ್‌ ಅಧಿಕಾರಿಗಳ ಜತೆ ಅವರು ಸಮಾಲೋಚನೆ ನಡೆಸಿದರು. ಎರಡೂ ದಳಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಇಂತಹ ಸಮಸ್ಯೆಯನ್ನು ತಡೆಯಬೇಕು ಎಂದು ಸೂಚಿಸಿದರು. ವಲಯವಾರು ಟಿಟಿಡಿ ರೆಸ್ಟ್‌ ಹೌಸ್‌ಗಳ ಮೇಲೆ ನಿಗಾ ಇಡಲು ಹಿರಿಯ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ಅವರು ಹೇಳಿದರು. ಇದರ ಜತೆಗೆ ಪ್ಲಾಸ್ಟಿಕ್‌ ನಿಷೇಧವನ್ನು ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿಜಾರಿಗೆ ತರಲಾಗುವುದು ಎಂದು ಹೇಳಿದ ಅವರು, ಪ್ಲಾಸ್ಟಿಕ್‌ ಬಾಟಲ್‌ಗಳಿಗೆ ಪ ರ್ಯಾಯವಾಗಿ ಬೇರೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ