ಆ್ಯಪ್ನಗರ

ರಣಚಂಡಿ ಜಾತ್ರಾ ಮಹೋತ್ಸವ

ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಕಾವಲ್‌ ಗ್ರಾಮದಲ್ಲಿ ರಣದಮ್ಮನ (ರಣಚಂಡಿ) ಪ್ರಥಮ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ಜರುಗಿತು.

Vijaya Karnataka 6 Apr 2019, 5:00 am
ಹೊಳಲ್ಕೆರೆ :ತಾಲೂಕಿನ ತಾಳಿಕಟ್ಟೆ ಕಾವಲ್‌ ಗ್ರಾಮದಲ್ಲಿ ರಣದಮ್ಮನ (ರಣಚಂಡಿ) ಪ್ರಥಮ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ಜರುಗಿತು.
Vijaya Karnataka Web ranachandi jatra ustva
ರಣಚಂಡಿ ಜಾತ್ರಾ ಮಹೋತ್ಸವ


ಇದೇ ವೇಳೆ ಗೊರವರ ಕುಣಿತ, ದೋಣಿ ಸೇವೆ ಉತ್ಸವ ಸೇರಿದಂತೆ ನಾನಾ ಬಗೆಯ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ದೇವಿಗೆ ದೇವಾಲಯವನ್ನ ನಿರ್ಮಿಸಿದ್ದು, ಎರಡು ವರ್ಷಗಳ ಹಿಂದೆ ದೇವಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಈ ಬಾರಿ ದೇವಿಯ ಪಾದಗಳನ್ನು ಪ್ರತಿಷ್ಠಾಪಿಸಲಾಗಿದೆ.

ದೇವಿಯ ಹಿನ್ನೆಲೆ: ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಶ್ರೀ ಮಾಲತೇಶಸ್ವಾಮಿ (ಮೈಲಾರಲಿಂಗೇಶ್ವರಸ್ವಾಮಿ) ತಂಗಿ ರಣದಮ್ಮ ದೇವಿ ಎಂಬ ನಂಬಿಕೆ ಭಕ್ತರಲ್ಲಿದ್ದು, ಮಣಿ ಹಾಗೂ ಮಲ್ಲಾಸುರ ಎಂಬ ಇಬ್ಬರು ಸಹೋದರ ರಾಕ್ಷ ಸರನ್ನು ಸಂಹರಿಸಲು ದೇವಿಯನ್ನು ರೂಪಗೊಳಿಸದ್ದರು ಎಂಬ ಪ್ರತೀತಿ ಇದೆ.

ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ಪದೇ ಪದೆ ಸಂಕಷ್ಟಗಳು, ಸಮಸ್ಯೆಗಳು ತಲೆದೋರುತಿದ್ದವು. ಇದಕ್ಕಾಗಿ ಗ್ರಾಮಸ್ಥರು ದೇವಿಯ ಮೊರೆ ಹೋಗಿದ್ದರು. ತನ್ನನ್ನು ಅಲ್ಲಿ ನೆಲೆಸುವಂತೆ ಮಾಡಿದಲ್ಲಿ ಸಂಕಷ್ಟಗಳನ್ನು ಪರಿಹರಿಸುವುದಾಗಿ ದೇವಿಯ ಅಪ್ಪಣೆಯಾಗಿತ್ತು.

ಪ್ರತಿ ವರ್ಷ ದೇವರಗುಡ್ಡದಲ್ಲಿ ಏ.2ರಂದು ರಣದಮ್ಮ ದೇವಿಯ ಜಾತ್ರೆ ನಡೆಯುತ್ತದೆ. ಅದೇ ರೀತಿ ಇಲ್ಲಿಯೂ ದೇವಾಲಯ ನಿರ್ಮಿಸಿದ್ದು, ಮಂಗಳವಾರ ಜಾತ್ರೆ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ