ಆ್ಯಪ್ನಗರ

ಉಕ್ಕಡಗಾತ್ರಿ ಅಜ್ಜಯ್ಯನ ಬೆಳ್ಳಿ ರಥೋತ್ಸವ

ಹರಿಹರ ತಾಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿಶ್ರಾವಣ ಮಾಸದ ಪ್ರಯುಕ್ತ ಮೂರನೇ ಸೋಮವಾರ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ ನೂರಾರು ಭಕ್ತ ಸಮೂಹದ ನಡುವೆ ನಡೆಯಿತು.

Vijaya Karnataka 24 Aug 2019, 3:03 pm
ಮಲೆಬೆನ್ನೂರು:ಹರಿಹರ ತಾಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿಶ್ರಾವಣ ಮಾಸದ ಪ್ರಯುಕ್ತ ಮೂರನೇ ಸೋಮವಾರ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ ನೂರಾರು ಭಕ್ತ ಸಮೂಹದ ನಡುವೆ ನಡೆಯಿತು.
Vijaya Karnataka Web Ukkadagatri


ಅಜ್ಜಯ್ಯನ ಪುಣ್ಯ ತಿಥಿ ಹಾಗೂ ಬೆಳ್ಳಿ ರಥೋತ್ಸವ, ಪಾಲಿಕೋತ್ಸವ ಕಾರ್ಯಕ್ರಮಗಳು ನಡೆದವು. ಬೆಳಗಿನ ಜಾವ 4 ಗಂಟೆಗೆ ಅಜ್ಜಯ್ಯನ ಗದ್ದಿಗೆಗೆ ಮಹಾರುದ್ರಾಭಿಷೇಕ, ಗದ್ದುಗೆ ಎದುರು ಗಣೇಶ, ಪಾರ್ವತಿ, ಪರಮೇಶ್ವರರ ಮೂರ್ತಿ ಇಟ್ಟು ಪೂಜೆ ಸಲ್ಲಿಸಲಾಯಿತು.

ಪಾಲಿಕೋತ್ಸವ:ರಾತ್ರಿ ಗ್ರಾಮದ ಬೀದಿಗಳಲ್ಲಿಅಜ್ಜಯ್ಯನ ಪಾಲಿಕೋತ್ಸವ ನಡೆಯಿತು.

ಪಾಲಿಕೋತ್ಸವದ ಬೇಳೆ ರಥ ಬೀದಿಯ ವೃತ್ತದಲ್ಲಿಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿದ್ದರಿಂದ ಬಾನಂಗಳಕ್ಕೆ ಹಾರಿದ ಪಟಾಕಿಗಳು ಸಿಡಿದು ಬಣ್ಣ ಬಣ್ಣದ ಚಲುವಿನ ಚಿತ್ತಾರ ಮೂಡಿಸಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ