ಆ್ಯಪ್ನಗರ

ಶೀಘ್ರ ಕಷ್ಟ ಪರಿಹಾರಕ್ಕೆ ಆರಾಧ್ಯ ದೇವರ ಜಪಿಸಿ

ಭಗವಾನ್‌ ಶ್ರೀಕೃಷ್ಣ ಗೀತೆಯಲ್ಲಿ, 'ನಹಿ ಕಲ್ಯಾಣಕೃತ್‌ ಕಶ್ಚಿತ್‌ ದುರ್ಗತಿಂ ತಾತ ಗಚ್ಛತಿ' ಎಂಬ ಮಾತನ್ನು ಹೇಳುತ್ತಾನೆ. ಅಂದರೆ ಒಳ್ಳೆಯ ಕರ್ಮಗಳಿಗೆ ಕೆಟ್ಟ ಫಲವೆಂಬುದು ಜಗದ ನಿಯಮ ಅಲ್ಲ ಎಂಬುದು ಇದರ ಅರ್ಥ. ಅರ್ಥಾತ್‌ ಒಳ್ಳೆಯ ಕೆಲಸಕ್ಕೆ ಶುಭಫಲ ಅದರಿಂದ ಸುಖ. ಕೆಟ್ಟ ಕೆಲಸಕ್ಕೆ ಅಶುಭ ಫಲ. ಅದರಿಂದಾಗಿ ಕಷ್ಟ ದುಃಖಗಳು ಲಭಿಸುತ್ತವೆ ಎಂಬುದು ಕರ್ಮಸಿದ್ಧಾಂತದ ಆಶಯ.

Vijaya Karnataka 13 Apr 2019, 12:00 am
ಜೀವನದಲ್ಲಿ ಅನೇಕ ಬಾರಿ ಕಷ್ಟಗಳು ಎದುರಾಗುತ್ತಲೇ ಇರುತ್ತವೆ. ಒಂದು ಮುಗಿದಂತೆ ಮತ್ತೊಂದು. ಅದಕ್ಕೆ ಕೊನೆ ಇಲ್ಲವೇ ಎಂದೆಣಿಸಬಹುದು. ಕೆಲವೊಮ್ಮೆ ನಮಗೇ ಯಾಕೆ ಈ ರೀತಿಯ ಕಷ್ಟಗಳು, ನಾನು ಮಾಡಿರುವ ತಪ್ಪಾದರೂ ಏನು ಎಂದು ಚಿಂತೆಗೀಡು ಮಾಡುತ್ತದೆ. ಅವುಗಳು ತಿಂಗಳುಗಟ್ಟಲೆ ನಮ್ಮನ್ನು ಕಾಡಬಹುದು. ಕಷ್ಟಗಳ ಪರಿಹಾರಕ್ಕಾಗಿ ದೇವಾಲಯಗಳಿಗೆ ಭೇಟಿ ನೀಡಿ, ವಿಧ ವಿಧ ಪೂಜೆ ಮಾಡಿಸಿಕೊಂಡು ದೇವರ ಮೊರೆ ಹೋಗುತ್ತಾರೆ. ಆದರೂ ಪರಿಹಾರ ಮಾತ್ರ ಶೂನ್ಯ.
Vijaya Karnataka Web quick pooja


ಕರ್ಮಸಿದ್ಧಾಂತ ಎಂಬುದೊಂದಿದೆ. ಮನುಷ್ಯ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ಅನುಭವಿಸುತ್ತಾನೆ. ಸತ್ಕರ್ಮಗಳಿಗೆ ಶುಭಫಲ. ದುಷ್ಟ ಕರ್ಮಗಳಿಗೆ ದುಷ್ಟ ಫಲ. ನಾವು ಮಾಡುವ ಕರ್ಮಗಳಿಗೆ ತಕ್ಕುದಾದ ಫಲ ಆಯಾ ಜನ್ಮದಲ್ಲೇ ಸಿಗುತ್ತದೆಯೆಂಬುದು ಪ್ರಾಜ್ಞರ ನಂಬಿಕೆ.

ಭಗವಾನ್‌ ಶ್ರೀಕೃಷ್ಣ ಗೀತೆಯಲ್ಲಿ, 'ನಹಿ ಕಲ್ಯಾಣಕೃತ್‌ ಕಶ್ಚಿತ್‌ ದುರ್ಗತಿಂ ತಾತ ಗಚ್ಛತಿ' ಎಂಬ ಮಾತನ್ನು ಹೇಳುತ್ತಾನೆ. ಅಂದರೆ ಒಳ್ಳೆಯ ಕರ್ಮಗಳಿಗೆ ಕೆಟ್ಟ ಫಲವೆಂಬುದು ಜಗದ ನಿಯಮ ಅಲ್ಲ ಎಂಬುದು ಇದರ ಅರ್ಥ. ಅರ್ಥಾತ್‌ ಒಳ್ಳೆಯ ಕೆಲಸಕ್ಕೆ ಶುಭಫಲ ಅದರಿಂದ ಸುಖ. ಕೆಟ್ಟ ಕೆಲಸಕ್ಕೆ ಅಶುಭ ಫಲ. ಅದರಿಂದಾಗಿ ಕಷ್ಟ ದುಃಖಗಳು ಲಭಿಸುತ್ತವೆ ಎಂಬುದು ಕರ್ಮಸಿದ್ಧಾಂತದ ಆಶಯ.

ಆದರೆ ಜ್ಯೋತಿಷ ಶಾಸ್ತ್ರವು ನಮ್ಮ ಗ್ರಹಗತಿಗನುಗುಣವಾಗಿ ಕಷ್ಟ ಸುಖಗಳು ನಿರ್ಧರಿತವಾಗುತ್ತವೆ ಎನ್ನುತ್ತಾರೆ. ಹಾಗಾಗಿ ದೇವರು ಎಂದಿಗೂ ತನ್ನ ಭಕ್ತನ ಕೈ ಬಿಡುವುದಿಲ್ಲ. ನೇರವಾಗಿ ನಮ್ಮ ಕಷ್ಟಗಳಿಗೆ ಸ್ಪಂದಿಸದೇ ಇದ್ದರೂ ಮತ್ತಾವುದೋ ರೀತಿಯಲ್ಲಿ ಭಗವಂತನ ನಮಗೆ ನೆರವಾಗುತ್ತಾನೆ.

ಕಷ್ಟಗಳಿಂದ ಪಾರಾಗಲು ಶೀಘ್ರ ಹಾಗೂ ಸುಲಭ ಮಾರ್ಗ ಅಂದರೆ ಉಪವಾಸವಿದ್ದು ಜಪ ತಪ ಕೈಗೊಳ್ಳುವುದು. ಉಪವಾಸ ಮಾಡುವುದು ಅಂದರೆ 36 ಗಂಟೆಗಳ ಕಾಲ ನೀರು ಕೂಡಾ ಸೇವಿಸದೇ ಇರಬೇಕು. ಅದನ್ನು 'ನಿರ್ಜಲ ಉಪವಾಸ' ಎಂದು ಕರೆಯುತ್ತಾರೆ. ಆ ಸಮಯದಲ್ಲಿ ದೇವರ ಕೋಣೆಯಲ್ಲಿ ಆರಾಧ್ಯ ದೇವರ ಮೂರ್ತಿಗೆ ಪುಷ್ಪಗಳಿಂದ ಅಲಂಕಾರ ಮಾಡಿ, ದೀಪ ಹಚ್ಚಿಡಬೇಕು. ನಂತರ ಭಗವಂತನ ಅನುಗ್ರಹಕ್ಕಾಗಿ ಉಪವಾಸ ಕೈಗೊಳ್ಳುತ್ತಿದ್ದೇನೆ. ಯಾವುದೇ ರೂಪದಲ್ಲಾಗಲೀ ನನ್ನ ಕಷ್ಟಗಳನ್ನು ಪರಿಹರಿಸುವ ಎಂದು ಪ್ರಾರ್ಥಿಸಿಕೊಳ್ಳಬೇಕು. ಮರುದಿನ ಮುಂಜಾನೆವರೆಗೂ ಉಪವಾಸವಿದ್ದು ಮಧ್ಯಾಹ್ನದ ವೇಳೆಗೆ ಉಪವಾಸ ನಿಲ್ಲಿಸಬೇಕು. ಉಪವಾಸದ ಸಂದರ್ಭದಲ್ಲಿ ಜಪಮಾಲೆಯನ್ನು ಹಿಡಿದು ಆರಾಧ್ಯ ದೇವರ ಜಪ ಮಾಡಬೇಕು. ಬೆಳಗ್ಗೆ ಹಾಗೂ ಮುಸ್ಸಂಜೆ ಇಷ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ಉಪವಾಸದ ಸಂದರ್ಭದಲ್ಲಿ ಯಾವುದೇ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು. ಹೀಗೆ ಮಾಡುವುದರಿಂದ ಮುಂಬರುವ ದಿನಗಳಲ್ಲಿ ಶೀಘ್ರ ಪರಿಹಾರ ಕಂಡುಕೊಳ್ಳುವಿರಿ.

* ಅರವಿಂತ್‌ ಕೃಷ್ಣಮೂರ್ತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ