ಆ್ಯಪ್ನಗರ

ಕೊಡದಲ್ಲಿ ನೀರು ಕಂಡರೆ ಶುಭ

ಯಾವುದೇ ಕೆಲಸವನ್ನು ಆರಂಭಿಸುವುದಕ್ಕೂ ಮೊದಲು ಒಳ್ಳೆಯ ದಿನ, ಮುಹೂರ್ತ ನೋಡಿ, ಸಮಯ ನಿಗದಿ ಮಾಡುತ್ತಾರೆ. ಅದೇ ರೀತಿ ಯಾವುದಾದರೊಂದು ಕೆಲಸ ಆರಂಭಿಸುವುದಕ್ಕೂ ಮೊದಲು ಕೆಲವೊಂದು ಘಟನೆಗಳು ಸಂಭವಿಸಿದರೆ ಅದನ್ನು ಶುಭ ಅಥವಾ ಅಶುಭ ಸಂಕೇತ ಎಂದೂ ಪರಿಗಣಿಸುತ್ತಾರೆ.

Vijaya Karnataka 11 May 2019, 12:00 am
ಯಾವುದೇ ಕೆಲಸವನ್ನು ಆರಂಭಿಸುವುದಕ್ಕೂ ಮೊದಲು ಒಳ್ಳೆಯ ದಿನ, ಮುಹೂರ್ತ ನೋಡಿ, ಸಮಯ ನಿಗದಿ ಮಾಡುತ್ತಾರೆ. ಅದೇ ರೀತಿ ಯಾವುದಾದರೊಂದು ಕೆಲಸ ಆರಂಭಿಸುವುದಕ್ಕೂ ಮೊದಲು ಕೆಲವೊಂದು ಘಟನೆಗಳು ಸಂಭವಿಸಿದರೆ ಅದನ್ನು ಶುಭ ಅಥವಾ ಅಶುಭ ಸಂಕೇತ ಎಂದೂ ಪರಿಗಣಿಸುತ್ತಾರೆ. ಬಿಳಿ ಹೂವು, ನೀರು ತುಂಬಿದ ಜಾರ್‌, ಚಿನ್ನ, ಬೆಳ್ಳಿ, ಆಭರಣಗಳು, ಸಾಸಿವೆ, ಮೀನು, ಕೊಡೆ, ಬೇಳೆ ಕಂಡರೆ ಶುಭ ಎಂದು ಹಿರಿಯರು ಹೇಳುತ್ತಾರೆ.
Vijaya Karnataka Web shakuna


ಅದರಂತೆಯೇ ಮಹಿಳೆಯೊಬ್ಬಳು ಕೊಡದಲ್ಲಿ ನೀರು ತುಂಬಿಕೊಂಡು ಹೋಗುತ್ತಿರುವುದು ಕಂಡುಬಂದರೆ ಅದು ಶುಭ ಶಕುನ ಎಂದು ಹೇಳಲಾಗುತ್ತದೆ. ಮಹಿಳೆ ಲಕ್ಷ್ಮಿಯ ಸಂಕೇತ. ಹಾಗೂ ತುಂಬಿದ ಕೊಡವನ್ನು ಜ್ಞಾನಕ್ಕೆ ಹೋಲಿಕೆ ಮಾಡುವುದುಂಟು. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿದೆ. ಅಂದರೆ ಜ್ಞಾನವಂತರು ಎಂದಿಗೂ ತುಳುಕಾಡುವುದಿಲ್ಲ. ಸ್ಥಿರವಾಗಿರುತ್ತಾರೆ. ಅದಕ್ಕೆ ಹೇಳುವುದು ತುಂಬಿದ ಕೊಡ ತುಳುಕುವುದಿಲ್ಲ ಎಂದು. ಮಹಿಳೆಯೊಬ್ಬಳು ತುಂಬಿದ ಕೊಡದೊಂದಿಗೆ ಕಾಣಿಸಿಕೊಂಡಿದ್ದರೆ ಅದು ಶುಭಸಂಕೇತ ಎಂದು ಪರಿಗಣಿಸುವುದು ಇದೇ ಕಾರಣಕ್ಕೆ.

ಯಾವುದಾದರೂ ಕಾರ್ಯ ಮಾಡಲು ಹೊರಟಾಗ ಖಾಲಿ ಕೊಡ ಹಿಡಿದ ಮಹಿಳೆ ಸಿಕ್ಕಿದರೆ ಅಂದುಕೊಂಡ ಕೆಲಸ ಆಗುವುದಿಲ್ಲವಂತೆ. ಹಾಗೆಯೇ ಮನೆಯಿಂದ ಹೊರಹೋಗುವಾಗ ಪೊರಕೆ ಹಿಡಿದವರು ಎದುರು ಬಂದರೆ, ದಾರಿಯಲ್ಲಿ ಒಂಟಿ ಬ್ರಾಹ್ಮಣ ಕಾಣಿಸಿದರೆ ಅಂದುಕೊಂಡ ಕಾರ್ಯ ಕೈಗೂಡುವುದಿಲ್ಲ ಎಂದೇ ಭಾವಿಸುತ್ತಾರೆ.

ಆ ದಿನ ಮಾಡಲು ಹೊರಟ ಕಾರ್ಯವನ್ನು ಮುಂದುವರಿಸುವುದಿಲ್ಲ.

ಪರೀಕ್ಷಾ ದಿನಗಳಲ್ಲಿ ಒಂಟಿ ಬ್ರಾಹ್ಮಣ, ಬುಡುಬುಡಿಕೆಯವ ಕಾಣಿಸಿಕೊಂಡರಂತೂ ಅಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ಕಷ್ಟ ಇರುತ್ತದೆ ಎಂದುಕೊಂಡು ಅವರನ್ನು ಶಪಿಸುವುದುಂಟು.

ಇಂತಹ ನಂಬಿಕೆಗಳಿಗೆ ವೈಜ್ಞಾನಿಕ ಕಾರಣಗಳಿಲ್ಲದಿದ್ದರೂ ಅಂತಹ ನಂಬಿಕೆಯಲ್ಲಿ ಜನ ವಿಶ್ವಾಸವಿರಿಸಿಕೊಂಡಿರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ