ಆ್ಯಪ್ನಗರ

ಅಗಲಿದವರು ಕನಸಿನಲ್ಲಿ ಕಾಣಿಸಿಕೊಂಡರೆ ಶುಭ

ಪದೇಪದೆ ಕಾಡುವ ಅವರ ನೆನಪು ಎಷ್ಟು ಗಾಢವಾಗಿರುತ್ತದೆ ಅಂದರೆ ಕನಸಿನಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಹಾಗೆ ಕಾಣಿಸಿಕೊಳ್ಳುವುದನ್ನು ಶಕುನ ಎಂದು ಪರಿಗಣಿಸುವುದುಂಟು.

Vijaya Karnataka 13 Apr 2019, 12:00 am
ಮಾನವ ಸಂಘಜೀವಿ. ಹುಟ್ಟಿದಲ್ಲಿಂದ ಉಸಿರು ನಿಲ್ಲುವವರೆಗೆ ಅನೇಕ ವ್ಯಕ್ತಿಗಳೊಂದಿಗೆ ಒಡನಾಟ ಇದ್ದೇ ಇರುತ್ತದೆ. ಕುಟುಂಬದಲ್ಲಿ ತಂದೆ, ತಾಯಿ, ಒಡಹುಟ್ಟಿದವರು ಎಲ್ಲರ ಮಮತೆಯಲ್ಲಿರುವ ನಮಗೆ ಒಂದರ್ಥದಲ್ಲಿ ಅವರೇ ಬದುಕಿಗೆ ಆಸರೆಯಾಗಿರುತ್ತಾರೆ. ಮಾತ್ರವಲ್ಲ ತಂದೆ ತಾಯಿ ಪ್ರತಿಯೊಬ್ಬರ ಬದುಕಿಗೂ ದೊಡ್ಡ ಆಸ್ತಿ ಇದ್ದಂತೆ. ತಮ್ಮ ಮಕ್ಕಳ ಶ್ರೇಯಸ್ಸನ್ನೇ ಬಯಸುವ ಅವರು ಅನೇಕ ಕನಸುಗಳನ್ನು ಕಂಡಿರುತ್ತಾರೆ ಕೂಡಾ. ಅವರ ಜತೆಗೆ ಹೆಚ್ಚು ಸಮಯವನ್ನು ಕಳೆದಿರುತ್ತೇವೆ. ಹಾಗಾಗಿ ಅವರೊಂದಿಗಿನ ಬಾಂಧವ್ಯವೂ ಅದೇ ರೀತಿ ಇರುತ್ತದೆ. ಆದರೆ ಒಂದಲ್ಲ ಒಂದು ದಿನ ಎಲ್ಲರನ್ನು ಅಗಲಲೇಬೇಕು. ಅದು ಜಗದ ನಿಯಮ.
Vijaya Karnataka Web shakuna belief in the supernatural is a common trait of humanity all over the world e
ಅಗಲಿದವರು ಕನಸಿನಲ್ಲಿ ಕಾಣಿಸಿಕೊಂಡರೆ ಶುಭ


ಆದರೆ ನಮ್ಮನಗಲಿದವರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಹೀಗೆ ಕೆಲವೊಮ್ಮೆ ಪದೇಪದೆ ಕಾಡುವ ಅವರ ನೆನಪು ಎಷ್ಟು ಗಾಢವಾಗಿರುತ್ತದೆ ಅಂದರೆ ಕನಸಿನಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಹಾಗೆ ಕಾಣಿಸಿಕೊಳ್ಳುವುದನ್ನು ಶಕುನ ಎಂದು ಪರಿಗಣಿಸುವುದುಂಟು.

ನಮ್ಮನಗಲಿದ ತಂದೆ-ತಾಯಿ ಕನಸಿನಲ್ಲಿ ಕಾಣಿಸಿಕೊಂಡರೆ, ಅವರ ಜತೆ ಮಾತನಾಡಿದಂತೆ ಕನಸು ಕಂಡರೆ ಮುಂದಿನ ದಿನಗಳಲ್ಲಿ ಒಳಿತಾಗುತ್ತದೆ ಎನ್ನುವ ನಂಬಿಕೆ ಇದೆ. ಅಂದರೆ ನಮ್ಮ ಬದುಕಿನ ಶ್ರೇಯಸ್ಸಿಗೆ ಅವರು ಆಶೀರ್ವಾದ ನೀಡಿದಂತೆ. ಅದರಿಂದಾಗಿ ಬದುಕಿನಲ್ಲಿ ಕಂಡ ಕನಸು ನನಸಾಗುವುದು ಎಂದು ನಂಬುತ್ತಾರೆ.

ತೀರಿ ಹೋದ ತಂದೆ ತಾಯಿಗಳ ಬಗ್ಗೆ ಹೆಚ್ಚು ಯೋಚನೆ ಮಾಡುವುದರಿಂದಲೂ ಹೀಗಾಗಬಹುದು. ಅವರು ಇದ್ದಾಗ ಅವರ ಜತೆ ಸಮಯ ಕಳೆಯಲಾಗಲಿಲ್ಲ, ಅವರ ಬಯಸಿದ್ದನ್ನು ಪೂರೈಸಲಾಗಲಿಲ್ಲ ಎನ್ನುವ ಪಶ್ಚಾತ್ತಾಪ ಕೂಡಾ ಕೆಲವೊಮ್ಮೆ ಇಂತಹ ಕನಸು ಬೀಳುವುದಕ್ಕೆ ಕಾರಣವಾಗಿರಬಹುದೇನೋ?.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ