ಆ್ಯಪ್ನಗರ

ಕೂದಲುದುರುವ ಸಮಸ್ಯೆಗೆ ಸರಳ ಪರಿಹಾರ

ಕೆಲವರಿಗೆ ಪದೇ ಪದೇ ಕೂದಲು ಉದುರುತ್ತದೆ. ಕೂದಲು ಉದುರುವಿಕೆಗೆ ಕಾರಣವೇನು?

Vijaya Karnataka 8 Nov 2019, 3:39 pm
ಕೆಲವರಿಗೆ ಪದೇ ಪದೇ ಕೂದಲು ಉದುರುತ್ತದೆ. ಕೂದಲು ಉದುರುವಿಕೆಗೆ ಕಾರಣವೇನು?
Vijaya Karnataka Web lico

ಒಂದು ಅಧ್ಯಯನದಂತೆ ಕೂದಲು ಉದುರುವಿಕೆಗೆ ದೇಹದಲ್ಲಿನ ಹಾರ್ಮೋನು ಬದಲಾವಣೆ, ಸಕ್ಕರೆ ಕಾಯಿಲೆಯಲ್ಲಿ ಏರುಪೇರು, ಮಾನಸಿಕ ಒತ್ತಡ, ತಲೆಯಲ್ಲಿ ವಿಪರೀತ ಹೊಟ್ಟು , ಪೌಷ್ಟಿಕಾಂಶದ ಕೊರತೆ, ಹೇರ್‌ಡೈನಂತ ರಾಸಾಯನಿಕ ಪದಾರ್ಥಗಳ ಬಳಕೆ ಕಾರಣವಾಗುತ್ತದೆ. ಕೆಲವೊಮ್ಮೆ ಕೂದಲು ಉದುರುವಿಕೆ ಅನುವಂಶೀಯತೆಯೂ ಕಾರಣ ಆಗಿರಬಹುದು.

ತಡೆಗಟ್ಟುವುದು ಹೇಗೆ?
ಒಣಗಿದ ತಲೆಯನ್ನು ಪದೇ ಪದೇ ಶಾಂಪು ಮತ್ತಿತರ ಸೋಪಿನ ದ್ರಾವಕದಿಂದ ತೊಳೆಯುತ್ತಿದ್ದರೆ ಕೂದಲು ಉದುರುತ್ತದೆ. ಮುಖ್ಯವಾಗಿ ನಾವು ಬಳಸುವ ಶಾಂಪುವಿನಲ್ಲಿ ಸಲ್ಫೇಟ್‌, ಪ್ಯಾರಬೆನ್‌ ಮತ್ತು ಸಿಲಿಕಾನ್‌ ಅಂಶ ಹೆಚ್ಚಾಗಿ ಇರಬಾರದು. ಉತ್ತಮವಾದ ಕಂಡೀಷನರ್‌ಗಳನ್ನೇ ಬಳಸಬೇಕು. ಉತ್ತಮವಾದ ಕಂಡೀಷನರ್‌ಗಳಲ್ಲಿ ಅಮೈನೋ ಆ್ಯಸಿಡ್‌ ಇರುತ್ತದೆ. ಅಮೈನೋ ಆ್ಯಸಿಡ್‌ ಕೂದಲ ಪೋಷಣೆಗೆ ನೆರವಾಗುತ್ತದೆ. ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮುಖ್ಯವಾಗಿ ಆಹಾರ ಸೇವನೆಯಲ್ಲಿ ಎಚ್ಚರವಿರಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಪ್ರತಿನಿತ್ಯ ತಲೆಗೆ ಎಣ್ಣೆ ಹಚ್ಚುವುದರಿಂದ ನೆತ್ತಿಯಲ್ಲಿ ರಕ್ತ ಸಂಚಲನೆ ಸುಧಾರಣೆಯಾಗುತ್ತದೆ. ಕೂದಲಿನ ಬುಡಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ದೊರೆಯುತ್ತವೆ. ಲಿಕೋರೈಸ್‌ ರೂಟ್‌ ತುಂಬಾ ಎಫೆಕ್ಟೀವ್‌ ಆಗಿ ಕೆಲಸ ಮಾಡುತ್ತದೆ. ಲಿಕೋರೈಸ್‌ ರೂಟ್‌ ಬಳಸುವುದರಿಂದ ಕೂದಲು ಉದುರುವಿಕೆ ತಡೆಗಟ್ಟಬಹುದು. ತಲೆಯ ಹೊಟ್ಟಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಲಿಕೋರೈಸ್‌ ರೂಟ್‌ಗಳನ್ನು ಚೆನ್ನಾಗಿ ಅರೆದುಕೊಳ್ಳಿ. ಅದಕ್ಕೆ ಕೇಸರಿ ಬೆರೆಸಿ. ಒಂದು ಕಪ್‌ ಹಾಲನ್ನು ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿಕೊಂಡು ದೋಸೆ ಹಿಟ್ಟಿನಂತೆ ರುಬ್ಬಿಕೊಳ್ಳಿ. ಹೀಗೆ ತಯಾರಾದ ಮಿಶ್ರಣವನ್ನು ನೆತ್ತಿಗೆ ಬಳಿದುಕೊಳ್ಳಿ. ಒಂದು ರಾತ್ರಿಯಿಡೀ ನೆನೆಯಲು ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಪುನರಾವರ್ತಿಸುವುದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ